ಎಂಜಿನಿಯರ್ ಆಗುವ ಆಸೆ ಬಿಟ್ಟವ, ಇಂದು ಮಾದರಿ ಕೃಷಿಕ :ಸಮಗ್ರ ಕೃಷಿ ಮೂಲಕ ಲಾಭ
ಮೈಸೂರು.ನವೆಂಬರ್: ಎಂಜಿನಿಯರಿಂಗ್ ಓದಿ ಎಂಜಿನಿಯರ್ ಆಗಲು ಹೊರಟವ ಅನ್ನದಾತನಾದ ಕಥೆಯಿದು!. ಐದು ದಶಕಗಳ ಹಿಂದೆ ಅಣ್ಣಾವ್ರ ಸಿನಿಮಾ ‘ಬಂಗಾರದ ಮನುಷ್ಯ’ ನೋಡಿ ಸಾಕಷ್ಟು ಮಂದಿ ನಗರದಿಂದ ವಾಪಸ್ಸು ತಮ್ಮ ಗ್ರಾಮಕ್ಕೆ ತೆರಳಿ ಕೃಷಿ ಆರಂಭಿಸಿದರು. ಕೊರೊನಾ ಪರಿಣಾಮದಿಂದಾ ಹೇರಲಾದ ಲಾಕ್ಡೌನ್ನಿಂದ ಒಂದಿಷ್ಟು ಯುವಕರು ಹಳ್ಳಿಗೆ ವಾಪಸ್ಸಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಅದೇ ರೀತಿ ಎಂಜಿಯರ್ ಆಗುವ ಆಸೆ ಬಿಟ್ಟು ಕೃಷಿಯೇ ನಮ್ಮ ಮೂಲ ಎಂದು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ರಾಮೇನಹಳ್ಳಿ ಗ್ರಾಮದ ಮಹೇಶ್ ಸಾಯವಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. 35ವರ್ಷದ ಮಹೇಶ್ ಕಳೆದ 15 ವರ್ಷಗಳಿಂದ ಕೃಷಿಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.
ತಮ್ಮಗಿರುವ 20 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮೂಲಕ ಯಶಸ್ವಿಯಾಗಿರುವ ಮಹೇಶ್ ವಾರ್ಷಿಕವಾಗಿ ಅಂದಾಜು 2 ಲಕ್ಷ ರೂ. ಲಾಭಗಳಿಸುತ್ತಾರೆ. ಜೊತೆಗೆ ಹೈನುಗಾರಿಕೆ, ಮೀನುಗಾರಿಕೆ ಮತ್ತು ಜೇನು ಸಾಕಣಿಕೆ ಅವರ ಕೈ ಹಿಡಿದಿದೆ. ಈ ಮೂಲಕ ಮಾದರಿ ಯುವಕರಿಗೆ ಮಾದರಿಯಾಗಿದ್ದಾರೆ.
ಬಾಲ್ಯದಿಂದಲೇ ಪ್ರಾಕೃತಿ ಮತ್ತು ಕೃಷಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಮಹೇಶ್ ಎಂಜಿನಿಯರ್ ಆಗಿ ಸಾದನೆ ಮಾಡಬೇಕೆಂದು ಎಂಜಿನಿಯರಿಂಗ್ ಪದವಿ ಸೇರ್ಪಡೆಯಾದರು. ಎಂಜಿನಿಯರ್ ಆಗಬೇಕೆಂಬ ಆಸೆಗಿಂತ, ಕೃಷಿಯೇ ಮೇಲು ಎಂದು ಕೃಷಿಗೆ ಆಕರ್ಷಿತರಾದರು. ನೈಸರ್ಗಿಕ ಕೃಷಿ ಆರಂಭಿಸಿದರು. ಆರಂಭದ ದಿನಗಳಲ್ಲಿ ನಿರೀಕ್ಷಿಸಿದ ಆದಾಯ ಗಳಿಸಿಲು ಸಾಧ್ಯವಾಗದಿದ್ದಾಗ, ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಮೂಲಕ ಸಮಗ್ರ ಮತ್ತು ಸಾವಯವ ಕೃಷಿ ಕಡೆ ಗಮನ ಹರಿಸಿದರು.
