ಶಿಕ್ಷಕರ ದಿನಾಚರಣೆಯಂದು ಗುರು ಪದಕ್ಕೆ ಅನ್ವರ್ಥ ವಾಗಿದ್ದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರಿಗೊಂದು ನುಡಿನಮನ. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅತ್ಯುನ್ನತ ಕೊಡುಗೆಗಳಾದ ರೈಲ್ವೆ ಹಾಗೂ ಅಂಚೆ ಮತ್ತು ತಂತಿ ವ್ಯವಸ್ಥೆಗಳ ಹಾಗೆಯೇ || ಶಿಮ್ಲಾದ ವೈಸರಾಯ್ ನಿವಾಸವೂ ಕೂಡ ಒಂದು ಅವಿಸ್ಮರಣೀಯ ಕೊಡುಗೆಯಾಗಿದೆ. ಭಾರತದ ಅಂದಿನ ವೈಸರಾಯ್ | ಗಳು ಶಿಮ್ಲಾದ ಈ ಹಿಮಗಿರಿಧಾಮವನ್ನು ಬೇಸಿಗೆಯ ರಾಜಧಾನಿಯನ್ನಾಗಿ ಮಾಡಿಕೊಂಡು, ಆ ರಮಣೀಯ ಪ್ರಕೃತಿಯ | ಮಡಿಲಲ್ಲಿ ಸ್ಥಾಪಿಸಿದ್ದ. ಈ ವಿಸ್ಮಯ ವಾಸ್ತುಶಿಲ್ಪದ ಮರದರಮನೆಯಲ್ಲಿ ವರ್ಷದ 7 ತಿಂಗಳುಗಳ ಕಾಲ ವಾಸಿಸುತ್ತಿದ್ದರು .
ಅಂದು ವೈಸೀಗಲ್ ಲಾಡ್’ ಎಂಬ ಹೆಸರಿನಿಂದ ಪ್ರಖ್ಯಾತವಾಗಿದ್ದ ಈ ವಿಶ್ರಾಂತಿಧಾಮವು ಸ್ವಾತಂತ್ರ್ಯಾನಂತರ ರಾಷ್ಟ್ರಪತಿ ನಿವಾಸ” ಎಂದು ಮರುನಾಮಕರಣ ಗೊಂಡಿತ್ತು. ಇದರ ಪೂರ್ವ ಪಶ್ಚಿಮಗಳಲ್ಲಿ ನಯನ ಮನೋಹರವಾಗಿ ತಲೆಯೆತ್ತಿ – ನಿಂತ ಹಿಮಶಿಖರಗಳಿಂದ ಅಲಂಕೃತವಾದ ಪರ್ವತಗಳಿಂದ ಹರಿಯುವ ಮಳೆ ನೀರು ಒಂದು ಕಡೆ ಬಂಗಾಳಕೊಲ್ಲಿಯನ್ನು ಸೇರಿದರೆ, ಇನ್ನೊಂದೆಡೆ ಅರಬ್ಬಿ ಸಮುದ್ರವನ್ನು ಸೇರುತ್ತದೆ. ನೂರಾರು ಎಕರೆಗಳಷ್ಟು ಹಚ್ಚಹಸುರಿನ ಪರಿಸರದಲ್ಲಿ ಎದ್ದುನಿಂತಿರುವ ಈ ಕಟ್ಟಡದ ಬಾಹ್ಯ ಸೌಂದರ್ಯವು ವಸಾಹತುಶಾಹಿ ಕಾಲದ ಯಾವ ಬೃಹತ್ ನಿರ್ಮಾಣಕ್ಕೂ ಕಡಿಮೆ ಇಲ್ಲ. ಹುಲ್ಲಿನ ಹಾಸುಗಳು ರಾಷ್ಟ್ರಪತಿ ನಿವಾಸದ ಸುತ್ತಲೂ ವರ್ತುಲಾಕಾರದಲ್ಲಿ ಹರಡಿದ್ದು, ಅದರ ನಡುವಿನ ವರ್ತುಲದಲ್ಲಿ ಬೆರಗುಗೊಳಿಸುವ ಬಣ್ಣ ಬಣ್ಣದ ಹೂಗಿಡಗಳು ಮನಮೋಹಕವಾಗಿವೆ, ಹೊರಾಂಗಣದ ಉದ್ದಕ್ಕೂ ಚಿನಾರ್ | ಮರಗಳ ಸಾಲು ಹಬ್ಬಿಕೊಂಡಿದೆ. ಮೋಡವಿಲ್ಲದ ಬಾನಿನ ಹಿನ್ನೆಲೆಯಲ್ಲಿ ಪಶ್ಚಿಮಕ್ಕೆ ಕಾಣುವ ಸಟ್ಲಜ್ ನದಿಯ ಹರಿವು ಕಲಾವಿದರಿಗೆ ಸ್ಫೂರ್ತಿದಾಯಕವಾದರೆ, ಸಾಮಾನ್ಯರನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತವೆ. ಹಿಂದೊಮ್ಮೆ ಇಲ್ಲಿ ತಂಗಲು ಬಂದಿದ್ದ ಲಾರ್ಡ್ ಕರ್ಜನ್ನನ ಪತ್ನಿ ಮೇರಿಯು ಅರಮನೆಯ ವೈಭವವನ್ನು ಕಂಡು,”ಇದು ಕ್ಷುದ್ರತೆಯ ಸಂಕೇತವಾದ ಒಬ್ಬ ಮಿನಿಯಾಪೋಲಿಸ್ ಕೋಟ್ಯಾಧೀಶನ ಸೌಧದಂತಿದೆ” ಎಂದವಳು ಕಿಟಕಿಗಳ ಮೂಲಕ ಕಂಡ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿ,
“ಬೇಕಾದರೆ ಈ ಕಿಟಕಿಗಳ ಮೂಲಕ ಹೊರಗಡೆಯ ಸೌಂದರ್ಯವನ್ನು ನೋಡುತ್ತಲೇ ನಾನು ಐದು ವರ್ಷ ಕಳೆದು ಬಿಡುತ್ತೇನೆ” ಎಂದು ಹೇಳಿದ್ದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿವೆ, ಮತ್ತೊಬ್ಬ ಬ್ರಿಟಿಷ್ ವೈಸರಾಯರ ಪತ್ನಿ ಲೇಡಿ ಡಫರಿನ್ ಶಿಮ್ಲಾದ ಸುಂದರ ಕ್ಷಣಗಳಲ್ಲಿ ತಲ್ಲೀನರಾಗಿದ್ದಾಗ ಇಲ್ಲಿನ ನಿಲ್ಲದ ತುಂತುರು ಹನಿ, ಮೋಡಗಳು, ಬೆಟ್ಟಗಳು ಹಾಗೂ ಕತ್ತಲು-ಬೆಳಕಿನ ಕಣ್ಣಮುಚ್ಚಾಲೆಗಳು ಒಟ್ಟಾಗಿ ಸೇರಿ ವೈಭವೋಪೇತ ಪರಿಣಾಮಗಳನ್ನು ಉಂಟುಮಾಡುತ್ತವೆ’ ಎಂದು ಉದ್ಗರಿಸಿದ್ದೂ ಇದೆ. | ಸ್ವಲ್ಪವೇ ದೂರದ ಬಯಲು ಪ್ರದೇಶದಲ್ಲಿ ಮಹಾನದಿಯೊಂದು ವಿಸ್ತಾರವಾಗಿ ಹರಿಯುತ್ತಿದೆ. ಅನೇಕ ಆಕಾರಗಳಲ್ಲಿ
