ಮೈಸೂರು:- ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಮೈಸೂರಿನ ಮಿನು ಶರಣ್ ಹಾಗೂ ವಿಭಾ ಶ್ರೀನಿವಾಸನ್ ಎಂಬುವವರು 20.000 ರೂ ಪಾವತಿಸಿ ಫ್ಲೆಮಿಂಗೊ ಅನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿರುತ್ತಾರೆ.
ಬೆಂಗಳೂರಿನ ಮಾನ್ವಿ ಕಿರಣ್ ಎಂಬುವವರು 3,500 ರೂ ಪಾವತಿಸಿ ಬಿಳಿ ನವಿಲು, ಬೆಂಗಳೂರಿನ ಬಿ.ಪಿ.ಆಶಾ ರಾಣಿ ಎಂಬುವವರು 7,000ರೂ. ಪಾವತಿಸಿ ಕಾಳಿಂಗ ಸರ್ಪ-2ಅನ್ನು ಹಾಗೂ ಶ್ರೀನಿವಾಸ್ ರಾಮನಾಥನ್ ಎಂಬುವವರು 10.000 ರೂ. ಪಾವತಿಸಿ ನೀಲಗಿರಿ ಲಂಗೂರ್‍ಅನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿರುತ್ತಾರೆ.
ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯ ನಿರ್ವಹಣೆಗೆ ಕೈ ಜೋಡಿಸಿದ ಎಲ್ಲರಿಗೂ ಮೃಗಾಲಯವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By admin