ಜಮೀನಿನಲ್ಲಿ 4 ಎಕರೆಯಲ್ಲಿ ರೇμÉ್ಮ, 4 ಎಕರೆಯಲ್ಲಿ 208 ತೆಂಗಿನ ಮರಗಳು, 2 ಎಕರೆಯಲ್ಲಿ ನೆಂದ್ರೆಬಾಳೆ ಹಣ್ಣು, ಏಲಕ್ಕಿ, ಪಚ್ಚಬಾಳೆ, 1 ಎಕರೆಯಲ್ಲಿ ವಿಳ್ಯೆದ ಎಲೆ, 50 ಸಪೆÇೀಟ ಮರ, 50 ಕ್ಕಿಂತ ಹೆಚ್ಚಿನ ಹಲಸು, ಬೀಟೆಹುಣ್ಣೆ, ಹೆಬ್ಬೆವು ಮತ್ತು ಕಹಿಬೇವು ಮರಗಳು, ರಾಗಿ, ಜೋಳ, ಭತ್ತ, ಶುಂಠಿ, ತರಕಾರಿ, ಹೂ ಸೇರಿದಂತೆ ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕೃಷಿ ಇಲಾಖೆ ವತಿಯಿಂದ 21 ಮೀಟರ್ ಉದ್ದದ 3 ಕೃಷಿಹೊಂಡಗಳನ್ನು ನಿರ್ಮಿಸಿ ಮಳೆನೀರನ್ನು ಸಂಗ್ರಹಿಸಿ ಕೃಷಿ ಮೂಡುವ ಜೊತೆಗೆ ಮೀನು ಸಾಕಣಿಕೆ ಮಾಡುತ್ತಿದ್ದಾರೆ.
ಮೀನು ಸಾಕಣಿಕೆಯಿಂದ 10 ಲಕ್ಷ ಲಾಭ: 20 ಜೇನು ಸಾಕಣಿಕೆ, 12 ಹಸು ಸಾಕಣಿಕೆ ಹಾಗೂ 4 ಎಕರೆಯಲ್ಲಿ ಮೀನು ಸಾಕಣಿಕೆ ಮಾಡುತ್ತಿದ್ದಾರೆ. ಇಷ್ಟಕೆ ಸೀಮಿತವಾದ ಮಹೇಶ್ ‘ಹೊನ್ನೇರು ಮೀನುಮರಿ ಪಾಲನಾ ಕೇಂದ್ರ’ ವನ್ನು ಸ್ಥಾಪಿಸಿ ಎಂಟು ವರ್ಷಗಳಿಂದ ನಡೆಸುತ್ತಿದ್ದಾರೆ. ಮೀನುಗಾರಿಕೆ ಇಲಾಖೆ ವತಿಯಿಂದ ಕಬಿನಿಯಲ್ಲಿ ಮೀನುಮರಿಗಳನ್ನು ಖರೀದಿಸಿ ಅವುಗಳನ್ನು ತಮ್ಮ ಮೀನಿನ ತೊಟ್ಟಿಯಲ್ಲಿ ಬೆಳೆಸಿ ಮಾರಾಟ ಮಾಡುತ್ತಾರೆ. ಇಲ್ಲಿ ಕಾಟ್ಲಾ, ರೇವು, ಹುಲ್ಲುಗೆಂಡೆ, ಬ್ರಿಗಲ್, ಸಮಂತಗೆಂಡೆ ಹಾಗೂ ಮುಂತಾದ ಮೀನು ಸಾಕಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಇಲ್ಲಿಯವರೆಗೆ 10 ಲಕ್ಷ ವರೆಗೆ ಆದಾಯ ಗಳಿಸಿದ್ದಾರೆ.
ಸಮಸ್ಯೆಗೆ ನೈಸರ್ಗಿಕ ಪರಿಹಾರ: ಕೃಷಿ ಸಮಸ್ಯೆಗೆ ನೈಸರ್ಗಿಕ ಪರಿಹಾರ ಹುಡುಕುವ ಮಹೇಶ್, ನೈಸರ್ಗಿಕ ಗೊಬ್ಬರ ಬಳಸುತ್ತಾರೆ. ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳುತ್ತಾರೆ.ಇಲಿಗಳು ಬೆಳೆಗಳನ್ನು ನಾಶ ಮಾಡುವುದನ್ನು ಹಾಗೂ ಮೀನುಗಳನ್ನು ಕಪ್ಪೆಗಳು ತಿನ್ನುವುದನ್ನು ತಡೆಗಟ್ಟಲು ಹೊಲದಲ್ಲಿ ಮತ್ತು ಮೀನು ಸಾಕಣಿಕೆ ತೋಟಿಗೆ ಸ್ವತಃ ತಾವೇ ಹಿಡಿದ ಹಾವುಗಳನ್ನು ಬಿಟ್ಟಿದ್ದಾರೆ. ಈ ಮೂಲಕ ಬೆಳೆ ರಕ್ಷಣೆ ಮಾಡುತ್ತಿದ್ದಾರೆ. ಇದುವರೆಗೂ ಒಟ್ಟು 200 ಹಾವುಗಳನ್ನು ಹಿಡಿದು ತಮ್ಮ ಜಮೀನಿನಲ್ಲಿ ಬಿಟ್ಟಿಕೊಂಡು ತಾವು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
‘‘ಪಕ್ಷಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಜಮೀನಿನಲ್ಲಿ ಆಲದ ಮರ ಮತ್ತು ಚೇರಿಮರಗಳನ್ನು ಬೆಳೆಸಿದ್ದಾರೆಯಾವುದೇ ಬೆಳೆಗಳನ್ನು ಬೆಳೆಯುವ ಮೊದಲೇ ಬೆಳೆಯ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುತ್ತೇನೆ. ಇದಕ್ಕಾಗಿ ನಿತ್ಯ 4 ಗಂಟೆಗಳ ಕಾಲ ಅಧ್ಯಯನ ಮಾಡುತ್ತೇನೆ. ರಾಸಾಯನಿಕ ಗೊಬ್ಬರ ಹಾಕದೆ ಮಣ್ಣಿನ ಲವತ್ತತೆ ಹೆಚ್ಚಿಸಲು ಪ್ರಯತ್ನಿಸುತ್ತೇನೆ. ಹಸು ಸಗಣಿ, ಕೋಳಿ ಮತ್ತು ಮೀನು ಸಾಕಣಿಕೆಯಿಂದ ದೊರೆಯುವ ತ್ಯಾಜ್ಯದಿಂದ ಗೊಬ್ಬರ ತಯಾರಿಸಿ ಬಳಸುತ್ತಾರೆ. ಕಳೆದ 12 ವರ್ಷಗಳಿಂದಲೂ ಸಹ ಯಾವುದೇ ರಾಸಯನಿಕ ಗೊಬ್ಬರಗಳನ್ನು ಸಿಂಪಡಿಸಿಲ್ಲ,’’ ಎನ್ನುತ್ತಾರೆ ಮಹೇಶ್.