ತಲೆಯೆತ್ತಿ ನಿಂತ ಬೆಟ್ಟದ ಸಾಲುಗಳ ಕೆಲವು ಭಾಗಗಳು ವರ್ಣರಂಜಿತವಾಗಿ ಕಂಗೊಳಿಸುತ್ತಿದ್ದರೆ, ಆಗಸದಲ್ಲಿ ಹತ್ತಿಯ | ಗೋಪುರಗಳಂತೆ ತೇಲಾಡುತ್ತಿರುವ ಹಾಗೂ ಕಣಿವೆಗಳಲ್ಲಿ ಬೆಚ್ಚಗೆ ಕವುಚಿ ಕುಳಿತಿರುವ ಮೋಡಗಳು ಮಿಕ್ಕ ಭಾಗಗಳನ್ನು | | ಸ್ವಲ್ಪ ಮಬ್ಬಾಗಿಸುತ್ತವೆ. ಇದರೊಂದಿಗೆ ಸೂರ್ಯಾಸ್ತಮಾನದ ಅನುಸಂಧಾನವು ದಿಗಂತವನ್ನು ಗಾಢ ಕೆಂಪು, ಚಿನ್ನದ ರಂಗು |

ಹಾಗೂ ತಿಳಿ ನೀಲಿ ಬಣ್ಣಗಳಿಂದ ತುಂಬಿಸಿದಂತಿರುತ್ತದೆ. ಭಾರತದ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ದಿನಗಳಲ್ಲಿ ನಡೆದ ಅನೇಕ ಮಹಾಸಭೆಗಳು ಈ ಅರಮನೆಯಲ್ಲೇ | ನಡೆಯಿತೆಂಬುದು ಉಲ್ಲೇಖಾರ್ಹವಾಗಿದೆ. ಸ್ವಾತಂತ್ರ್ಯ ಚಳುವಳಿಯ ಅಂತಿಮ ಘಟ್ಟದಲ್ಲಿ, 1945-46 ರಲ್ಲಿ ಕಾಂಗ್ರೆಸ್ ಪಕ್ಷ | ಹಾಗೂ ಮುಸ್ಲಿಂ ಲೀಗ್ ಗಳ ನಡುವೆ ಲಾರ್ಡ್ ವೇವೆಲ್ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಗೆ ಈ ಅರಮನೆಗೆ ವೇದಿಕೆಯಾಗಿತ್ತು. ನಂತರ ಶ್ರೀಮತಿ ಇಂದಿರಾಗಾಂಧಿ ಹಾಗೂ ಬುಟ್ಟೋ ರವರು ಸಹಿಹಾಕಿದ ಶಿಮ್ಲಾ ಒಪ್ಪಂದ ಕೂಡ ಈ | ಕಟ್ಟಡದ ಪ್ರಮುಖ ಸಭಾಭವನದಲ್ಲೇ ನಡೆದದ್ದು. ಹಾಗೆಯೇ ಲಾರ್ಡ್ ಮೌಂಟ್ ಬ್ಯಾಟನ್ ರವರ ಜೊತೆ ನಡೆದ ಅನೇಕ | ಮಹತ್ವದ ಸಭೆಗಳಿಗೂ ವೈರಿಗಲ್ ನಿವಾಸ ಸಾಕ್ಷಿಯಾಗಿದೆ. ಈಗಲೂ ಸಹ ಕಟ್ಟಡ ವೀಕ್ಷಣೆಗೆಂದು ಪ್ರವಾಸಿಗರನ್ನು | ಕರೆದೊಯ್ಯುವ ಮಾರ್ಗದರ್ಶಿಗಳು ಅಲ್ಲಿರುವ ಬೀಟೆಮರದ ಒಂದು ಸುಂದರ ದುಂಡುಮೇಜನ್ನು ತೋರಿಸುತ್ತಾ ಅದರ | ಮಧ್ಯೆ ಇರುವ ಸೀಳಿನ ಬಿರುಕಿಗೆ ಕಾಂಗ್ರೆಸ್ ಮುಸ್ಲಿಂಲೀಗ್ ಸಭೆಯಲ್ಲಿ ಜಿನ್ನಾ ರವರು ಮಾಡಿದ ಮುಷ್ಠಿ ಪ್ರಹಾರವೇ ಕಾರಣವೆಂದು ಉತ್ತೇಕ್ಷೆ ಮಾಡುವುದು ಉಂಟು, ಏನೇ ಆಗಲಿ, ಈ ಸುಂದರ ಮರದರಮನೆಯ ಒಳಾಂಗಣ ಸೌಂದರ್ಯದ ವೈಭವಕ್ಕೆ ಕಾರಣವಾಗಿರುವ ಬೀಟೆ ಹಾಗೂ ಬರ್ಮ ಟೀಕ್ ಮರಗಳಲ್ಲಿ ಮಾಡಿರುವ ಕುಶಲ ಕಲಾಕೃತಿಗಳನ್ನು ಮುಂದಿನ ತಲೆಮಾರುಗಳಿಗೆ ಉಳಿಸಲು ಕೇಂದ್ರಸರ್ಕಾರವುವಿಶೇಷಆಸಕ್ತಿಯನ್ನು ವಹಿಸಬೇಕು
| ಅನ್ನಿಸುವುದು ಸಹಜ.. |
ಮಹಾಮಹೋಪಾಧ್ಯಾಯರ ಮಹತ್ತರ ಕನಸಿನ ಕೂಸು: | | ನಮ್ಮದೇಶವು ಕಂಡ ಆಧುನಿಕ ದಾರ್ಶನಿಕ ಹಾಗೂ ಸಮರ್ಥ, ಆದರ್ಶ ಶಿಕ್ಷಕ ಹಾಗೂ ನಮ್ಮ ರಾಷ್ಟ್ರಪತಿಗಳಾಗಿದ್ದ ಡಾಕ್ಟರ್ | | ಸರ್ವೆಪಲ್ಲಿ ರಾಧಾಕೃಷ್ಣನ್ ರವರು ಇಂದಿನ ಚೆನ್ನೈ ರಾಜ್ಯದ ತಿರುತ್ತಣಿಯಲ್ಲಿ ಜನಿಸಿ, ಮೈಸೂರು ವಿಶ್ವವಿದ್ಯಾನಿಲಯದ
