ಬೆಂಗಳೂರು: ಕೊರೊನಾ ಸಂಕಷ್ಟ ಕಾಲದಲ್ಲಿ ಸಂಗೀತಾ ಮೊಬೈಲ್ಸ್ ಈಗ ಜೊಮಾಟೊ ಸುಮಾರು 10 ಲಕ್ಷ ಜನರಿಗೆ ಆಹಾರವನ್ನು ನೀಡುವ ಮೂಲಕ ಗಮನಸೆಳೆದಿದೆ.
ಹಾಗೆನೋಡಿದರೆ ಭಾರತದ ಅತ್ಯಂತ ದೊಡ್ಡ ಮೊಬೈಲ್ ರೀಟೇಲ್ ಬ್ರಾಂಡ್ ಸಂಗೀತಾ ಸ್ವಾರ್ಥರಹಿತವಾಗಿ ಸಮಾಜಕ್ಕೆ ಸೇವೆ ಒದಗಿಸುವ ನಿಟ್ಟಿನಲ್ಲಿ ಬಹಳ ವರ್ಷಗಳಿಂದಲೂ ಸದಾ ಸಕ್ರಿಯವಾಗಿದ್ದು ಅದಕ್ಕೆ ಈಗ ಜೊಮಾಟೊದ NGO ಸಂಸ್ಥೆ ಫೀಡಿಂಗ್ ಇಂಡಿಯಾದೊಂದಿಗೆ ಸಹಯೋಗವನ್ನು IamFeedingIndia ಕಾರ್ಯಕ್ರಮದ ಅಡಿಯಲ್ಲಿ ದಕ್ಷಿಣ ಭಾರತದಾದ್ಯಂತ 10 ಲಕ್ಷ ಜನರಿಗೆ ಆಹಾರ ನೀಡಿದ್ದು ಮಧ್ಯಾಹ್ನ 12 ರವರೆಗೆ ವಿವಿಧ ನಗರಗಳಲ್ಲಿ ತನ್ನ ಹಲವು ಮಳಿಗೆಗಳ ಎದುರಿನಲ್ಲಿ ಆಹಾರದ ಪ್ಯಾಕೆಟ್‌ಗಳನ್ನೂ ವಿತರಿಸುವ ಕಾರ್ಯ ಮುಂದುವರೆಸಿದೆ.
ಇದರೊಂದಿಗೆ ಹೋಮ್ ಕ್ವಾರೆಂಟೈನ್ ಆಗಿರುವ ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಕಾನ್ಸೆಂಟ್ರೇಟರ್‌ಗಳ ಪೂರೈಕೆ ಮತ್ತು ರೀಫಿಲ್ ಪಿಕಪ್ ಕೂಡಾ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಅವರ ನಿರ್ವಹಣೆಯಲ್ಲಿ ಮಾಡುತ್ತಿದ್ದು ಅವರು ತಮ್ಮ ` MP OXY BANK’ ಕಾರ್ಯಕ್ರಮದ ಮೂಲಕ ರೋಗಿಗಳಿಗೆ 85-92ರ SpO2 ಮಟ್ಟವನ್ನು ಸ್ಥಿರಗೊಳಿಸಲು ನೆರವಾಗಿ ವೇಗವಾಗಿ ಗುಣವಾಗುವಂತೆ ಮಾಡುತ್ತಿದೆ.
ಡಾ.ತೇಜಸ್ವಿನಿ ಅನಂತ್‌ಕುಮಾರ್ ಅವರ ಅಧ್ಯಕ್ಷತೆಯ ಖ್ಯಾತ ಸ್ವಯಂಸೇವಾ ಸಂಸ್ಥೆ ಅದಮ್ಯ ಚೇತನದೊಂದಿಗೆ ಸಹಯೋಗ ಹೊಂದಿರುವ ಸಂಗೀತಾ ಸಿಬ್ಬಂದಿ ಮತ್ತು ಅದರ ಡೆಲಿವರಿ ಟ್ರಕ್‌ಗಳು ಆಹಾರದ ಪ್ಯಾಕೆಟ್‌ಗಳನ್ನು ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಲವಾರು ಆರೋಗ್ಯಸೇವಾ ಕಾರ್ಯಕರ್ತರಿಗೆ ವಿತರಿಸಲು ನೆರವಾಗುತ್ತಿದೆ.
ಸೌಹಾರ್ದತೆಯ ದ್ಯೋತಕವಾಗಿ ಸಂಗೀತಾ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಈ ಸಂಕಷ್ಟದ ಸಮಯದಲ್ಲಿ ಶ್ರಮಿಸುತ್ತಿರುವ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಲು ಕೆಲವು ಪೊಲೀಸ್ ಠಾಣೆಗಳಿಗೂ ಭೋಜನದ ಪಾಕೆಟ್‌ಗಳನ್ನು ಪೂರೈಸಿದೆ. ಮತ್ತು ಗ್ರೀನ್ ಆರ್ಮಿ NGO ಸಹಯೋಗದಲ್ಲಿ 300 ಹೋಮ್-ಐಸೊಲೇಟ್ ಆಗಿರುವ ಕೋವಿಡ್ ರೋಗಿಗಳಿಗೆ ಔಷಧಗಳನ್ನೂ ವಿತರಿಸಲು ನೆರವಾಗಿದೆ.ಸಂಗೀತಾ ಕನ್ನಡದ ಖ್ಯಾತ ನಟ ಉಪೇಂದ್ರ ಅವರೊಂದಿಗೆ ಚಿತ್ರರಂಗದ ಹಾಗೂ ಹೊರಗಿನವರಿಗೆ ನೆರವಾಗುವ ಯೋಜನೆಗೂ ಧನಸಹಾಯ ನೀಡಿದೆ.
ಸನ್ನಿವೇಶ ಹೇಗೆಯೇ ಇರಲಿ, ನಾವು ಪರಸ್ಪರರಿಗೆ ನೆರವಾಗಬೇಕು. ಮತ್ತು ಇಂತಹ ಸಂಕಷ್ಟದ ಸಮಯದಲ್ಲಿ ನಾವು ನಮ್ಮ ನೆರೆಹೊರೆಯ ರಾಯಭಾರಿಗಳಾಗಬೇಕು. ನಾವು ಸದ್ಯದ ಪರಿಸ್ಥಿತಿ ಕೂಡ ಬೇಗನೇ ಅಂತ್ಯಗೊಳ್ಳುತ್ತದೆ ಎಂದು ನಮ್ಮ ನಂಬಿಕೆ ಹಾಗೂ ಆಸೆ. ಅಲ್ಲಿಯವರೆಗೂ ಸುರಕ್ಷಿತವಾಗಿರಿ ಮತ್ತು ನಿಮ್ಮ ಬಂಧುಮಿತ್ರರಿಗೆ ಈ ಬಿಕ್ಕಟ್ಟಿನಿಂದ ಹೊರಬರಲು ನೆರವಾಗಿರಿ ಎಂದು ಸಂಗೀತಾ ಮೊಬೈಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸುಭಾಶ್ ಚಂದ್ರ ಹೇಳಿದ್ದಾರೆ.