ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ನಿರಾಶ್ರಿತರಿಗೆ ಹೂದಿಕೆ ಕೊಡುವ ಅಭಿಯಾನ ಕೇ ಒಂಟಿ ಕೊಪ್ಪಲ್ ನಲ್ಲಿರುವ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನ ಮುಂಭಾಗ ನಿರಾಶ್ರಿತರಿಗೆ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಆರ್ ರಘು ಕೌಟಿಲ್ಯ ಹೊದಿಕೆ ವಿತರಿಸುವ ಮೂಲಕ ಅಭಿಯಾನದಲ್ಲಿ ಭಾಗಿಯಾದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಆರ್ ರಘು ಕೌಟಿಲ್ಯ ನಮ್ಮ ಮೈಸೂರಲ್ಲಿ ನಿರಾಶ್ರಿತರು ಅಶಕ್ತರಲ್ಲಿ ಸ್ವಾಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಆದ ಕಾರಣ ಕಷ್ಟದಲ್ಲಿದ್ದೇವೆ ಸಹಾಯ ಮಾಡಿ ಎಂದು ಸಂಘಸಂಸ್ಥಗಳಿಗೆ ಅಥವಾ ಸರ್ಕಾರಕ್ಕೆ ಅರ್ಜಿ ಹಾಕಲ್ಲ ಅಥವಾ ಸರ್ಕಾರದವರೇ ಎಲ್ಲವನ್ನು ಸರಿದಾರಿಗೆ ತರೋಕು ಆಗುವುದಿಲ್ಲ ಸಮಾಜವನ್ನ ಸರಿಪಡಿಸಲು ಸಂಘ ಸಂಸ್ಥೆಗಳ ಮತ್ತು ಸಾರ್ವಜನಿಕರ ಪಾತ್ರ ಬಹಳಮುಖ್ಯ, ಅಶಕ್ತರಿರುವ ಸ್ಥಳಕ್ಕೆ ಹೋಗಿ ಹೊದಿಕೆ ವಿತರಣೆ ಕಾರ್ಯಕ್ರಮ ನಡೆಯುವ ಮಾದರಿಯಲ್ಲೆ ಅವರಿಗೆ ಆರೋಗ್ಯ ತಪಾಸಣೆ ಮಾಡಿಸಲು ಶ್ರಮಿಸೋಣ
ಇದೇ ಸಂದರ್ಭದಲ್ಲಿ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಆರ್ ರಘು ಕೌಟಿಲ್ಯ ,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮೀದೇವಿ ,ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ,ಬಿಜೆಪಿ ಯುವ ಮುಖಂಡ ಗುರುದತ್ ,ಕಡಕೊಳ ಜಗದೀಶ್,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್ ,ಅಜಯ್ ಶಾಸ್ತ್ರಿ , ಎಸ್ ಎನ್ ರಾಜೇಶ್ ,ಗೋವಿಂದರಾಜು, ರಾಕೇಶ್ ಕುಂಚಿಟಿಗ, ಹರೀಶ್ ನಾಯ್ಡು ,ಸುಚೀಂದ್ರ ,ಗಣೇಶ್ ಪ್ರಸಾದ್ ,ಮಧು ಎನ್ ಪುಜಾರ್ ,ಹಾಗೂ ಇನ್ನಿತರರು ಹಾಜರಿದ್ದರು.