ಮಹಾರಾಜ ಕಾಲೇಜಿನಲ್ಲಿ ಶ್ರೇಷ್ಠ ಪ್ರಾಧ್ಯಾಪಕರೆನಿಸಿ,ಆಕ್ಷ್ಯರ್ಡ ವಿಶ್ವವಿದ್ಯಾನಿಲಯದ ಸ್ಪಾಂಗ್ ಪೌರ್ವಾತ್ಯ ಧರ್ಮಗಳ ಪ್ರಾಧ್ಯಾಪಕ ಹಾಗೂ ‘ಫೆಲೋ ಆಫ್ ಆಲ್ವೇಲ್ಸ್’ ಆಗಿದ್ದವರು. ಭಾರತದ ರಾಷ್ಟ್ರಪತಿಗಳಾಗಿದ್ದ ಅವರು ಶಿಮ್ಲಾದ ಈ ರಾಷ್ಟ್ರಪತಿ ಭವನದಲ್ಲಿ ಕೆಲಕಾಲ ತಂಗಿದ್ದಾಗ ಇಲ್ಲಿನ ನೀರವತೆ ಹಾಗೂ ಪ್ರಕೃತಿ ಸೌಂದರ್ಯಗಳನ್ನು ಕಂಡು ಇಡೀ ವಿಶ್ವದ | ಚಿಂತನೆ ಮಾಡುವ ತತ್ವಜ್ಞಾನಿಗಳು ಹಾಗೂ ವಿದ್ವನ್ಮಣಿಗಳಿಗೆ ಇದು ಕೇಂದ್ರಸ್ಥಾನವಾಗಿರಬೇಕೆಂಬ ಚಿಂತನೆಯನ್ನು ನಡೆಸಿದರು. ಅವರೇ ಖುದ್ದಾಗಿ ಸಂಶೋಧನೆಯನ್ನು ನಡೆಸಿ ಹೊರತಂದ ವಿಚಾರವೆಂದರೆ ಈ ಬೃಹದಾಕಾರದ ಅರಮನೆಯಲ್ಲಿ ಒಂದೂವರೆ ದಶಕಗಳ ಕಾಲದಲ್ಲಿ ರಾಷ್ಟ್ರಧ್ಯಕ್ಷರು ಗಳು ತಂಗಿದ್ದದ್ದು ಮಾತ್ರ ಕೇವಲ 120 ದಿನಗಳು. ಇಲ್ಲಿನ | ವಾತಾವರಣ ಹಾಗೂ ಆ ನಿವಾಸಕ್ಕಾಗಿ ಆಗುತ್ತಿದ್ದ ಖರ್ಚುವೆಚ್ಚಗಳನ್ನು ಗಣನೆಗೆ ತೆಗೆದುಕೊಂಡ ಅವರು ಹಿಮವಂತನ ಮಡಿಲಲ್ಲಿರುವ ಈ ಅರಮನೆಯಲ್ಲಿ ಇನ್ನೂ ಉನ್ನತವಾದ ಹಾಗೂ ಸಾರ್ಥಕವಾದ ಕಾರ್ಯಗಳು ನಡೆಯಬೇಕೆಂಬ ಅಭಿಲಾಷೆಯೊಂದಿಗೆ ಒಂದು ವಿನೂತನ ಕಾರ್ಯಕ್ರಮವನ್ನು ರೂಪಿಸಿದರು. ಅವರ ಪರಿಶ್ರಮ ದೂರದರ್ಶಿತ್ವ ಹಾಗೂ ನಿರ್ದೇಶನ ಗಳಿಂದಾಗಿ ಬ್ರಿಟಿಷ್ ಆಡಳಿತದ ಪ್ರತಿಷ್ಠೆಯ ಪ್ರತೀಕದಂತಿದ್ದ ಈ ರಾಷ್ಟ್ರಪತಿ ನಿವಾಸವು 1964 ರಲ್ಲಿ ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಯಾಗಿ ಹಾಗೂ ಸಂಶೋಧನಾ ಕೇಂದ್ರವಾಗಿ ಪರಿವರ್ತಿತಗೊಂಡಿತು. ಈ ಸಂಸ್ಥೆಯು ಆಕ್ಷ್ಯರ್ಡ್, ಪ್ರಿನ್ಸನ್ ಅಥವಾ ಪ್ರಪಂಚದ ಯಾವುದೇ ಬುದ್ದಿಜೀವಿಗಳ ಅಧ್ಯಯನ ಕೇಂದ್ರಕ್ಕೆ ಸರಿಸಾಟಿಯಾಗಿ ಬೆಳೆದು ಇಲ್ಲಿನ ಸಭಾಭವನದಲ್ಲಿ ತತ್ವಜ್ಞಾನಿಗಳು, ಬುದ್ದಿಜೀವಿಗಳು, ಕವಿಗಳು ಹಾಗೂ ಚರಿತ್ರಕಾರರು ಸೇರಿ ಭಾರತದ ವಿದ್ವತ್ತನ್ನು ಉಳಿಸಿ-ಬೆಳೆಸುವ ಮಹತ್ಕಾರ್ಯವನ್ನು ಕೈಗೊಳ್ಳಬೇಕೆಂಬ ಮಹದಾಸೆಯಿಂದ ರಾಧಾಕೃಷ್ಣನ್ನರು ಈ ಸಂಸ್ಥೆಯ ಉಗಮಕ್ಕೆ ನಾಂದಿ ಹಾಡಿದ್ದರು. ಅಂದಿನಿಂದ ಇಂದಿನವರೆಗೂ ನಡೆದು ಬರುತ್ತಿರುವ ಉನ್ನತ ಸಂಶೋಧನೆಗಳು ಈ ಸಂಸ್ಥೆಯನ್ನು | ವಿದ್ವಾನ್ಮಣಿಗಳ ಮಕುಟಮಣಿಯನ್ನಾಗಿಸಿರುವುದರಲ್ಲಿ ಸಂಶಯವಿಲ್ಲ 2008ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ – – ಡಾಕ್ಟರ್ ರಾಧಾಕೃಷ್ಣನ್ ಪೀಠದಲ್ಲಿ ದತ್ತಿಉಪನ್ಯಾಸಗಳನ್ನು ನೀಡಲು ಆಹ್ವಾನಿತರಾಗಿದ್ದ ಡಾ ಯು. ಆರ್. – | ಅನಂತಮೂರ್ತಿಯವರು ರಾಧಾಕೃಷ್ಣನ್ ರವರ ಹೆಸರಿನಲ್ಲಿ ಈಗಲೂ ಅನೇಕ ಯುವ ಅಧ್ಯಯನಶೀಲರಿಗೆ ಕೇಂಬ್ರಿಜ್ | 1 ವಿಶ್ವವಿದ್ಯಾನಿಲಯವು ಫೆಲೋಶಿಪ್ ನೀಡುತ್ತಿರುವ ವಿಚಾರವನ್ನು ತಿಳಿಸುತ್ತಾ ಹೇಗೆ ಜಗತ್ತಿನ ಅತ್ಯುನ್ನತ ಜ್ಞಾನಿಗಳ |
ಒಕ್ಕೂಟವು ಈ ಭಾರತೀಯ ಆದರ್ಶ ಶಿಕ್ಷಕನಿಗೆ ಗೌರವವನ್ನು ನೀಡುತ್ತಿದೆ ಎಂಬುದನ್ನು ಸ್ಮರಿಸಿದ್ದಾರೆ.
