ಚಾಮರಾಜನಗರ: ಕೋವಿಡ್-19 ರ ನಿಯಮವನ್ನು ಉಲ್ಲಂಘಿಸಿ ಪುತ್ರನಿಗೆ ಅದ್ಧೂರಿ ವಿವಾಹ ಮಾಡಿದ ಆರೋಪದ ಹಿನ್ನಲೆಯಲ್ಲಿ ಜಿಪಂ ಸದಸ್ಯನ ವಿರುದ್ಧ ತಡವಾಗಿ ರಾಮಾಪುರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
ರಾಮಾಪುರ ಕ್ಷೇತ್ರದ ಜಿಪಂ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಬಸವರಾಜು ಹಾಗೂ ಕಲ್ಯಾಣ ಮಂಟಪದ ಮಾಲೀಕ ರಾಜೇಂದ್ರ ರವರ ವಿರುದ್ಧವೂ ಹನೂರು ತಹಶೀಲ್ದಾರ್ ನಾಗರಾಜು ನೀಡಿದ ದೂರಿನ ಮೇರೆಗೆ ದೂರು ದಾಖಲಾಗಿದೆ. ವಿವಾಹ ನಡೆದು ಇಪ್ಪತ್ತು ದಿನಗಳ ಬಳಿಕ ಪ್ರಕರಣ ದಾಖಲು ಮಾಡಿರುವುದು ಸಂಶಯಕ್ಕೆ ಕಾರಣವಾಗಿದೆ.
ಕಳೆದ ಏಪ್ರ್ರಿಲ್ 24 ಮತ್ತು 25 ರಂದು ಎರಡು ದಿನಗಳ ಕಾಲ ಜಿಪಂ ಸದಸ್ಯ ಬಸವರಾಜು ಅವರು ತಮ್ಮ ಪುತ್ರ ಮಹದೇವಪ್ರಸಾದ್‌ನ ವಿವಾಹವನ್ನು ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಡೆಸಿದ್ದರು. ಈ ಬಗ್ಗೆ ದೂರುಗಳು, ಟೀಕೆಗಳು ಬಂದ ಹಿನ್ನಲೆಯಲ್ಲಿ ತಡವಾಗಿ ತಹಸೀಲ್ದಾರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

By admin