ಗುಂಡ್ಲುಪೇಟೆ: ಓಂಕಾರ್ ವನ್ಯಜೀವಿ ವಲಯದ ನಾಗಣಾಪುರ ಬ್ಲಾಕ್-2ನಲ್ಲಿ ಅಕ್ರಮವಾಗಿ ಹುರುಳಿ ಹಾಕಿ ಜಿಂಕೆ ಮತ್ತು ಮೊಲ ಬೇಟೆಯಾಡಿದ್ದ 6 ಮಂದಿ ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಮೂರು ಜಿಂಕೆ, ಒಂದು ಮೊಲವನ್ನು ಹುರುಳಿ ಹಾಕಿ ಬೇಟೆಯಾಡಿ ಅಡುಗೆ ಮಾಡಲು ತಯಾರಿ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ವಿದ್ಯಾಸಾಗರ್(29), ರವೀಂದ್ರ(41), ಯಶೋಧರ(34), ಪ್ರಸನ್ನ(38), ಸುಜಿತ್(28), ಕುಶಾಲಪ್ಪ(47) ಎಂಬುವವರನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ತಲೆಮರಿಸಿಕೊಂಡಿದ್ದಾನೆ ಎನ್ನಲಾಗಿದೆ.

ಬಂಧಿತರಿಂದ ಎರಡು ಒಂಟಿನಳಿಕೆ ಬಂದೂಕು, ಮಾರಕಾಸ್ತ್ರಗಳು, ಒಂದು ಮಾರುತಿ ಕಾರು ವಶಕ್ಕೆ ಪಡೆಯಲಾಗಿದೆ.

ಎಸಿಎಫ್ ಪರಮೇಶ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಓಕಾರ್ ಆರ್‍ಎಫ್‍ಓ ನಾಗೇಂದ್ರ ನಾಯಕ, ಶಿವಕುಮಾರ್, ಸ್ತ್ರೀ ಪ್ರವೀಣ ಹಂಚಿನಾಳ, ಎಸ್‍ಟಿಪಿಎಫ್ ಸಿಬ್ಬಂದಿಗಳಾದ
ರಮೇಶ್ ಮಟಪತಿ, ಕಾರ್ತಿಕ್, ಶ್ರೀಕಾಂತ್.ಎ, ಕುಮಾರ ಸೇರಿದಂತೆ ದಾಳಿಯಲ್ಲಿ ಭಾಗವಹಸಿದ್ದರು.

ವರದಿ: ಬಸವರಾಜು ಎಸ್ ಹಂಗಳ

By admin