– ಹೀಗೆ ಸಿಮ್ಲಾದ ವೈಗಲ್ ಲಾಡ್ ನಂತರ ರಾಷ್ಟ್ರಪತಿ ನಿವಾಸವಾಗಿದ್ದದ್ದು. ರಾಧಾಕೃಷ್ಣನ್ ರವರ ಪರಿಶ್ರಮದಿಂದ – ವಿದ್ವತ್ಪದನವಾಗಿ ರೂಪುಗೊಂಡ ನಂತರ ಅತ್ಯಂತ ತೀಕ್ಷಮತಿ ಹಾಗೂ ಬುದ್ಧಿ ಜೀವಿಯಾದ ಬೆಂಗಾಲಿ ಚರಿತ್ರಕಾರ, ನಿಹಾರ್ | ರಂಜನ್ ರಾಯ್ ಅವರನ್ನು ಈ ಸಂಸ್ಥೆಯ ನಿರ್ದೇಶಕರಾಗಿ ನೇಮಕ ಮಾಡಲಾಯಿತು. ಕೆಲವು ಕಾಲದವರೆಗೆ ಈ ಸಂಸ್ಥೆಗೆ | ಮಾನವಿಕ ಶಾಸ್ತ್ರಗಳು ಹಾಗೂ ಸಮಾಜ ಶಾಸ್ತ್ರಗಳ ತಜ್ಞರನ್ನು ಫೆಲೋಗಳಾಗಿ ಸಂಶೋಧನೆಗಾಗಿ ನೇಮಕ ಮಾಡುತ್ತಿದ್ದರು. | ರಾಷ್ಟ್ರದ ಗ್ರಂಥಾಲಯ ಆಂದೋಲನದ ನಾಯಕರಾದ ಗ್ರಂಥ ಶಾಸ್ತ್ರಜ್ಞ ಡಾ ಕೇಶವನ್ ಅವರ ಮಾರ್ಗದರ್ಶನದಲ್ಲಿ | ಅನೇಕ ಸಂಸ್ಥೆಗಳು ಹಾಗೂ ಬುದ್ದಿಜೀವಿಗಳ ಖಾಸಗಿ ಸಂಗ್ರಹಗಳಿಂದ ಪಡೆದ ಗ್ರಂಥಗಳು ಸೇರಿದಂಥ ಒಂದು | ವಿಸ್ಮಯಪ್ರದವಾದ ಗ್ರಂಥಾಲಯವು ಇಲ್ಲಿ ಅನಾವರಣಗೊಂಡಿತು. ಮುಂದಿನ ದಿನಗಳಲ್ಲಿ ನಿರಂಜನ್ ರಾಯ್ ಹಾಗೂ | | ಮಾನವಿಕ ಶಾಸ್ತ್ರಜ್ಞರಾದ ರಾಮಚರಣ್ ಅವರುಗಳ ನಾಯಕತ್ವದಲ್ಲಿ ಈ ಉನ್ನತ ಶಿಕ್ಷಣ ಸಂಸ್ಥೆಯು ಮಾನವಿಕ ಹಾಗೂ
ಸಮಾಜ ಶಾಸ್ತ್ರದ ಅಧ್ಯಯನ ಕೇಂದ್ರವಾಗಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾನ್ಯತೆಯನ್ನು ಗಳಿಸಿತು. | ವಿಶಿಷ್ಟ ಸಾಧನೆಗಳು:
1969 ರಲ್ಲಿ ಗಾಂಧಿ ಶತಮಾನೋತ್ಸವ ಸಮಾರಂಭದಲ್ಲಿ ನಡೆಸಿದ ಒಂದು ವಿಚಾರಸಂಕಿರಣದಲ್ಲಿ ಹೊರಬಂದ ಹೊತ್ತಿಗೆಯು | ಗಾಂಧೀಜಿಯವರ ಬಗ್ಗೆ ಅಲ್ಲಿಯತನಕ ಕೇಳರಿಯದ ಅನೇಕ ವಿಚಾರಗಳನ್ನು ಪ್ರಾಜ್ಞರ ಗಮನಕ್ಕೆ ತಂದದ್ದು ಸಂಸ್ಥೆಯ ಒಂದು ವಿಶಿಷ್ಟ ಸಾಧನೆ ಎನ್ನ ಬೇಕು.1972 ರಲ್ಲಿ ಮಾಡಿದ ಒಂದು ಸ್ಮರಣೀಯ ಸಾಮೂಹಿಕ ಪ್ರಯತ್ನವು ಭಾರತದಲ್ಲಿನ ಬುಡಕಟ್ಟು ಸಂಸ್ಕೃತಿಯ ಬಗ್ಗೆ ಒಂದು ಸುದೀರ್ಘವಾದ ವಿಶೇಷ ಅಧ್ಯಯನ ನಡೆಯಲು ಕಾರಣವಾಯಿತು. ವೈಯಕ್ತಿಕವಾಗಿ ಈ ಸಂಸ್ಥೆಯಲ್ಲಿ ಫೆಲೋ ಆಗಿ ನಡೆಸಿರುವ ಸಂಶೋಧನೆಗಳಲ್ಲಿ ಮಾನವಿಕ ಶಾಸ್ತ್ರಜ್ಞರಾದ ಸತೀಶ

| ಸಬರ್ವಾಲ್ ರವರು”ಪಂಜಾಬ್ ರಾಜ್ಯದಲ್ಲಿ ಸಾಮಾಜಿಕ ಚಲನಶೀಲತೆ” ಎಂಬ ವಿಷಯದ ಬಗ್ಗೆ ನಡೆಸಿದ ಅಧ್ಯಯನವು || ಶ್ರೇಷ್ಠ ಸಾಧನೆ ಎಂದು ಪರಿಗಣಿತವಾಗಿದೆ.ನಮ್ಮ ಮೈಸೂರಿಗರಾದ ಶ್ರೀ ಟಿ.ಆರ್.ಎಸ್.ಶರ್ಮಾ ಅವರು ಈ ಸಂಸ್ಥೆಯಲ್ಲಿ || ಬಹುಕಾಲ ಸಂಶೋಧನೆಯನ್ನು ನಡೆಸಿದ ಅತಿದೊಡ್ಡ ವಿದ್ವಾಂಸರೆಂದು ಪರಿಗಣಿಸಲ್ಪಟ್ಟಿದ್ದಾರೆ. ಅವರು ಹೋದವರ್ಷ | | ನ್ಯೂಯಾರ್ಕಿನ ಪ್ರತಿಷ್ಠಿತ ಭಾಷಾ ಸಂಸ್ಥೆಯಾದ “ಜನರಲ್ ಸಿಮ್ಯಾಂಟಿಕ್ಸ್ ಸಂಸ್ಥೆ”ಯ ಪ್ರಶಸ್ತಿಯನ್ನು ತಮ್ಮ ಪೌರ್ವಾತ್ಯ | | ಹಾಗೂ ಪಾಶ್ಚಿಮಾತ್ಯ ಕವಿಗಳ ಹಾಗೂ ಲಾಕ್ಷಣಿಕರ ಬಗ್ಗೆ ನಡೆಸಿದ ತೌಲನಿಕ ಅಧ್ಯಯನದ ಪ್ರಬಂಧಕ್ಕೆ ಪಡೆದು ಸನ್ಮಾನಿತ | | ರಾಗಿರುತ್ತಾರೆ.