ಮೈಸೂರು,ಜ. ಮೈಸೂರು ನಗರ ನರಸಿಂಹರಾಜ ಪೊಲೀಸ್ ಠಾಣಾ ಸರಹದ್ದಿನ ಎಸ್.ಎಸ್ ಗರದಲ್ಲಿ ವಾಸವಾಗಿರುವ ಅಬ್ದುಲ್ ಸಮದ್ ಬಿನ್ ಲೇಟ್ ಹೈದರ್ ಅಲಿ ಎಂಬವರಿಗೆ ಒಂದು ತಿಂಗಳ ಹಿಂದೆ ಯೂಸುಫ್ ಎಂಬಾತ ಪರಿಚಯವಾಗಿ ತಾನು ಚಿನ್ನದ ವ್ಯಾಪಾರಿ ಆಗಿದ್ದು, ಕಡಿಮೆ ಬೆಲೆಗೆ ಚಿನ್ನವನ್ನು ಕೊಡಿಸುತ್ತೇನೆಂದು ತಿಳಿಸಿ, ಅಡ್ವಾನ್ಸ್ ಹಣ ಎಂದು 5,00,000 ರೂಗಳನ್ನು ಪಡೆದು ಚಿನ್ನ ನೀಡದೆ ಮೋಸ ಮಾಡಿರುವ ಬಗ್ಗೆ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೇ ರೀತಿ ವಿ.ವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಹನಾಥ್ ಅಸ್ಲಂ ಎಂಬವರಿಗೆ ಯೂಸುಫ್ ಹಾಜಿ ಎಂಬವನು ಪರಿಚಯವಾಗಿ ತಾನು ಆರ್ ಬಿಐ ಡೀಲರ್, ಕಡಿಮೆ ಬೆಲೆಗೆ ಚಿನ್ನದ ಬಿಸ್ಕೆಟ್ಗಳನ್ನು ಕೊಡಿಸುತ್ತೇನೆಂದು ನಂಬಿಸಿ, ಶಹನಾಥ್ ಅಸ್ಲಂ ಅವರಿಂದ 23,50,000ರೂ.ಗಳನ್ನು ಪಡೆದು,ಚಿನ್ನವನ್ನು ಕೊಡಿಸದೆ ಮೋಸ ಮಾಡಿರುವ ಬಗ್ಗೆ ವಿ.ವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 7ಮಂದಿ ಅಂತರ್ ರಾಜ್ಯ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣಗಳ ಪತ್ತೆ ಸಂಬಂಧ ಡಿಸಿಪಿ ಗೀತಪ್ರಸನ್ನ ಅವರ ಮಾರ್ಗದರ್ಶನದಲ್ಲಿ ನರಸಿಂಹರಾಜ ಮತ್ತು ವಿ.ವಿ ಪುರಂ ಠಾಣೆಯ ವಿಶೇಷ ತಂಡವು ಜಂಟಿ ಕಾರ್ಯಚರಣೆ ನಡೆಸಿ 11.01.2021ರಂದು ಈ ಪ್ರಕರಣದ ಆರೋಪಿಗಳಾದ ಮುಸ್ತಫಾ @ ಯೂಸುಫ್ ಹಾಜಿ ಬಿನ್ ಅಲಿ, (57), ಆಯಿಷಾ ಮಂಜಿಲ್, ಪಟ್ಟುವಂ ಗ್ರಾಮ, ಅರಿಯಲ್ ಪೋಸ್ಟ್, ತಳ್ಳಿಪರಂಬ ತಾಲೂಕು, ಕಣ್ಣೂರು ಜಿಲ್ಲೆ, ಕೇರಳ ರಾಜ್ಯ, ಕುನ್ಹಿರಾಮನ್ @ ರಾಮ್ಜಿ ಬಿನ್ ಕೋರೆನ್, (59), ಚರಿಯಾಂಡಿ ಹೌಸ್, ಕರಿಂಬೋ ಪೋಸ್ಟ್, ತಳಿಪರಂಬ ತಾಲೂಕು, ಕಣ್ಣೂರು ಜಿಲ್ಲೆ, ಕೇರಳ ರಾಜ್ಯ, ಅಬ್ದುಲ್ ಹಕೀಂ @ ಮೊಹಮ್ಮದ್ ಬಿನ್ ಕೆ.ಇಬ್ರಾಹಿಂ, (44), ನಿಯರ್ ಮುತ್ತಪ್ಪ ಟೆಂಪಲ್, 9ನೇ ಬ್ಲಾಕ್, ಮಡಿಕೇರಿ ಟೌನ್, ಕೊಡಗು ಜಿಲ್ಲೆ ಎಂಬವರನ್ನು ದಸ್ತಗಿರಿ ಮಾಡಿದ್ದು, ಇವರುಗಳನ್ನು ವಿಚಾರಣೆಗೆ ಒಳಪಡಿಸಿ ನಂತರ 13.01.2021ರಂದು ಇತರೆ ಆರೋಪಿಗಳಾದ ಮೊಹಮ್ಮದ್ ಶಾಫಿ ಬಿನ್ ಬಿ ಇಬ್ರಾಹಿಂ, (42), ಬನ್ನಂಬಾಡಿ ಹೌಸ್, ಹಾದೂರು ಪೋಸ್ಟ್, ಕಾಸರಗೋಡು ತಾ ಮತ್ತು ಜಿಲ್ಲೆ, ಗುರುಚರಣ್ ಬಿ.ಪಿ ಬಿನ್ ಬಿ.ಎಸ್.ಪ್ರಕಾಶ್, (34), 10ನೇ ಕ್ರಾಸ್, ಮಹದೇವ್ ಪೇಟೆ, ಮಡಿಕೇರಿ ಟೌನ್. ಕೊಡಗು ಜಿಲ್ಲೆ, ಕಾರ್ತಿಕ್ ಕೆ.