ಚಾಮರಾಜನಗರ: ಜಿಲ್ಲೆಯ ಎಲ್ಲ ಕಡೆಯೂ ಜಾನಪದ ಕಲಾವಿದರಿದ್ದು, ಜಿಲ್ಲೆಯ ಜಾನಪದದ ತವರೂರು ಆಗಿರುವ ಜತೆಗೆ ಪ್ರಕೃತಿಸಂಪತ್ತಿನ ನೆಲೆವೀಡಾಗಿದ್ದು, ಎಲೆಮರೆಯ ಕಾಯಿಯಂತೆ ಇರುವ ಅನೇಕ ಸಾಹಿತಿಗಳು, ಕವಿಗಳನ್ನು ಗುರುತಿಸಿ ಸನ್ಮಾನಿಸುವ ಕೆಲಸವಾಗಬೇಕಿದೆ ಎಂದು ಜಿಪಂ ಲೆಕ್ಕಾಧಿಕಾರಿ ಎಚ್.ಎಸ್.ಗಂಗಾಧರ್ ಹೇಳಿದರು.
ವ?ದ ಕವಿತೆ-೨೦೨೨ಗೆ ಆಯ್ಕೆ ಹಾಗೂ ‘ಕನ್ನಡ ನುಡಿ ಸೇವಕ -೨೦೨೨” ರಾಜ್ಯಪ್ರಶಸ್ತಿ ಪಡೆದ ಮಂಗಳಾ ವೇಣುಗೋಪಾಲ್ ಅವರನ್ನು ಎಸ್ಪಿ ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಕಲಾವೇದಿಕೆ ವತಿಯಿಂದ ನಗರದ ರಾಮಸಮುದ್ರ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದ ಸರಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತ್ಯಾಸಕ್ತರನ್ನು ಗುರುತಿಸಿ ಪ್ರಶಸ್ತಿ ನೀಡಿ, ಗೌರವಿಸುತ್ತಿರುವುದು ಅಭಿನಂದನೀಯ. ಕೆಲಸದ ಒತ್ತಡದ ನಡುವೆಯೂ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವುದು ಪ್ರಶಂಸನೀಯ ಎಂದು ತಿಳಿಸಿದರು.
ಸನ್ಮಾನಸ್ವೀಕರಿಸಿದ ಮಂಗಳಾ ವೇಣುಗೋಪಾಲ್ ಮಾತನಾಡಿ, ನಾನು ಹತ್ತನೇ ತರಗತಿ ಓದುವಾಗಲೇ ಬರೆಯುವುದೆಂದರೆ ಏನೋ ಒಂದು ರೀತಿಯ ಹಂಬಲ. ಕಾಲೇಜಿಗೆ ಹೋದಾಗಲೂ ಬರೆಯುವ ಹಂಬಲ ಹೆಚ್ಚಾಯಿತು. ನಂತರ ನನ್ನ ಪತಿ ವೇಣುಗೋಪಾಲ್ ಅವರು ಸಾಹಿತ್ಯ ಅಭಿರುಚಿ ಹೊಂದಿದ್ದ ನನ್ನನ್ನು ಕನ್ನಡ ಸಾಹಿತ್ಯ ಪರಿ?ತ್ತಿನ ಅಜೀವ ಸದಸ್ಯರನ್ನಾಗಿ ಮಾಡಿದರು.
ಜೊತೆಗೆ ಕನ್ನಡ ಸಾಹಿತ್ಯ ಪರಿ?ತ್ತು ಸಮಿತಿಯಲ್ಲಿ ಜಿಲ್ಲಾ ಸಮಿತಿಯಲ್ಲಿ ಸೇವೆ ಸಲ್ಲಿಸಿದ ಭಾಗ್ಯ ನನಗೆ ಲಭಿಸಿತು. ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ, ಕವಿಗೋಷ್ಠಿಗಳಲ್ಲಿ, ದಸರಾ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದರ ಫಲ ಕನ್ನಡ ಸೇವಕ ಪ್ರಶಸ್ತಿ ಬರಲು ಸಾಧ್ಯವಾಯಿತು ಎಂದರು.
ಇಂತಹ ಹೃದಯಸ್ಪರ್ಶಿ ಕಾರ್ಯಕ್ರಮ ಆಯೋಜಿಸಿ ಪ್ರೋತ್ಸಾಹಿಸಿದ ಎಸ್.ಪಿ.ಬಾಲಸುಬ್ರಮಣ್ಯಂ ಗಾನಗಂಧರ್ವ ಕಲಾವೇದಿಕೆಯ ಪದಾಧಿಕಾರಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ, ಹಿರಿಯ ಕಲಾವಿದೆ ಪದ್ಮಶ್ರೀ, ಎಸ್.ಪಿ. ಬಾಲಸುಬ್ರಮಣ್ಯಂ ಗಾನಗಂಧರ್ವ ಕಲಾವೇದಿಕೆ ಗೌರವಾಧ್ಯಕ್ಷ ಸುರೇಶ್, ಅಧ್ಯಕ್ಷ ಎಚ್.ಎಂ. ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎಸ್. ಮುತ್ತುರಾಜ್, ಸಂಘಟನಾ ಕಾರ್ಯದರ್ಶಿ ಜಯರಾಜ್, ನಿರ್ದೇಶಕರಾದ ಮೂರ್ತಿ, ಪ್ರದೀಪ್, ಗಂಗರಾಜು, ಎಚ್.ಎಂ.ನಾಗರಾಜು, ಪತ್ರಕರ್ತ ಪ್ರಕಾಶ್ ಬೆಲ್ಲದ್, ಮಹದೇವಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.