ಇವರು ಮೈಸೂರಿಗೆ ಹಾಗೂ ಶಿಮ್ಲಾದ ಅಧ್ಯಯನ ಸಂಸ್ಥೆಗೆ ಅವಿನಾಭಾವ ಸಂಬಂಧವನ್ನು ಕಲ್ಪಿಸುವುದರಲ್ಲಿ | | ಯಶಸ್ವಿಯಾಗಿದ್ದಾರೆ. | ಹೀಗೆ ವರ್ಷದಿಂದ ವರ್ಷಕ್ಕೆ ಮುನ್ನಡೆಯುತ್ತಾ ಉತ್ತಮ ಕಾರ್ಯಗಳಲ್ಲಿ ಪ್ರವೃತ್ತವಾಗಿದ್ದ ಈ ಸಂಸ್ಥೆಯ ಕ್ರಿಯಾಶೀಲತೆಯು, | ಅಂದಿನ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾಗಾಂಧಿಯವರ ತುರ್ತು ಪರಿಸ್ಥಿತಿ ಹೇರಿಕೆಯಿಂದಾಗಿ ಸ್ತಬ್ದಗೊಂಡಿತ್ತು. | ನಂತರ ಬಂದ ಪ್ರಧಾನಿಯವರು ಒಬ್ಬ ಕರ್ಮಠರಾಗಿದ್ದು, ಈ ಸಂಸ್ಥೆಯು ಕೋಟ್ಯಾಂತರ ರೂಪಾಯಿಗಳನ್ನು | ಸಂಶೋಧನೆಗಾಗಿ ಪೋಲು ಮಾಡುತ್ತಿದೆ ಎಂದು ಆರೋಪಿಸಿ, ಸಂಸ್ಥೆಯ ಆಶೋತ್ತರಗಳು ಬಲಿಯಾಗಲು ಕಾರಣರಾದರು. | ಹೀಗಾಗಿ 1984 ರವರೆಗೆ ಫೆಲೋಗಳ ನೇಮಕಾತಿ ಹಾಗೂ ವಿಚಾರಸಂಕಿರಣಗಳ ಏರ್ಪಾಡುಗಳು ನಿಂತು | ಹೊದವು.ನಂತರದ ಕೆಲವು ವರ್ಷಗಳ ಕಾಲ ದೆಹಲಿಯಿಂದ ಒಬ್ಬ ಭಾರತೀಯ ಆಡಳಿತ ಸೇವಾ ಅಧಿಕಾರಿಯ | ಹೊಣೆಗಾರಿಕೆಯಲ್ಲಿ ಸಂಸ್ಥೆಯ ಆಡಳಿತವು ನಡೆಯಿತು. ಮುಂದೆ, ಪರಿವೀಕ್ಷಣಾ ಸಮಿತಿಯ ವರದಿಯೊಂದರ | ಫಲಶ್ರುತಿಯಿಂದಾಗಿ, ಸಂಸ್ಥೆಗೆ ನಿರ್ದೇಶಕರನ್ನು ನೇಮಿಸಿ, ಅವರಿಗೆ ಫೆಲೋಗಳನ್ನು ನೇಮಿಸುವ ಅಧಿಕಾರವನ್ನು | ನೀಡಲಾಯಿತು. ಅನೇಕ ರೀತಿಯ ಆಘಾತಗಳಿಗೆ ಈಡಾಗಿದ್ದ ಈ ಸಂಸ್ಥೆಯಲ್ಲಿ ತತ್ವಶಾಸ್ತ್ರಜ್ಞ ಮಾರ್ಗರೇಟ್ | ಚಟರ್ಜಿ ಮೃಣಾಲ್ ಮಿರಿ ಹಾಗೂ ಚರಿತ್ರಕಾರ ಜೆ.ಆರ್.ಗಾರೆವಾಲ ಮುಂತಾದವರು ನಿರ್ದೇಶಕರುಗಳಾಗಿದ್ದ ಕಾಲದಲ್ಲಿ | ಅನೇಕ ವಿಚಾರ ಸಂಕಿರಣಗಳನ್ನು ನಡೆಸಿದ್ದಲ್ಲದೆ, ಸಂಶೋಧನೆಗಾಗಿ ಇಲ್ಲಿ ಒಂದು ತಿಂಗಳ ಕಾಲ ವಸತಿ ಸೌಕರ್ಯ ಹಾಗೂ ಫೆಲೋಶಿಷ್ಠಳನ್ನು ಪಡೆಯುವ ವ್ಯವಸ್ಥೆಯನ್ನು ಕಲ್ಪಿಸಿ ಸಂಸ್ಥೆಗೆ ಹೊಸ ಚೇತನವನ್ನು ತಂದಿತ್ತರು. ಈ ಒಳ್ಳೆಯ ಕಾಲದಲ್ಲಿ ನಡೆದ ಸಂಶೋಧನೆಗಳಲ್ಲಿ ಮೀನಾಕ್ಷಿ ಮುಖರ್ಜಿ ಹಾಗೂ ಹರೀಶ್ ತ್ರಿವೇದಿ ಅವರು “post-colonialism” ಬಗ್ಗೆ ಹಾಗೂ ಶ್ರೀ | | ಚೇತನ್ ಸಿಂಗ್ ರವರು ಹಿಮಾಚಲ ಪ್ರದೇಶದ ಪರಿಸರ ಅಧ್ಯಯನದ ಬಗ್ಗೆ ರಚಿಸಿದ ಸಂಶೋಧನ ಗ್ರಂಥಗಳು | ಸ್ಮರಣಾರ್ಹವಾಗಿವೆ.ಖ್ಯಾತ ಚರಿತ್ರಕಾರ ಹಾಗೂ ಕ್ರಿಕೆಟ್ ಕ್ರೀಡಾ ತಜ್ಞ ರಾಮಚಂದ್ರ ಗುಹಾ ಅವರು ತಾವು ಈ ಶಿಮ್ಲಾದ | ನಿವಾಸದಲ್ಲಿ ಕಳೆದ ದಿನಗಳನ್ನು ಈಗಲೂ ಸ್ಮರಿಸುತ್ತಾರೆಂದು ಕೇಳಿದ್ದೇನೆ. ಅವರು ಅಲ್ಲಿ ತಂಗಿದ್ದ ಅವಧಿಯಲ್ಲಿ ನಡೆದ | ವಿಚಾರ ಗೋಷ್ಠಿಗಳು ಹಾಗೂ ಫೆಲೋಗಳು ನಡೆಸಿಕೊಡುತ್ತಿದ್ದ ವಿಚಾರಸಂಕಿರಣಗಳ ಗುಣಮಟ್ಟದ ಬಗ್ಗೆ ಅತ್ಯಂತ ಒಳ್ಳೆಯ | | ಅಭಿಪ್ರಾಯಗಳನ್ನು ನೀಡಿದ್ದಾರೆ. ಭಾರತೀಯ ಶೈಕ್ಷಣಿಕ ಜೀವನದ ಪ್ರತೀಕದಂತಿರುವ ಈ ಸಂಸ್ಥೆಯಲ್ಲಿ ದೇಶದ ನಾನಾ