ಪ್ರಶಸ್ತಿ ಸನ್ಮಾನ: ಸತತ ಐದು ವರ್ಷಗಳಿಂದಲೂ ಸಾವಾಯವ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯುತ್ತಿರುವುದನ್ನು ಗುರುತಿಸಿದ ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಸಂಸ್ಥೆಯು ‘ಯುವ ಕೃಷಿಕ’ ಎಂದು ಪ್ರಶಸ್ತಿ ನೀಡಿ ಗೌರವಿಸಿದೆ. 2014 ಮತ್ತು 2019ರ ರೈತ ದಸರಾದಲ್ಲಿ ಉತ್ತಮ ಕೃಷಿಕ ಪ್ರಶಸ್ತಿ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಉತ್ಸಾಹಿ ಯುವ ಕೃಷಿಕ’ ಎಂದು ಗೌರವಿಸಲಾಗಿದೆ. ಜನಧ್ವನಿ ಬಾನುಲಿ ಕೇಂದ್ರ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಇವರ ಸಾಧನೆ ಗುರುತಿಸಿ ಸನ್ಮಾನಿಸಿವೆ.
ಯುವಕರಿಗೆ ಸ್ಪೂರ್ತಿ: ಆಸಕ್ತ ರೈತರು, ಅನೇಕ ಸಂಘ-ಸಂಸ್ಥೆಗಳು ಹಾಗೂ ಹೊರ ಜಿಲ್ಲೆ, ರಾಜ್ಯಗಳಿಂದ ಬಂದ ರೈತರುಗಳಿಗೆ ಇವರಿಂದ ಸಲಹೆ ಪಡೆಯುತ್ತಾರೆ. ಅಲ್ಲದೆ ರಾಮೇನಹಳ್ಳಿಯ ಸುತ್ತಮುತ್ತಲಿನ ರೈತರಿಗೆ ಸ್ಪೂರ್ತಿಯಾಗಿದ್ದಾರೆ. ‘‘ಏಕಬೆಳೆ ಪದ್ದತಿ ತ್ಯಜಿಸಿ ಬಹುಬೆಳೆ ಮತ್ತು ಮಿಶ್ರಬೆಳೆ ಪದ್ದತಿಯಿಂದ ನಷ್ಟವಿಲ್ಲದೆ ಸಾಕಷ್ಟು ಲಾಭಗಳಿಸಬಹುದು. ರಾಸಾಯನಿಕ ಮುಕ್ತವಾದ ಸಾವಯವ ಕೃಷಿ ಪದ್ದತಿ ಅನುಸರಿಸುವುದರಿಂದ ಯಾವ ರೈತನು ಯಾವುದೇ ಕಾರಣಕ್ಕೂ ಆತ್ಮಹತ್ಯೆಯ ದಾರಿ ತುಳಿಯುವುದಿಲ್ಲ. ಇದಕ್ಕೆ ನಾನೇ ಉದಾಹರಣೆ,’’ ಹಾಗೂ ‘‘ಬೆಲೆ ಆಧಾರಿತ ಬೆಳೆಗಳು ಮತ್ತು ಕುಟುಂಬ ನಿರ್ವಹಣೆಗೆ ಬೇಕಾಗುವ ಬೆಳೆ ಬೆಳೆದು ಮೌಲ್ಯವರ್ಧಿತ ಬೆಲೆಗಳಿಗೆ ಮಾರಾಟ ಮಾಡಬೇಕು,’’ ಎಂದು ಹೇಳುತ್ತಾರೆ ಯುವಕೃಷಿಕ ಮಹೇಶ್. ಹೆಚ್ಚಿನ ಮಾಹಿತಿಗಾಗಿ; 9845748514