ಮೈಸೂರು, ಮೇ 17, 2024: ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ತಯಾರಿಕೆಯ ಜಾಗತಿಕ ಸಂಸ್ಥೆ ಟಿವಿಎಸ್ ಮೋಟರ್ ಕಂಪನಿಯು (TVSM) – ಟಿವಿಎಸ್ ಅಪಾಚೆ 160 ಸರಣಿಯ ಮೋಟರ್ ಸೈಕಲ್‌ಗಳ ‘ಎ ಬ್ಲೇಜ್ ಆಫ್ ಬ್ಲ್ಯಾಕ್’ (ಪ್ರಜ್ವಲಿಸುವ ಕಪ್ಪು) ಗಾಢಬಣ್ಣದ ಆವೃತ್ತಿಯ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಮತ್ತು ಆರ್‌ಟಿಆರ್ 160 4V ಎರಡು ಮಾದರಿಯನ್ನು ಕರ್ನಾಟಕದ ಮಾರುಕಟ್ಟೆಗೆ ಇಂದು ಬಿಡುಗಡೆ ಮಾಡಿದೆ.

ಅಪಾಚೆ ಆರ್‌ಟಿಆರ್ 160 4V ಭಾರತದ ಅತ್ಯಂತ ಶಕ್ತಿಶಾಲಿ 160cc ಆಯಿಲ್ ಕೂಲ್ಡ್ ಮೋಟರ್‌ಸೈಕಲ್ ಆಗಿದ್ದು, 17.6 PS @ 9250ಶಕ್ತಿ ಹೊರಹಾಕುತ್ತದೆ. ಈ ಎರಡೂ ಮೋಟರ್‌ಸೈಕಲ್‌ಗಳು ಈ ವಿಭಾಗದಲ್ಲಿಯೇ ಅತ್ಯುತ್ತಮ ಕಾರ್ಯಕ್ಷಮತೆಯ ವೈಶಿಷ್ಟತೆಗಳಾದ ಮೂರು ರೈಡ್ ಮೋಡ್‌ಗಳು, ಡಿಜಿಟಲ್ ಎಲ್‌ಸಿಡಿ ಕ್ಲಸ್ಟರ್, ಎಲ್‌ಇಡಿ ಹೆಡ್‌ಲ್ಯಾಂಪ್ ಹಾಗೂ ಟೇಲ್‌ಲ್ಯಾಂಪ್ ಮತ್ತು ಜಿಟಿಟಿಗಳನ್ನು ಒಳಗೊಂಡಿದೆ. ಈ ವಿಭಾಗದಲ್ಲಿ ಮೊದಲ ರೈಡ್ ಮೋಡ್‌ಗಳು ಎಂಜಿನ್ ಹಾಗೂ ಎಬಿಎಸ್ ಮೋಡ್‌ನ ಸಂಯೋಜನೆಯಾಗಿದ್ದು 3 ರೈಡ್ ಮೋಡ್‌ಗಳನ್ನು ನೀಡುತ್ತವೆ. ಅಂದರೆ ಅರ್ಬನ್, ಸ್ಪೋರ್ಟ್ ಮತ್ತು ರೈನ್ ಹೆಸರಿನ ಮೂರು ವಿವಿಧ ರೈಡ್ ಮೋಡ್‌ಗಳನ್ನು ಹೊಂದಿದೆ. ಇವುಗಳನ್ನು ವಿಭಿನ್ನ ಪರಿಸರದ ಸವಾರಿಗಾಗಿ ವಿನ್ಯಾಸಗೊಳಿಸಲಾಗಿದೆ.

60ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಬಲ ಉಪಸ್ಥಿತಿ ಹೊಂದಿರುವ ಟಿವಿಎಸ್ ಅಪಾಚೆ, ವಿಶ್ವದಾದ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಪೋರ್ಟ್ಸ್ ಮೋಟರ್‌ಸೈಕಲ್ ಬ್ರಾಂಡ್ ಆಗಿದೆ. ಟಿವಿಎಸ್ ರೇಸಿಂಗ್ ಡಿಎನ್‌ಎಯಿಂದ ರೂಪುಗೊಂಡಿರುವ ಈ ಸರಣಿಯು ತನ್ನ ಕಾರ್ಯಕ್ಷಮತೆ, ವಿಶಿಷ್ಟ ವಿನ್ಯಾಸ, ತಂತ್ರಜ್ಞಾನ ಹಾಗೂ ಎಂಜಿನೀಯರಿಂಗ್ ನಿಂದ ಹಿಡಿದು ಸುಲಲಿತ ಸವಾರಿ, ಸುರಕ್ಷತೆ ಮತ್ತು ಸೌಕರ್ಯಗಳ ಮೇಲೆ ಕೇಂದ್ರೀಕೃತವಾಗಿರುವ ಹೊಸ ಬಗೆಯ ಅನುಭವ ನೀಡಲಿವೆ. ಎಲ್ಲ ಬಗೆಯ ರಸ್ತೆಗಳಿಗೂ (ಟ್ರ‍್ಯಾಕ್ ಟು ರೋಡ್) ಹೊಂದಿಕೆಯಾಗುವ ತತ್ವ ಆಧರಿಸಿ ತಯಾರಿಸಲಾಗಿರುವ ಟಿವಿಎಸ್ ಅಪಾಚೆ ಸರಣಿಯು, ರೇಸಿಂಗ್ ಅನುಭವವು ಎಲ್ಲರಿಗೂ ಸಮಾನವಾಗಿ ದೊರೆಯಲು ನೆರವಾಗಲಿದೆ. ಅಪಾಚೆ ಸರಣಿಯು ಕೇವಲ ಒಂದು ಉತ್ಪನ್ನವಾಗಿರದೆ ಹೆಚ್ಚು ಇಷ್ಟಪಡುವ ಮೋಟರ್‌ಸೈಕಲ್ ಬ್ರಾಂಡ್ ನಿಂದ ರೇಸಿಂಗ್‌ನ ಜನಪ್ರಿಯ ಬ್ರಾಂಡ್ ವರೆಗೆ ಈ ಸರಣಿಯು ಈಗ ಬೆಳೆದುನಿಂತಿದೆ.

ಟಿವಿಎಸ್ ಮೋಟರ್ ಸಂಸ್ಥೆಯ ಪ್ರೀಮಿಯಂ ವಹಿವಾಟು ಮುಖ್ಯಸ್ಥ ವಿಮಲ್ ಸುಂಬ್ಲಿ ಅವರು ಟಿವಿಎಸ್ ಅಪಾಚೆ ಆರ್‌ಟಿಆರ್ 160 ಸರಣಿಯ ಹೊಸ ಮೋಟರ್‌ಸೈಕಲ್‌ಗಳನ್ನು ಕರ್ನಾಟಕದ ಮಾರುಕಟ್ಟೆಗೆ ಪರಿಚಯಿಸುವುದರ ಕುರಿತು ಮಾತನಾಡಿ, ‘ನಾಲ್ಕು ದಶಕಗಳಿಂದ ಶ್ರೀಮಂತ ರೇಸಿಂಗ್ ಪರಂಪರೆಯಲ್ಲಿ ಬೇರೂರಿರುವ ಟಿವಿಎಸ್ ಅಪಾಚೆ ಸರಣಿಯು, 5.5 ದಶಲಕ್ಷಕ್ಕಿಂತಲೂ ಹೆಚ್ಚು ಉತ್ಸಾಹಿಗಳ ಜಾಗತಿಕ ಸಮುದಾಯವಾಗಿ ಬೆಳೆದಿದೆ. ವಿಶ್ವದಾದ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರೀಮಿಯಂ ಮೋಟರ್‌ಸೈಕಲ್ ಬ್ರಾಂಡ್ ಗಳಲ್ಲಿ ಒಂದಾಗಿದೆ. ಪಟ್ಟುಬಿಡದೆ ನಿರಂತರ ಕಾರ್ಯಕ್ಷಮತೆ ಪ್ರದರ್ಶಿಸುವ ಟಿವಿಎಸ್ ಅಪಾಚೆ ಸರಣಿಯು ಅತ್ಯಾಧುನಿಕ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ. ಈಗ, ಟಿವಿಎಸ್ ಅಪಾಚೆ ಆರ್‌ಟಿಆರ್ 160 ಸರಣಿಯ ಆಕರ್ಷಕ ಹೊಸ ಕಪ್ಪುಬಣ್ಣದ ಆವೃತ್ತಿಯೊಂದಿಗೆ, ಇದು ನಮ್ಮ ಗ್ರಾಹಕರನ್ನು ಸದೃಢ ಮತ್ತು ಮನ ಸೆಳೆಯುವ ನೋಟದೊಂದಿಗೆ ಆಕರ್ಷಿಸಲು ಸಿದ್ಧವಾಗಿದೆʼ ಎಂದು ಹೇಳಿದ್ದಾರೆ.

