ಲೇಖನ ಅಭಿವ್ಯಕ್ತಿ :-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)
ಮಗುವಿನ ಹೆಜ್ಜೆಗಳು ಪುಟ್ಟ ಪುಟ್ಟದಾಗಿರುತ್ತದೆ.ಅದೇ ರೀತಿ ಸುವರ್ಣ ಬೆಳುಕು ಫೌಂಡೇಶನ್ ಈಗ ಮಗುವಿನ ಹಾಗೆ ಇದು, ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಿಡುತ್ತಿದೆ.ಈ ಪುಟ್ಟ ಹೆಜ್ಜೆಗಳಲ್ಲಿ ಮಹತ್ತರ ಸೇವೆಯು ಗುರುತಾಗಿರುವುದನ್ನು ಕಾಣಬಹುದು.ಸಾಮಾಜಿಕ ಸೇವೆಯ ಸದಾ ಒಳಿತನ್ನು ಮುಖ್ಯ ಉದ್ದೇಶವನ್ನಾಗಿ ಹೊಂದಿರುವ ಈ ಸಂಸ್ಥೆ ಆರಂಭವಾಗಿದ್ದು೨೦೨೧ ನೇ ಶ್ರೀ ಶಾರ‍್ವರಿ ಸಂವತ್ಸರ ವೈಶಾಖ ಜೇಷ್ಠ ಮಾಸ ೨ನೇ ತಾರೀಖಿನ ದಿನದಂದು. ಈ ಸಂಸ್ಥೆಯ ನೇತಾರರು ಮಹೇಶ್ ನಾಯಕ್ ಎಸ್. ಸುಣ್ಣದಕೇರಿ ಮೈಸೂರು. ಇವರು ಪತ್ರಿಕಾ ವರದಿಗಾರರಾಗಿ ಸೇವೆಸಲ್ಲಿಸುತ್ತಿದ್ದು ಸಾಮಾಜಿಕ ಸೇವೆಯನ್ನು ಕೈಗೊಳ್ಳಬೇಕು ಎಂದುಕೊಂಡಾಗ ಇವರ ಕನಸ್ಸು ಅಪಾರ ಶ್ರಮದ ಫಲವಾಗಿ ನನಸ್ಸಿನ ರೂಪದಲ್ಲಿ ಜನ್ಮತಾಳಿದ ಕೂಸೇ ಈ ಸುವರ್ಣ ಬೆಳಕು ಫೌಂಡೇಶನ್. ಈ ಸಂಸ್ಥೆಯ ಕಾರ್ಯಕಾರಿ ಕೆಲಸಗಳಿಗೆ ವತ್ತಾಸೆಯಾಗಿ ಸಂಸ್ಥೆಯ ಸದಸ್ಯರುಗಳಾದ (ಸಂಸ್ಥೆಯ ಉಪಾಧ್ಯಕ್ಷರು),ಚಿ.ಮ.ಬಿ.ಆರ್ ಕಾವ್ಯನಾಮದ ಯುವಕವಿ,ಬರವಣಿಗೆಗಾರ ಮಂಜುನಾಥ ಬಿ.ಆರ್ ಹೆಚ್.ಡಿ ಕೋಟೆ

ಮೈಸೂರು.ಲೋಕೇಶ್(ಛಾಯಗ್ರಾಹಕರು)ಸುಧಾಮೂರ್ತಿ ಅಭಿಮಾನಿ,ವಿಜಯೇಂದ್ರ(ಕ್ರೀಡಾಪಟು),ಶಿವಕುಮಾರ್(ಛಾಯಗ್ರಾಹಕರು), ಶ್ರೀಕಾಂತ್(ಸಾಮಾಜಿಕ ಮುಖಂಡರು), ಎನ್ ಅನಂತ್(ಮಾರ್ಗದರ್ಶಕರು),ರವಿ ಭಗೀರಥ(ವಿನ್ಯಾಸಗಾರ), ಇವರುಗಳ ಸಹಕಾರ್ಯದ ಬೆನ್ನೆಲುಬಿನ ಸ್ನೇಹದೊಂದಿಗೆ ಮಹೇಶ್ ನಾಯಕ್, ಎಸ್ ಅವರು ಹಲವಾರು ಸಾಮಾಜಿಕ ಕಾರ್ಯಗಳನ್ನು ಆಯೋಜಿಸಿ ಯಶಸ್ವಿಯತ್ತ ಸಾಗುತ್ತಿದ್ದಾರೆ. ಈ ಸಂಸ್ಥೆಯ ಸಹಯೋಗಕ್ಕೆ ಮುಂದೆ ಬಂದಂತಹ ಸಂಸ್ಥೆಗಳನ್ನು ಮತ್ತು ದಾನಿಗಳನ್ನು ಹಾಗೂ ಸನ್ಮಾನಿತರನ್ನು ಸಂಸ್ಥೆಯ ಅಧ್ಯಕ್ಷರಾದ ಮಹೇಶ್ ನಾಯಕ್ ಅವರು ಸ್ಮರಿಸಿದ್ದು ಹೀಗೆ.ಮೊದಲಿಗೆ ನಾನು ಹೆಜ್ಜೆ ಇಟ್ಟಾಗ ನನ್ನ ಯೋಜನೆಗಳಿಗೆ ಸಾತ್ ನೀಡಿದವರು ಫೈಟರ‍್ಸ್ ವೇರ‍್ಸ್ ನ ಮಾಲೀಕರಾದ ಮಂಜುನಾಥ್.ಇವರು ಲಾಕ್ಡೌನ್ ಸಂಧರ್ಭದಲ್ಲಿ ವ್ಯಾಪಾರ ವಹಿವಾಟು ನಿಂತುಹೋಗಿದ್ದರು ಸಹ ಸಮಾಜ ಸೇವೆ ಮಾಡುವ ಉತ್ಸುಕರಾಗಿ ನನ್ನ ಜೊತೆ ಕೈ ಜೋಡಿಸಿ ದಿನಗೂಲಿ ಕಾರ್ಮಿಕರಿಗೆ,ಬಡವರಿಗೆ,ನಿರ್ಗತಿಕರಿಗೆ,ವಿಶೇಷ ಚೇತನರಿಗೆ ದಿನಸಿ ಕಿಟ್‌ಗಳನ್ನು ವಿತರಿಸುವಲ್ಲಿ ಸಹಕಾರಿಯಾದರು.

