ನಂಜನಗೂಡು: ನಗರದ ಲಿಂಗಣ್ಣ ಛತ್ರದಲ್ಲಿ ಆಶ್ರಯಪಡೆದಿರುವ ನಿರ್ಗತಿಕರಿಗೆ ನಗರಸಭೆಯಿಂದ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
ಈಗಾಗಲೇ ಲಿಂಗಣ್ಣ ಛತ್ರದಲ್ಲಿ ನಗರಭೆಯಿಂದ ನಿರ್ಗತಿಕರ ಆಶ್ರಯ ಕೇಂದ್ರ ತೆರೆಯಲಾಗಿದ್ದು, ಇಲ್ಲಿ ಸುಮಾರು ಎಪ್ಪತೈದು ನಿರ್ಗತಿಕರು ಆಶ್ರಯ ಪಡೆದಿದ್ದಾರೆ. ಇಲ್ಲಿಗೆ ನಗರಸಭೆ ಅಧ್ಯಕ್ಷ ಮಹದೇವ ಸ್ವಾಮಿ ಮತ್ತು ನಗರಸಭೆ ಆಯುಕ್ತ ರಾಜಣ್ಣ. ಮತ್ತು ಅಧಿಕಾರಿಗಳು ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿದರಲ್ಲದೆ, ಅಗತ್ಯವಿರುವ ದಿನನಿತ್ಯಬಳಕೆಯ ವಸ್ತುಗಳಾದ ಸೋಪು, ಬ್ರ್ರೆಸ್. ಹೊದಿಕೆ. ಮಾಸ್ಕ್‌ಗಳನ್ನು ವಿತರಿಸಿದರು.
ಈ ವೇಳೆ ಆಶ್ರಯ ಪಡೆದಿರುವ ನಿರ್ಗತಿಕರೊಂದಿಗೆ ಪ್ರತಿದಿನ ಊಟದ ವ್ಯವಸ್ಥೆ, ಸ್ವಚ್ಛತೆ, ಆರೋಗ್ಯ ತಪಾಸಣೆ ಕುರಿತಂತೆ ಕೆಲವು ನಿಮಿಷಗಳ ಕಾಲ ಚರ್ಚೆ ನಡೆಸಲಾಯಿತು. ಈ ವೇಳೆ ನಗರಸಭೆಯ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ನಿರ್ಗತಿಕರು ಯಾವುದೇ ರೀತಿ ತೊಂದರೆ ಇಲ್ಲ ಸರಿಯಾದ ಸಮಯಕ್ಕೆ ಊಟದ ವ್ಯವಸ್ಥೆ ಇರುವುದಾಗಿ ಹೇಳಿದರು.
ಇದೇ ಸಂದರ್ಭ ನಗರಸಭೆಯ ಇಂಜಿನಿಯರ್ ಶ್ರೀನಿವಾಸ್. ನಗರಸಭೆ ಉಪಾಧ್ಯಕ್ಷ ನಾಗಮಣಿ ಶಂಕರಪ್ಪ. ನಗರಸಭೆ ಸದಸ್ಯರಾದ ಮಾದೇವ ಪ್ರಸಾದ್, ಬಸವಣ್ಣ, ರಂಗಸ್ವಾಮಿ, ಶ್ರೀಕಂಠಸ್ವಾಮಿ, ಪಕ್ಷದ ಮುಖಂಡರಾದ ಶ್ರೀಕಂಠ, ಮುರುಗೇಶ್, ಸತೀಶ್ ಗೌಡ ಇತರರಿದ್ದರು.