ಹೊಳೆಯುವ ಕಪ್ಪು ಬಣ್ಣ ಮತ್ತು ಸಂಪೂರ್ಣ ಹೊಸ ಅವತಾರದಲ್ಲಿ ಇರುವ ಈ ಬೈಕ್ ನಿರ್ಭೀತ ಮತ್ತು ಅಡೆತಡೆರಹಿತ ಚೈತನ್ಯವನ್ನು ನೀಡುತ್ತದೆ. ಈ ವೈಶಿಷ್ಟ್ಯವು ಇದನ್ನು ಇತರ ಮೋಟರ್‌ಸೈಕಲ್‌ಗಳಿಂದ ಭಿನ್ನವಾಗಿರಿಸಲಿದೆ. ಬೈಕ್‌ನ ಇಂಧನ ಟ್ಯಾಂಕ್ ಮೇಲೆ ಟಿವಿಎಸ್ ಲಾಂಛನವನ್ನು ಕನಿಷ್ಠ ಗ್ರಾಫಿಕ್ಸ್ ವಿನ್ಯಾಸದ ಕಪ್ಪುಬಣ್ಣದಲ್ಲಿ ಉಬ್ಬುಗೊಳಿಸಲಾಗಿದೆ. ಬ್ಲ್ಯಾಕ್ ಔಟ್ ಎಕ್ಸಾಸ್ಟ್ ನೆರವಿನಿಂದ ಬೆರಗುಗೊಳಿಸುವ ಈ ವಿನ್ಯಾಸವು ಯಂತ್ರದ ಸೌಂದರ್ಯದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 160 4V- ಗಾಡಿಯ ಪ್ರಮುಖ ವೈಶಿಷ್ಟ್ಯಗಳು

  • ಈ ವಿಭಾಗದಲ್ಲಿ ಗರಿಷ್ಠ 17.6 ಪಿಎಸ್ ಶಕ್ತಿಯನ್ನು ಹೊಂದಿದೆ
  • ಶಕ್ತಿಯಿಂದ ತೂಕದ ಅನುಪಾತ ಅತ್ಯಧಿಕ
  • 3 ರೈಡ್ ಮೋಡ್ (ಸವಾರಿ ಮಾದರಿ)ಗಳನ್ನು ಒಳಗೊಂಡಿದೆ
  • ಡಿಆರ್‌ಎಲ್ ಜೊತೆಗೆ ಎಲ್‌ಇಡಿ ಹೆಡ್‌ಲ್ಯಾಂಪ್ ನೊಂದಿಗೆ ಬರಲಿದೆ

ಟಿವಿಎಸ್ ಅಪಾಚೆ ಆರ್‌ಟಿಆರ್ 160-ರ ಪ್ರಮುಖ ವೈಶಿಷ್ಟ್ಯಗಳು
• ಮೂರು ರೈಡ್ ಮೋಡ್‌ಗಳು – ರೈನ್, ಅರ್ಬನ್ ಮತ್ತು ಸ್ಪೋರ್ಟ್ಸ್

  • ಎಲ್‌ಇಡಿ ಹೆಡ್‌ಲ್ಯಾಂಪ್

ಕಪ್ಪು ಬಣ್ಣದ ಆವೃತ್ತಿಯ – ಟಿವಿಎಸ್ ಅಪಾಚೆ ಆರ್‌ಟಿಆರ್ 160 ಸರಣಿಯು ವಿಶೇಷ ಬೆಲೆೆ ರೂ. 1,09,990 (ಕರ್ನಾಟಕ ಎಕ್ಸ್ ಷೋರೂಮ್)ಗೆ ದೊರೆಯಲಿದೆ. ಮತ್ತು ಟಿವಿಎಸ್ ಅಪಾಚೆ ಆರ್‌ಟಿಆರ್ 160 4V ಬೆಲೆ ರೂ. 1,19,990 (ಕರ್ನಾಟಕ ಎಕ್ಸ್ ಷೋರೂಮ್) ಗೆ ಲಭ್ಯವಿದೆ.