2022: ಕಂಪ್ಯೂಟರ್‌ ಸೈನ್ಸ್‌ನಲ್ಲಿ ಜಗತ್ತಿನ ಮೊದಲ ಲಿಬರಲ್‌ ಎಂಜಿನಿಯರಿಂಗ್‌ ಪದವಿ ನೀಡಲು ವೇಗವಾಗಿ ಬೆಳೆಯುತ್ತಿರುವ ಎಡ್ಯುಟೆಕ್‌ ಕಂಪನಿಯಾದ ಕಲ್ವಿಯು ಲವ್ಲಿ ಪ್ರೊಫೆಷನಲ್‌ ಯೂನಿವರ್ಸಿಟಿ ಜತೆ ಒಪ್ಪಂದ ಮಾಡಿಕೊಂಡಿದೆ. ಎಂಜಿನಿಯರಿಂಗ್‌ನ ವಿಷಯಗಳನ್ನು ಕೆಲಸದ ಅನುಭವದೊಂದಿಗೆ ಜೋಡಿಸುವ ಮೂಲಕ ಲಿಬರಲ್‌ ಎಜ್ಯುಕೇಷನ್‌ ನೀಡಲಾಗುತ್ತದೆ. ಈ ವಿಧಾನದಲ್ಲಿ ವಿದ್ಯಾರ್ಥಿಗಳು ವೈಯಕ್ತಿಕ ಮತ್ತು ವೃತ್ತಿಪರ ಕೌಶಲ್ಯ, ವಿಧಾನಗಳನ್ನು ಅಭಿವೃದ್ಧಿಪಡಿಸಿಕೊಂಡು ಬಲಿಷ್ಠ ಸಾಫ್ಟ್‌ವೇರ್‌ ಎಂಜಿನಿಯರಿಂಗ್‌ ವೃತ್ತಿಪರರಾಗಿ ಮಾತ್ರವಲ್ಲದೆ ಭವಿಷ್ಯದ ಸಿಟಿಒ, ಸಿಇಒ ಮತ್ತು ಟೆಕ್‌ ಉದ್ಯಮಿಗಳಾಗಿ ಬೆಳೆಯಲು ಅಗತ್ಯವಿರುವ ಶಿಕ್ಷಣವನ್ನು ನೀಡಲಾಗುತ್ತದೆ. ಮೊತ್ತಮೊದಲ ಬಾರಿ ರೂಪಿಸಿರುವ ʻಕೆಲಸದೊಂದಿಗೆ ಸಂಯೋಜಿತವಾಗಿರುವ ಎಂಜಿನಿಯರಿಂಗ್‌ ಶಿಕ್ಷಣʼವು ವಿದ್ಯಾಥಿಗಳು ವಾಸ್ತವಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು, ಭಿನ್ನ ಯೋಚನೆ, ಸೃಜನಶೀಲತೆ,ನಾಯಕತ್ವ ಇತ್ಯಾದಿ ವಿಚಾರಗಳಲ್ಲಿ ತಿಳಿವಳಿಕೆ ಬೆಳೆಸಿಕೊಳ್ಳಲು ಒತ್ತು ನೀಡುತ್ತದೆ.

ʻತಂತ್ರಜ್ಞಾನ ಅಭಿವೃದ್ಧಿಗೆ ವೇಗ ಸಿಕ್ಕಿರುವುದರಿಂದ ಕಂಪ್ಯೂಟರ್‌ ಸೈನ್ಸ್‌ ಪದವಿಯು ಇಂದು ಅತ್ಯಂತ ಬೇಡಿಕೆಯುಳ್ಳ ಕೋರ್ಸ್‌ ಆಗಿದೆ; ಆದರೆ, ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಇಂಡಸ್ಟ್ರಿಯಲ್ಲಿ ಕೆಲಸ ಮಾಡಲು ಸಿದ್ಧವಾಗುವ ರೀತಿಯಲ್ಲಿ ತಯಾರಾಗುತ್ತಿಲ್ಲ. ಇದೇವೇಳೆ, ಉದ್ಯೋಗದಾತರು ಅವರನ್ನು ಕುಶಲ ಕೆಲಸಗಾರರಾಗಿ ರೂಪಿಸಲು ಬಹಳಷ್ಟು ಸಮಯ ಮತ್ತು ಹಣವನ್ನು ವೆಚ್ಚ ಮಾಡಬೇಕಾಗಿದೆ. 

ಅದಕ್ಕೆ ಪರಿಹಾರ ಒದಗಿಸುವ ಉದ್ದೇಶದಿಂದ ಲಿಬರಲ್‌ ಎಂಜಿನಿಯರಿಂಗ್‌ ಪ್ರೋಗ್ರಾಮ್‌ ವಿದ್ಯಾರ್ಥಿಗಳಿಗೆ ತತ್ವಶಾಸ್ತ್ರ ಮತ್ತು ಕಲಾ ವಿಷಯಗಳನ್ನೂ ಪರಿಚಯಿಸುವ ಮೂಲಕ ಅವರು ಥಿಯರಿ ಆಧಾರಿತ ಕಲಿಕೆಯಲ್ಲಿ ಎಲ್ಲವನ್ನೂ ಕುರುಡಾಗಿ ಒಪ್ಪಿಕೊಳ್ಳುವ ಬದಲು ಸಹಜವಾಗಿಯೇ ʻಏಕೆʼ ಎಂದು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.  ಕೆಲಸ-

ಸಂಯೋಜಿತ ಲಿಬರಲ್‌ ಎಂಜಿನಿಯರಿಂಗ್‌ ಅವರ ತಾಂತ್ರಿಕ ತಿಳಿವಳಿಕೆಯನ್ನು ಬೆಳೆಸಿಕೊಳ್ಳಲು ಮತ್ತು ಅದನ್ನು ಅದ್ಭುತವಾಗಿ ಅನುಷ್ಠಾನಗೊಳಿಸಲು ಸಹ ಸಹಾಯ ಮಾಡುತ್ತದೆ. ಇದು ಒಂದು ತಂಡವಾಗಿ ಸಮಸ್ಯೆಯ ಮೂಲವನ್ನು ಪತ್ತೆ ಮಾಡಿ, ಅದಕ್ಕೆ ಪರಿಹಾರ ಕಂಡುಕೊಳ್ಳಲು ಭವಿಷ್ಯದ ಅಸಾಧಾರಣ ನಾಯಕರನ್ನು ಸೃಷ್ಟಿಮಾಡಲು ಸಹ ಸಹಾಯ ಮಾಡುತ್ತದೆʼ ಎಂದು ಶ್ರೀ ರಾಜೇಶ್‌ ಕುಮಾರ್‌ ಬಿ. ಸ್ಥಾಪಕರು- ಕಲ್ವಿ ಅವರು ಹೇಳಿದರು.