ಭಾರತರತ್ನ ಲತಾ ಮಂಗೇಶ್ಕರ್ ಮತ್ತು ಎಸ್.ಪಿ ಬಾಲಸುಬ್ರಹ್ಮಣ್ಯಂ ಮತ್ತು ಕಲಾತಪಸ್ವಿ ರಾಜೇಶ್ ರವರಿಗೆ ಮತ್ತೆ ಹಾಡಿತು ಕೋಗಿಲೆ ಮೂಲಕ ಗೀತನಮನ ಕಾರ್ಯಕ್ರಮ ತ್ಯಾಗರಾಜ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಪಾತಿ ಫೌಂಡೇಶನ್ ವತಿಯಿಂದ ದಿನಾಂಕ ೨೫/೨/೨೦೨೨ರ ಶುಕ್ರವಾರ ಸಂಜೆ ೫ಘಂಟೆಗೆ ಚಾಮುಂಡಿಪುರಂ ಬಳಿಯಿರುವ ಶ್ರೀ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಮತ್ತೆ ಹಾಡಿತು ಕೋಗಿಲೆ ಸಂಗೀತ ಕಾರ್ಯಕ್ರಮದ ಮೂಲಕ ಭಾರತರತ್ನ ಲತಾ ಮಂಗೇಶ್ಕರ್ ಮತ್ತು ಪದ್ಮಶ್ರೀ ಪುರಸ್ಕೃತರಾದ ಎಸ್.ಪಿ ಬಾಲಸುಬ್ರಹ್ಮಣ್ಯಂ ಮತ್ತು ಕಲಾತಪಸ್ವಿ ರಾಜೇಶ್ ರವರಿಗೆ ಗೀತನಮನ ಅರ್ಪಿಸಲಾಗುವುದು,

ಎಸ್.ಪಿ.ಬಿ ಮತ್ತು ಲತಾ ಮಂಗೇಶ್ಕರ್ ರವರು ಹಾಡಿರುವ ಮತ್ತು ರಾಜೇಶ್ ನಟಿಸಿರುವ ಚಿತ್ರದ ಹಾಡುಗಳನ್ನು ಚಂದನ ಶ್ರೀನಿವಾಸ್ ರವರ ತಂಡದ ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ, ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಸಂಜೆ ೫ರೊಳಗೆ ಕಲಾಪ್ರೇಕ್ಷಕರು ಆಸೀನರಾಗಿರಬೇಕು, ಮತ್ತು ಈ ಸಂಗೀತ ಕಾರ್ಯಕ್ರಮದ ಮೂಲಕ ೬೦ಕ್ಕೂ ಹೆಚ್ಚು ವಿಶೇಷಚೇತನ ಮಕ್ಕಳಿಗೆ ಸಹಾಯಧನ ನೀಡಲಾಗುವುದು.
ಸಾರ್ವಜನಿಕರಲ್ಲಿ ಹಳೆಯ ಚಿತ್ರಗೀತೆ ಮತ್ತು ಸಂಗೀತ ಎಷ್ಟು ಪ್ರಾಭಾವ ಬೀರಿತ್ತು ಎಂದರೆ ಸಂಸ್ಕೃತಿ ಸಂಸ್ಕಾರ ಬೆಳೆಯುತ್ತಿದ್ದವು, ದೇಶಪ್ರೇಮ ಬ್ರಾತೃತ್ವ ದೈವಭಕ್ತಿ ಸುಖ ಸಂಸಾರಕ್ಕೆ ಉತ್ತಮ ಸಂದೇಶ ನೀಡುತ್ತಿದ್ದವು ಅಂತಹ ಸಾಲಿನಲ್ಲಿ ಲತಾ ಮಂಗೇಶ್ಕರ್ ರವರು ಎಸ್.ಪಿಬಿ ರವರ ಗಾಯನದ ಹಾಡುಗಳು ಕಲಾತಪಸ್ವಿ ರಾಜೇಶ್ ನಟಿಸಿರುವ ಚಿತ್ರಗಳು ಮನಮುಟ್ಟುತ್ತವೆ ನಟನೆ ಸಂಗೀತಕ್ಕಾಗಿ ತಮ್ಮ ಜೀವನವನ್ನೇ ಅರ್ಪಣೆ ಮಾಡಿದ ಮೂರು ಮಹನ್ ಕಲಾವಿದರ ಸ್ಮರಿಸಿವುದಕ್ಕಾಗಿ ನಮ್ಮ ಪಾತಿ ಫೌಂಡೇಶನ್.ಮತ್ತೆ ಹಾಡಿತು ಕೋಗಿಲೆ ಕಾರ್ಯಕ್ರಮ ಆಯೋಜಿಸಿದೆ ಎಂದರು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಎಲ್ ನಾಗೇಂದ್ರ, ಚಲನಚಿತ್ರ ನಟರಾದ ಮಂಡ್ಯ ರಮೇಶ್ ,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್ ವಿ ರಾಜೀವ್ , ಮಹಾಪೌರರಾದ ಸುನಂದಾ ಪಾಲನೇತ್ರ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ,ಮಾಜಿ ಅಧ್ಯಕ್ಷರಾದ ಡಾ? ವೈ ಡಿ ರಾಜಣ್ಣ ,ಚಂದ್ರಶೇಖರ್ , ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ, ಹಾಗೂ ನಗರ ಪಾಲಿಕೆ ಸದಸ್ಯರುಗಳು ಮತ್ತು ಕಲಾವಿದರು ಇನ್ನಿತರರು ಭಾಗವಹಿಸಲಿದ್ದಾರೆ