ನಂತರ ಹಿಮಾಲಯ ಫೌಂಡೇಶನ್ ಸಹಯೋಗದೊಂದಿಗೆ ಬಸವ ಜಯಂತಿಯ ಪ್ರಯುಕ್ತವಾಗಿ ಕರೋನಾ ವಾರಿಯರ್ಸ್‌ಗಳಾದ ಪ್ರಭುಶಂಕರ್ ಅವರಿಗೆ ಬಸವರತ್ನ ಪ್ರಶಸ್ತಿ ನೀಡಿದೆವು. ಜೊತೆಗೆ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಪ್ರೇಮಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು.ಈ ಕಾರ್ಯಕ್ರಮದಲ್ಲಿ ಹತ್ತು ಸಾವಿರ ಔಷಧೀಯ ಗಿಡಗಳನ್ನು ರಾಜ್ಯದಾದ್ಯಂತ ನೆಟ್ಟು ಪೋಷಿಸಿ ಎಲೆಮರೆಕಾಯಿಯಂತೆ ಇದ್ದ ಪ್ರಸನ್ನಮೂರ್ತಿ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು.ಅಂತರಾಷ್ಟ್ರೀಯ ಯೋಗ ದಿನಾಚರಣೆಯ ವಿಶೇಷವಾಗಿ ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ರವಿ ಯೊಗ ತರಬೇತುದಾರರು ಮೈಸೂರು ವಿಶ್ವವಿದ್ಯಾನಿಲಯ,ಸುಜಾತ ಯೋಗ ಶಿಕ್ಷಕಿ,ರವಿಕುಮಾರ್ ಯೋಗ ತರಬೇತುದಾರರು ಗಂಗೂಬಾಯಿ ಹಾನಗಲ್ ಮೈಸೂರ್.ಇವರುಗಳಿಗೆ ನಮ್ಮ ಸುವರ್ಣ ಬೆಳಕು ಫೌಂಡೇಷನ್ ಸನ್ಮಾನಿಸಿ ಅವರಿಗೆ ಗೌರವಿಸಿದರು.

ಫೌಂಡೇಶನ್ ಮೂಲಕ ಸನ್ಮಾನಿಸಿ ಯೋಗದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯವನ್ನು ಕೈಗೊಂಡೆವು.ವೈದ್ಯರ ದಿನಾಚರಣೆಯ ಪ್ರಯುಕ್ತ ಕರೋನಾ ಸಂಧರ್ಭದಲ್ಲಿ ವೈದ್ಯೋ ನಾರಾಯಣ ಹರಿಃ ಎಂಬಂತೆ ತಮ್ಮ ಪ್ರಾಣವನ್ನು ಲೆಕ್ಕಿಸದೇ ಜೊತೆಗೆ ಕೆಲವು ವೈದ್ಯರು ತಮ್ಮ ಪ್ರಾಣವನ್ನು ಸಹ ಕಳೆದುಕೊಂಡು ಕೋಟ್ಯಾಂತರ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.ಇವರುಗಳ ನಿಸ್ವಾರ್ಥ ಸೇವೆಯ ಸ್ಮರಣಾರ್ಥವಾಗಿ ವೈದ್ಯಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿರುವ ಮಧುಮೇಹ ತಜ್ಞರಾದ ಡಾ.ರೇಣುಕಾ ಪ್ರಸಾದ್,ಶ್ವಾಸಕೋಶ ತಜ್ಞ ರಾದ ಅವಿನಾಶ್ ಮತ್ತು ನವೀನ್ ಕುಮಾರ್, ಆಯುರ್ವೇದ ವೈದ್ಯರಾದ ಡಾ.ಕೆ ಮಧು,ಇವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ನಮನ ಕಲಾಮಂಟಪದಲ್ಲಿ ಸಮಾಜ ಸೇವಕರಾದ ಅಪೂರ್ವ ಶಿವಣ್ಣ,ಡಾ.ಬಿ.ಅರ್ ನಟರಾಜ್ ಜೋಯ್ಸ್,ಮಂಜುನಾಥ್,ರಂಗನಾಥ್,ವಿಕೆ ಶಾಸ್ತ್ರಿ ಇವರುಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು.