ಭಾಗಗಳಿಂದ ಬರುವ ಸಂಶೋಧಕರು ಒಟ್ಟಾಗಿ ಕಲೆತಿದ್ದರೂ, ವೈಯಕ್ತಿಕ ಶ್ರದ್ದೆಯೊಂದಿಗೆ, ಹಿಮಾಲಯದ ನೆರಳಲ್ಲಿರುವ | ನೀರವ ಏಕಾಂತದಲ್ಲಿ ತಮ್ಮ ಮಹತ್ತರ ಸಾಧನೆಗಳನ್ನು ಮಾಡುತ್ತಿರುತ್ತಾರೆ. ಜವಾಹರ್ಲಾಲ್ ವಿಶ್ವವಿದ್ಯಾನಿಲಯ,
ಅಲಹಾಬಾದ್, ಭೋಜಪುರ್, ಚೆನ್ನೈ ಹಾಗೂ ಇನ್ನು ಬೇರೆ ಬೇರೆ ಪ್ರದೇಶಗಳಿಂದ ಬರುವ “ವಸತಿ ಪಡೆದಿರುವ ಲೇಖಕರು’ ಹಾಗೂ ಸಂಶೋಧಕರನ್ನು ಒಂದುಗೂಡಿಸಿ ವರ್ಷವಿಡೀ ಅವರಿಗೆ ಹಾಗೂ ಅವರ ಅಧ್ಯಯನಕ್ಕೆ ಪೂರಕವಾದ ವಾತಾವರಣವನ್ನು ನೀಡುವ ಅತ್ಯುನ್ನತ ಕಾರ್ಯತತ್ಪರತೆಯನ್ನು ಈ ಸಂಸ್ಥೆಯುತೋರಿಸುತ್ತಿದೆ. ಅಧಿಕಾರಶಾಹಿಗಳ ದೃಷ್ಟಿಯಲ್ಲಿ ಈ ಸಂಸ್ಥೆಯಲ್ಲಿ ಮೇಜುವಾನಿ ಹೆಚ್ಚಿದ್ದು ಸಂಶೋಧನೆ ಕಡಿಮೆ ಎಂಬ ಮಾತಿದ್ದರೂ ಅದು || ಸತ್ಯವಲ್ಲ. ಯೋಗ್ಯ ಸಂಶೋಧಕರು ಮಹತ್ತರ ವಿಚಾರಗಳಲ್ಲಿ ಕಾರ್ಯನಿರತರಾಗಲು ನಗರಗಳಿಂದ ದೂರವಿರುವ ಹಿಮಾಲಯದ ಮಡಿಲಿನಲ್ಲಿರುವ ಈ ಸಂಸ್ಥೆಯು ಒದಗಿಸುತ್ತಿರುವ ಅವಕಾಶಗಳು ಎಂತಹವರಿಗೂ ಕೂಡ ಸಂತೋಷವನ್ನುಂಟು ಮಾಡುತ್ತದೆ.
– 1
| ಆದರೂ ಈ ಘನತೆವೆತ್ತ ಉನ್ನತ ಶಿಕ್ಷಣ ಸಂಶೋಧನಾ ಸಂಸ್ಥೆ ಯ ಮೇಲಿದ್ದ ಹಿಮಾಚಲ ಪ್ರದೇಶದ ರಾಜ್ಯ ಸರ್ಕಾರದ | | ಅವಕೃಪೆ ಹಾಗೂ ಕಾಕದೃಷ್ಟಿಯು ಇದನ್ನು ಸಪ್ತತಾರ ಹೋಟೆಲ್ ಆಗಿ ಪರಿವರ್ತಿಸುವ ಹುನ್ನಾರ ನಡೆಸಿತ್ತು. ಆದರೆ 1997ರ |
ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ ಅದು ತಣ್ಣಗಾಯಿತು. ಆದರೂ ಈ ನಿವಾಸವನ್ನು ರಾಷ್ಟ್ರೀಯ ಪ್ರಾಮುಖ್ಯತೆ ಇರುವ ಕೇಂದ್ರವನ್ನಾಗಿ ಉಳಿಸಿಕೊಳ್ಳುವ ಪ್ರಯತ್ನ ನಿರಂತರವೂ ನಡೆದಿದೆ, ತೀರ್ಪಿನ ಪ್ರಕಾರ ಈ ಸಂಸ್ಥೆಯು | | ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಸಂಸ್ಥೆಯ ಆಡಳಿತ ವ್ಯಾಪ್ತಿಗೆ ಬರುತ್ತದೆ, ಶತಮಾನದಿಂದಲೂ | ಉಳಿಸಿಕೊಂಡು ಬಂದಿರುವ 120 ಎಕರೆಗೂ ಹೆಚ್ಚಿನ ಓಕ್ ಹಾಗೂ ದೇವದಾರು ವೃಕ್ಷಗಳ ತೋಟವು ಇಂದು ಕೂಡ ತನ್ನ |
ವೈಭವದಿಂದ ಕಣ್ಮನಗಳನ್ನು ಸೂರೆಗೊಳ್ಳುತ್ತದೆ. |
* ಸೃಜನಶೀಲ ಕಾರ್ಯನಿರ್ವಹಣೆ: | ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಾವು ಸತ್ಕರ್ಮ ಪ್ರವೃತ್ತವಾದ ಸಾರ್ವಜನಿಕ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಹಾಳು ಮಾಡುವುದರಲ್ಲಿ ಪ್ರವೃತ್ತರಾಗಿದ್ದೇವೆ. ಒಂದು ಇಡೀ ಸಂಸ್ಕೃತಿಯ ಪೋಷಣೆಗಾಗಿ ಕೆಲಸ ಮಾಡುವ ಅಂತಹ ಸಂಸ್ಥೆಗಳನ್ನು | ಸೃಜನಶೀಲ ಮಾರ್ಗದಲ್ಲಿ ನಡೆಸಿಕೊಂಡು ಹೋಗಬೇಕಾದರೆ ಎರಡು ಮುಖ್ಯ ಆಸರೆಗಳ ಖಚಿತತೆ ಅತ್ಯಗತ್ಯ, ಅವುಗಳೆಂದರೆ, ಸಂಪೂರ್ಣ ಸಂಶೋಧನಾತ್ಮಕ ಶೈಕ್ಷಣಿಕ ಸ್ವಾತಂತ್ರ್ಯ ಹಾಗೂ ಆರ್ಥಿಕ ಸ್ವಾವಲಂಬನೆ, ಅನೇಕಾನೇಕ ಮಟ್ಟಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಶೋಧಕರು ಹಾಗೂ ಬುದ್ದಿಜೀವಿಗಳು ಈ ಸಂಸ್ಥೆಯಲ್ಲಿ ಪಡೆಯುವಂಥ ಫೆಲೋಶಿಪ್ ಗಳ ಬಗ್ಗೆ ನಿರುಮ್ಮಳವಾಗಿ ಇದ್ದುಕೊಂಡು, ತಮ್ಮ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಅನುಕೂಲವಾಗುವಂತೆ, ಭಾರತ ಸರ್ಕಾರವು ಅವರಿಗೆ ನೆರವು ನೀಡಬೇಕಿದ್ದು, ಈಗಿರುವ ಮಲತಾಯಿ ಧೋರಣೆಯನ್ನು ಬಿಡಬೇಕಿದೆ. ಅನೇಕ * ವಿಶ್ವಮಾನ್ಯ ಸಂಶೋಧಕರ ಪ್ರಕಾರ ಶಿಮ್ಲಾದ ಈ ಸಂಸ್ಥೆಯು ದೇಶದ ರಾಜಧಾನಿಯಲ್ಲಿ ಇಲ್ಲದಿದ್ದರೂ ಭಾರತದ ಪ್ರಥಮ
ಕುಟುಂಬದ ಸದಸ್ಯರ ಹೆಸರುಗಳಿರುವ ಯಾವುದೇ ಸಂಸ್ಥೆಗೆ ಕಡಿಮೆ ಇಲ್ಲದಂತೆ ತನ್ನ ಗುಣಮಟ್ಟ ಹಾಗೂ ಸಂಶೋಧನ | ಸಾಹಿತ್ಯಗಳ ಉತ್ಪತ್ತಿಯಲ್ಲಿ ಅನುಕರಣೀಯವಾದ ಸಾಧನೆಯನ್ನು ಮಾಡಿದೆ. ಇತ್ತೀಚಿನ ನಿರ್ದೇಶಕರುಗಳ | ಮೇಲ್ವಿಚಾರಣೆಯಲ್ಲಿ ಸಂಸ್ಥೆಯು ವೈಶಿಷ್ಟ್ಯಪೂರ್ಣವಾದ ರೀತಿಯಲ್ಲಿ ಭಾರತದಲ್ಲಿ ಹಿಂದೆಂದೂ ಇರದಿದ್ದ ವೇಗದೊಂದಿಗೆ | ಕಾರ್ಯನಿರ್ವಹಿಸುತ್ತಿದೆ.
ಭಾರತದ ಗಿರಿಧಾಮಗಳ ರಾಣಿ ಶಿಮ್ಲಾದ ಹಿಮಾಚ್ಛಾದಿತ ಪರಿಸರದ ಮಧ್ಯೆ ಎದ್ದುನಿಂತ ಈ ವಿದ್ವತ್ ವೈಭವ ಸದನದಉದ್ಘಾಟನಾ ಸಮಾರಂಭದಲ್ಲಿ ಹೆಸರಾಂತ ಚಿಂತಕರಾದ ಅಂದಿನ ಕೇಂದ್ರ ಶಿಕ್ಷಣ ಮಂತ್ರಿ ಎಂ ಸಿ ಛಾಗ್ಲಾ ಅವರು.
| “ನಾವು ನಮ್ಮ ರಾಷ್ಟ್ರವು ನವೀನ ಹಾಗೂ ವೈಜ್ಞಾನಿಕ ಪ್ರಜ್ಞೆಯಿಂದ ನಿರ್ದೇಶಿಸಲ್ಪಟ್ಟ ರಾಷ್ಟ್ರವಾಗಬೇಕೆಂಬ ಆಶಾಭಾವ | ಉಳ್ಳವರು. ಈ ದಿಸೆಯಲ್ಲಿ ಹೆಜ್ಜೆಯಿಟ್ಟಾಗ ನಾವು ಬಾನಂಗಳದ ತಾರೆಗಳಿಗೆ ಕೈಚಾಚುವುದು ಸಹಜ. ಯಾವುದೇ | ದೇಶವಾಗಲಿ ವಿಜ್ಞಾನದತ್ತ ಸಂಪೂರ್ಣವಾಗಿ ತನ್ನ ಪ್ರಜೆಯನ್ನು ಹೊರಳಿಸಿದರೆ ಆ ಮಾರ್ಗವು ಪರಿಪೂರ್ಣ ಅಭಿವೃದ್ಧಿಗೆ
ಸಾಗುತ್ತಿದೆ ಎಂದು ನಾನು ನಂಬುವುದಿಲ್ಲ. ಈ ದುರ್ಗಮ ಮಾರ್ಗವು ವಿನಾಶದೆಡೆಗೇ ಹೋಗುತ್ತಿದೆ ಎಂಬ ಆತಂಕವನ್ನು ಹುಟ್ಟಿಸುತ್ತದೆ, ತಾತ್ವಿಕ ಚಿಂತನೆ ಹಾಗೂ ಮುಕ್ತ ಮಾನವಿಕ ಶಿಕ್ಷಣದಿಂದ ದೂರವಾದ ವಿಜ್ಞಾನ ಅತ್ಯಂತ ಅಪಾಯಕಾರಿ ಹಾಗೂ ನಾವು ಸಹ ಸಂಪೂರ್ಣವಾಗಿ ನಮ್ಮೆಲ್ಲ ಕಾರ್ಯಗಳನ್ನು ವಿಜ್ಞಾನ ಹಾಗೂ ತಂತ್ರಜ್ಞಾನಗಳ ಕಡೆಗೆ ಹೋಗುವ ಆಸೆ ಹೊಂದಿದವರೇನಲ್ಲ. ಇಷ್ಟಕ್ಕೂ ಒಂದು ರಾಷ್ಟ್ರವಾಗಿ ನಮ್ಮ ಅತ್ಯುನ್ನತ ಮೌಲ್ಯಗಳೆಂದರೆ ವೇದಾಂತ, ತತ್ವಜ್ಞಾನ ಕಲೆಗಳು ಹಾಗೂ ಅಲಂಕಾರಶಾಸ್ತ್ರಗಳ ಆದರ್ಶಗಳನ್ನುಳ್ಳ ಪರಂಪರೆಯನ್ನು ನಾವು ಉಳಿಸಿ ಬೆಳೆಸಬೇಕಾಗಿದೆ ಎಂದಿರುವುದು ಸಾರ್ವಕಾಲಿಕ ಸತ್ಯವಷ್ಟೆ! ಅಂದಿನ ಆ ಸಂದರ್ಭದ ತಮ್ಮ ಅಧ್ಯಕ್ಷ ಭಾಷಣದಲ್ಲಿ ಡಾ. ರಾಧಾಕೃಷ್ಣನ್ ರವರು ಹೇಳಿರುವ ಮಾತಂತೂ ಸಂಸ್ಥೆಯ ಅಗತ್ಯ ಹಾಗೂ ಘನ ಉದ್ದೇಶದ ಪೂರ್ವ ಸೂಚಿ ಎನಿಸುವುದರಲ್ಲಿ ಎರಡು ಮಾತಿಲ್ಲ. ಅವರು ಹೇಳುತ್ತಾರೆ: ” ಕಲೆಯು ಜೀವನ ವೃಕ್ಷದಿಂದ ಹುಟ್ಟಿದರೆ ವಿಜ್ಞಾನವು ಮೃತ್ಯು ಮುಖದಿಂದ ಜನ್ಮ ತಾಳುತ್ತದೆ, ತಾಂತ್ರಿಕ ಆವಿಷ್ಕಾರಗಳು |