ಎ ಬಿನ್ ಕೆ.ಕೆ.ಅಪ್ಪಯ್ಯ, (29), ಕೈಬೆಲಿರ ಹೌಸ್, ಕುಂಜಿಲ ಗ್ರಾಮ, ಕಕ್ಕಬೆ ಪೋಸ್ಟ್, ಮಡಿಕೇರಿ ತಾಲೋಕು, ಕೊಡಗು ಜಿಲ್ಲೆ, ಸಮೀವುಲ್ಲಾ @ ಸಮೀರ್ ಬಿನ್ ರಿಯಾಜ್ ಪಾಷ, (47), ಮನೆ ನಂ.09, ಹಲೀಂ ನಗರ, ಬನ್ನಿಮಂಟಪ, ಮೈಸೂರು ನಗರ ಎಂಬವರುಗಳನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಲಾಗಿ, ಈ ಆರೋಪಿಗಳು ಶೋಕಿಗಾಗಿ ಹಣದ ಅವಶ್ಯಕತೆ ಇದ್ದುದರಿಂದ ಈ ರೀತಿ ವಂಚನೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಈ ಆರೋಪಿಗಳನ್ನು ಮಡಿಕೇರಿ ಹಾಗೂ ಇತರೆ ಸ್ಥಳಗಳಿಂದ ಪತ್ತೆ ಮಾಡಿ, ದಸ್ತಗಿರಿ
ಮಾಡಲಾಗಿರುತ್ತದೆ. ಆರೋಪಿಗಳಿಂದ 02 ಪ್ರಕರಣಗಳಿಗೆ ಸಂಬಂಧಪಟ್ಟಂತೆ 15,00,000ರೂ. ನಗದು ಹಣ (ನರಸಿಂಹರಾಜ ಪೊಲೀಸ್ ಠಾಣೆಯ 2,50,000ರೂ.ಹಾಗೂ ವಿ.ವಿ ಪುರಂ ಪೊಲೀಸ್ ಠಾಣೆಯ 12,50,000ರೂ. ಹಾಗೂ ಕೃತ್ಯಕ್ಕೆ ಬಳಸಿದ್ದ 20 ಗ್ರಾಂ ತೂಕದ 01 ಗೋಲ್ಡ್ ಬಿಸ್ಕೆಟ್, 02 ಕಾರು, 01 ದ್ವಿಚಕ್ರ ವಾಹನ ಹಾಗೂ 05 ಮೊಬೈಲ್ ಫೋನ್ಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ. ಉಳಿದ ಹಣವನ್ನು ಆರೋಪಿಗಳು ಶೋಕಿಗಾಗಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಖರ್ಚು ಮಾಡಿರುವುದಾಗಿ ತಿಳಿಸಿರುತ್ತಾರೆ.
1 ಮತ್ತು 4ನೇ ಆರೋಪಿಗಳಾದ ಮುಸ್ತಫಾ @ ಯೂಸುಫ್ ಹಾಗೂ ಮೊಹಮ್ಮದ್ ಶಾಫಿ ಇವರುಗಳ ವಿರುದ್ದ ಕೇರಳದ ಕೊಲ್ಲಂ ಜಿಲ್ಲೆಯ ಕರುನಾಗಪಳ್ಳಿ ಪೊಲೀಸ್ ಠಾಣೆಯಲ್ಲಿ ಇದೇ ರೀತಿ ವಂಚನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದ ವಿಚಾರಣೆಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿಸಿಪಿ ಗೀತಪ್ರಸನ್ನ, ನರಸಿಂಹರಾಜ ವಿಭಾಗದ ಎಸಿಪಿ ಶಿವಶಂಕರ್ ಮಾರ್ಗದರ್ಶನದಲ್ಲಿ ನರಸಿಂಹರಾಜ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆ ಕ್ಟರ್ ಅಜರುದ್ದಿನ್, ವಿ.ವಿ ಪುರಂ ಪೊಲೀಸ್ ಇನ್ಸ್ಪೆಕ್ಟರ್ ಅರುಣ್, ನರಸಿಂಹರಾಜ ಠಾಣೆಯ ಎಎಸ್ ಐ ಪಾಪಣ್ಣ, ಮೇಲ್ಕಂಡ ಠಾಣೆಗಳ ಸಿಬ್ಬಂದಿಗಳಾದ ಮಂಜುನಾಥ್, ಪ್ರಸನ್ನ, ಮಹೇಶ್, ದೊಡ್ಡೇಗೌಡ, ರಮೇಶ್, ಸುನಿಲ್ ಕುಮಾರ್, ಈರೇಶ್, ಸುರೇಶ್, ಪರಶುರಾಮ ಹಾಗೂ ತಾಂತ್ರಿಕ ಕೋಶದ ಸಿಬ್ಬಂದಿಗಳಾದ ಮಂಜು, ಕುಮಾರ, ಶ್ಯಾಂಸುಂದರ್ ಮಾಡಿರುತ್ತಾರೆ.

By admin