ಟೋಕಿಯೋ ಒಲಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಗೆದ್ದುಬರಲಿ ಎಂದು ಪ್ರೋತ್ಸಾಹಿಸುವ ದೃಷ್ಟಿಯಿಂದ ವಿ.ಕೆ.ಸ್. ಫೌಂಡೇಶನ್ ಸಹಯೋಗದೊಂದಿಗೆ ಮೈಸೂರಿನ ಆರ್.ಟಿ.ಓ ವೃತ್ತದಿಂದ ಸೈಕಲ್ ಜಾಥಾ ಹಮ್ಮಿಕೊಂಡಿದ್ದೆವು.ಇದರಲ್ಲಿ ಅಂತರಾಷ್ಟ್ರೀಯ ಮಟ್ಟದ ಹಿರಿಯ ಕ್ರೀಡಾಪಟುಗಳಾದ ವಿಶ್ವೇಶ್ವರ ಆರಾಧ್ಯ ಮತ್ತು ಜಿಮ್ನ್ಯಾಸ್ಟಿಕ್ ತರಬೇತುದಾರರು ಅರುಣ್ ಪಾಟಿಲ್ ಹಾಗೂ ಮತ್ತಿತ್ತರ ಕ್ರೀಡಾಪಟುಗಳು ಇದ್ದರು.

ಈ ಸೈಕಲ್ ಜಾಥದಲ್ಲಿ ಇಂದಿನ ಯುವಪೀಳಿಗೆಯು ಕ್ರೀಡೆಯತ್ತ ಹೆಚ್ಚಿನದಾಗಿ ಮುಂದಿನದಿನಗಳಲ್ಲಿ ಪಾಲ್ಗೊಳ್ಳಲಿ ಎನ್ನುವ ಅಂಶವನ್ನು ಸಹ ಪ್ರಧಾನವಾಗಿ ತಿಳಿಸಲಾಯಿತು. -೨೭-೦೨-೨೦೨೩ ಎ.ಎಸ್.ಜಿ. ಕಣ್ಣಿನ ಆಸ್ಪತ್ರೆ ಹಾಗೂ ಮೂರ್ತಿ ಡೆಂಟಲ್ ಕ್ಲಿನಿಕ್ ವತಿಯಿಂದ ಅಂಬಿಗರ ಚೌಡಯ್ಯ ರವರ ಜಯಂತ್ಸೋವ ಸ್ಮರಣೆಯ ಅಂಗವಾಗಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ, ಮೈಸೂರಿನ ಬೆಸ್ತಗೇರಿ ಚಾಮರಾಜ ಡಬ್ಬಲ್ ರೋಡ್ ಶ್ರೀ ರಾಮ ಮಂದಿರದಲ್ಲಿ ಆಯೋಜಿಸಲಾಗಿತ್ತು.


ಈ ವಿಧವಾಗಿ ಹಲವು ಕಾರ್ಯಕ್ರಮಗಳನ್ನು ನಮ್ಮ ಸುವರ್ಣ ಬೆಳುಕು ಫೌಂಡೇಶನ್ ಆರಂಭವಾದ ದಿನದಿಂದ ನಡೆಸಿಕೊಂಡು ಬಂದಿದ್ದೇವೆ ಎಂದು ಸುವರ್ಣ ಬೆಳಕು ಫೌಂಡೇಶನ್‌ನ ಅಧ್ಯಕ್ಷರಾದ ಎಸ್ ಮಹೇಶ್ ನಾಯಕ್ ಅವರು ತಮ್ಮ ಸಂಘಟನೆಯ ಕಾರ್ಯಕ್ರಮಗಳ ವಿವರವನ್ನು ಸಂಜೆ ಸಮಾಚಾರ್ ಪತ್ರಿಕೆಯವರೊಂದಿಗೆ ಹಂಚಿಕೊಂಡರು.ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಮಾಜಿಕ ಕೆಲಸಗಳನ್ನು ಮಾಡುವ ಹುಮ್ಮಸ್ಸಿನಲ್ಲಿರುವ ಈ ಸಂಘಟನೆಯು ನಮ್ಮ ಮೈಸೂರಿಗೆ ಒಂದು ಉತ್ತಮ ಫೌಂಡೇಶನ್ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.ಇಂತಹ ಸಂಘಟನೆಗಳು ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಹೆಚ್ಚೆಚ್ಚು ಕಂಡುಬರಲಿ ಎನ್ನುವುದೇ ಫಲಾನುಭವಿಗಳ ಆಶಯ.