ಮನಸೂರೆಗೊಳ್ಳುವಂತೆ ಅದ್ಭುತವೆನಿಸಿದಾಗ,ಅವು ಅಪಾಯಕಾರಿಯಾಗಿ ಸೃಷ್ಟಿಯ ಸಮತೋಲನವನ್ನು ಪಲ್ಲಟಗೊಳಿಸುವ ಸಾಧ್ಯತೆ ಇರುತ್ತದೆ, ನಾವೇ ನೋಡಿದಂತೆ ಪ್ರಪಂಚದ ಅತ್ಯುನ್ನತ ವಿಜ್ಞಾನಿಗಳು ತಮ್ಮ ಜೀವಿತಾವಧಿಯನ್ನು ಅಣ್ವಸ್ತ್ರಗಳನ್ನು ತಯಾರಿಸಲು ವ್ಯಯಿಸುತ್ತಿರುವಾಗ ಹಾಗೂ ತೀಕ್ಷ್ಮಮತಿ ಗಳೆಲ್ಲರೂ ಸಾಮೂಹಿಕ | ಹಿಂಸಾ ವಿಧಾನಗಳನ್ನು ಕಂಡುಹಿಡಿಯಲು ಉತ್ಸುಕರಾಗಿರುವಾಗ, ಸಂಸ್ಕೃತಿಯ ಮೂಲೋತ್ಪಾಟನೆಗಾಗಿಯೇ ಇವರೆಲ್ಲರೂ | ಶ್ರಮಿಸುತ್ತಿರುವ ಹಾಗೆ ಕಾಣುತ್ತದೆ. ಆದ್ದರಿಂದ ತಾವು ಈ ಸಂಸ್ಥೆಯಲ್ಲಿ ಮಾನವಿಕ ವಿಷಯಗಳಿಗೆ ನೀಡುತ್ತಿರುವ ಪ್ರಾಮುಖ್ಯತೆಯು ವಿಜ್ಞಾನದ ಏಕಮುಖೀ ಪರಿಸರದಿಂದಾಗುವ ತಪ್ಪನ್ನು ತಿದ್ದಬಹುದು ಮತ್ತು ನಮ್ಮ ಪ್ರಜೆಯಲ್ಲಿರುವ ಈ | ಕೊರತೆಯನ್ನು ಕಲಾವಿಷಯಗಳ ಮೂಲಕ ನೀಗಿಸಿ, ಪ್ರಜ್ಞಾ ವಿಸ್ತಾರಕ್ಕೆ ದಾರಿ ಮಾಡಿ ನಮ್ಮ ಗುರಿಯನ್ನು ಮತ್ತಷ್ಟು ಸ್ಪಷ್ಟಗೊಳಿಸುತ್ತದೆ ಎಂಬ ಆಶಾಭಾವನೆಯನ್ನು ಮೂಡಿಸುತ್ತಿದೆ”. ಈ ಮಹೋನ್ನತವಾದ ತಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಾನು ಕಣ್ಣಾರೆ ಕಂಡು ಅನುಭವಿಸಿದ ವಿಚಾರವೇನೆಂದರೆ, ಇಲ್ಲಿನ ನೀರವತೆ ಹಾಗೂ ಅದನ್ನು ಸುತ್ತುವರಿದ ಸೌಂದರ್ಯವು ಯಾವ ಹಾರ್ವಡ್್ರ ಅಥವಾ ಆಕ್ಷ್ಯರ್ಡ್ ಪರಿಸರದಲ್ಲಿ
| ಕಾಣಸಿಗುವುದಿಲ್ಲ. ವರ್ಷದ 12 ತಿಂಗಳೂ ಕಂಗೊಳಿಸುವ ಈ ನಿತ್ಯಹರಿದ್ವರ್ಣದ ಜ್ಞಾನ ಕಾಶಿಯನ್ನು ಉಳಿಸಿ ಬೆಳೆಸಲು |
ದಕ್ಷಿಣ ರಾಜ್ಯಗಳಿಂದಲೂ ಹೆಚ್ಚು ಹೆಚ್ಚು ವಿದ್ವಾಂಸರು ಹಾಗೂ ಪಂಡಿತರು ಸಂಶೋಧನಾ ಕಾರ್ಯಾರ್ಥವಾಗಿ ಈ ಸಂಸ್ಥೆಗೆ ಭೇಟಿ ನೀಡುವುದು ಮಾಮೂಲಿ ಆಗಬೇಕು ಸದ್ಯದ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಿಯಾಗಿರುವ ಈ ಕಾಲಘಟ್ಟದಲ್ಲಿ ಸಾವಿರಾರು ಮುಚ್ಚಿಟ್ಟ ನಿಗೂಢ ದಾಖಲೆಗಳನ್ನು ಪಡೆಯಬಹುದಾದ
ವಾತಾವರಣವಿದ್ದು .ಬುದ್ದಿಜೀವಿಗಳಿಗೆ ಇಲ್ಲಿ ಕುಳಿತು ಹಿಂದೆಂದೂ ಕಂಡುಕೇಳರಿಯದ ಅನೇಕ ವಿಚಾರಗಳನ್ನು ವಿದ್ಯಾವಂತ | ನಾಗರಿಕರಿಗೆ ತಲುಪುವಂತೆ ಮಾಡುವ ಸಮಯ ಒದಗಿದೆ. ಇಂತಹ ಭವ್ಯ ಶಿಕ್ಷಣ ಸಂಸ್ಥೆಗೆ ರಾಷ್ಟ್ರದ ಎಲ್ಲ ರಾಜ್ಯ | ಸರ್ಕಾರಗಳು ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿದಲ್ಲಿ ಈ ಸಂಸ್ಥೆಯು ಮಾನವಿಕ ಶಾಸ್ತ್ರ ಹಾಗೂ ಸಮಾಜ ಶಾಸ್ತ್ರಗಳ
ಶಿಖರಪ್ರಾಯ ಅಧ್ಯಯನ ಕೇಂದ್ರವಾಗಿ ವಿಶ್ವದಲ್ಲೇ ಮೇರುಸ್ಥಾನವನ್ನು ಅಲಂಕರಿಸುವುದು ನಿಸ್ಸಂಶಯ.

ಬಾಲಾಜಿ ಬಿ.ಎನ್