ಬಂಗಾರದಂತಹ ಹೃದಯ ಹೊಂದಿರುವ ಮಧುಮೇಹ ತಜ್ಞೆ- ಮೈಸೂರಿನ ಡಾ.ಲೀನಾ ಗುಪ್ತಾ ಪುಣೆಯಲ್ಲಿ ನಡೆದ ದಿವಾ ಸ್ಪರ್ಧೆಯ ` ಮಿಸೆಸ್ ಇಂಡಿಯಾ ಎಂಪ್ರೆಸ್ ಆಫ್ ದಿ ನೇಷನ್ 2021′ ಪ್ರಶಸ್ತಿಯ ವಿಜೇತರಾಗಿದ್ದಾರೆ
• ಸುಂದರ ವ್ಯಕ್ತಿತ್ವದ ಅವರು 1993 ರಲ್ಲಿ ಮಿಸ್ ಮೈಸೂರು ಕಿರೀಟ ಧರಿಸಿದ್ದರು ಮತ್ತು ಸಂಗಮ್ ಕ್ವೀನ್- ಮಿಸ್ ಕರ್ನಾಟಕ ಆಗಿದ್ದರು. ಅವರು ಐದು ಮಕ್ಕಳ ಕೃತಿಗಳನ್ನೂ ರಚಿಸಿದ್ದಾರೆ.

ಮೈಸೂರು: ಡಾ.ಲೀನಾ ಗುಪ್ತಾ ಅವರು ದಿವಾ ಸ್ಪರ್ಧೆಗಳ ಚಿನ್ನದ ವಿಭಾಗದಲ್ಲಿ ಪ್ರತಿಷ್ಠಿತ ಮಿಸ್ ಇಂಡಿಯಾ ಎಂಪ್ರೆಸ್ ಆಫ್ ದಿ ನೇಷನ್ 2021' ಪ್ರಶಸ್ತಿ ವಿಜೇತರಾಗಿದ್ದಾರೆ. ಇದರಿಂದ ಅವರ ಆನಂದಕ್ಕೆ ಎಣೆಯೇ ಇಲ್ಲದಂತಾಗಿದೆ,
ನನ್ನ ಹೆಸರು ಘೋಷಣೆಯಾದ ಕ್ಷಣವು ಒಂದು ಸುಂದರ ಘಳಿಗೆ. ಪ್ರತಿಯೊಂದು ದೊಡ್ಡ ಕನಸು ಒಬ್ಬ ಕನಸುಗಾರನೊಂದಿಗೆ ಆರಂಭವಾಗುತ್ತವೆ ಮತ್ತು ನಾನು ನನ್ನ ಕನಸುಗಳೊಂದಿಗೆ ಜೀವಿಸುತ್ತೇನೆ’
ಎಂದು ಅವರು ಹೇಳಿದರು. ಪುಣೆಯ ಹಯಾತ್ ಪುಣೆಯಲ್ಲಿ ನಡೆದ ಮಿನುಗುವ ಫಿನಾಲೆಯಲ್ಲಿ ಅವರು 31 ಸ್ಪರ್ಧಿಗಳ ಜತೆ ಹೆಜ್ಜೆ ಹಾಕಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ದಿವಾ ಸ್ಪರ್ಧೆಗಳು ಕಾರ್ಲ್ ಮತ್ತು ಅಂಜನಾ ಮಸ್ಕರೇನಸ್ ಅವರ ಕನಸಿನ ಕೂಸು. ಇಷ್ಟೇ ಅಲ್ಲದೆ, ಇದೇ ವಿಭಾಗದಲ್ಲಿ `ಮಿಸ್ ಅಚೀವರ್ ಪ್ರಶಸ್ತಿ’ಯನ್ನೂ ಡಾ.ಲೀನಾ ಗುಪ್ತಾ ಗೆದ್ದುಕೊಂಡಿದ್ದಾರೆ.