6 ನೇ ವಾರ್ಡ್ ಉಪಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ
ಡಿ. ೨೭ ರಂದು ಚಾಮರಾಜನಗರ ನಗರಸಭೆ 6 ನೇ ವಾರ್ಡ್‌ಗೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ನಗರದ 6 ನೇ ವಾರ್ಡಿನ ಬೀದಿಗಳಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಸಯ್ಯದ್ ಅತೀಕ್ ಅಹಮ್ಮದ್ ಪರ ಮತಯಾಚನೆ ಮಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯಕಲ್ಪಿಸುವುದಲ್ಲದೇ ತಳಮಟ್ಟದಿಂದ ಸೇವೆಸಲ್ಲಿಸಿದ ಕಾರ್ಯಕರ್ತರಿಗೂ ಸೂಕ್ತಸ್ಥಾನಮಾನ ನೀಡಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಆಡಳಿತವಿದ್ದಾಗ ತಂದ ಜನಪರ ಕಾರ್ಯಕ್ರಮಗಳ ಬಗ್ಗೆ ಅರಿವು ಪಡೆದು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನ, ಜಿಲ್ಲಾ ಎಸ್ಟಿಮೋರ್ಚಾ ಅಧ್ಯಕ್ಷ ಬಿಕಾಂ ಮಹದೇವನಾಯಕ, ಜಿಪಂ ಮಾಜಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ. ಮುಖಂಡರಾದ ಪು.ಶ್ರೀನಿವಾಸನಾಯಕ, ಅರಕಲವಾಡಿಸೋಮನಾಯ್ಕ, ಎಂ.ಡಿ.ಕಿಥಾಯಪ್, ಅಸ್ಲಾಂಷರೀಪ್, ಕೆ.ನೀಲಶೇಖರ್, ವೆಂಕಟರಮಣನಾಯಕ, ನಗರಸಭೆ ಮಾಜಿಸದಸ್ಯ ಮಹೇಶ್ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.