ಮೈಸೂರು : ಸುಣ್ಣದಕೇರಿ ೫೦ನೇ ವಾರ್ಡ್ ಒಳಚರಂಡಿ ವ್ಯವಸ್ಥೆ ಪ್ರತಿನಿತ್ಯ ನಗರದ ಒಂದಿಲ್ಲೊಂದು ಭಾಗದಲ್ಲಿ ಸಮಸ್ಯೆಯನ್ನು ಸೃಷ್ಟಿಸಿ ಸಾರ್ವಜನಿಕರ ಪಾಲಿಗೆ ನಗರಜೀವನವನ್ನು ನರಕಪ್ರಾಯವಾಗಿಸುತ್ತಿದೆ.ನಗರದ ಪ್ರಮುಖ ರಸ್ತೆಯಲ್ಲಿ ಸುಣ್ಣದಕೇರಿ 5ನೇ ಕ್ರಾಸ್, 10ನೇ ಕ್ರಾಸ್, 8ನೇ ಕ್ರಾಸ್ ಸಿದ್ದಪ್ಪಾಜಿ ದೇವಾಲಯದ ಬಳಿ ಯುಜಿಡಿ ಮ್ಯಾನ್‌ಹೋಲ್‌ನಿಂದ ಇದ್ದಕ್ಕಿದ್ದಂತೆ ಒಳಚರಂಡಿ ಕೊಳಕು ಹೊರಬರಲಾರಂಭಿಸಿತು. ಆ ಪ್ರದೇಶವೆಲ್ಲ ಸಹಿಸಲಸಾಧ್ಯವಾದ ದುರ್ನಾತದಿಂದ ತುಂಬಿಹೋಗಿತ್ತು. ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರು, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ರಸ್ತೆಯಲ್ಲಿ ಉಂಟಾದ ಈ ದಿಢೀರ್ ಸಮಸ್ಯೆಯಿಂದ ಉಸಿರಾಡುವುದೇ ಕಷ್ಟವೆನಿಸುವಂತಾಗಿತ್ತು. ರಸ್ತೆಯ ಮೇಲೆ ಹರಿದ ಕೊಳಕು ನೀರು ವಾಹನಗಳ ಓಡಾಟದಿಂದ ಇಡೀ ರಸ್ತೆಯೆಲ್ಲ ಹರಡಿದ್ದಲ್ಲದೇ, ವಾಹನಗಳಿಗೂ ಮೆತ್ತಿಕೊಂಡು ದುರ್ನಾತದಿಂದ ಸಾರ್ವಜನಿಕರು ತೀವ್ರ ಕಿರಿಕಿರಿ ಅನುಭವಿಸುವಂತಾಗಿದೆ.

ವಾಟ್ಸಪ್ ಮೊರೆ: ಸಮಸ್ಯೆಯ ಬಗ್ಗೆ ತಕ್ಷ ಣವೇ ಸಾರ್ವಜನಿಕರು ಮೈಸೂರು ನಗರ ಪಾಲಿಕೆ ಆಯುಕ್ತ ಶೇಖ್ ಆಸೀಫ್ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಿಳಿಸುವ ಪ್ರಯತ್ನ ಮಾಡಿದರಾದರೂ ಆಯುಕ್ತರು ಕರೆ ಸ್ವೀಕರಿಸಲಿಲ್ಲ. ಮಾಧ್ಯಮದವರ ಗಮನ ಸೆಳೆದ ಸಾರ್ವಜನಿಕರೊಬ್ಬರು ಕೊನೆಗೆ ನಗರ ಪಾಲಿಕೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಚಿತ್ರಣಗಳು ಕಳುಹಿಸಿದ್ದು ಯಾವುದೇ ಪ್ರಯೋಜನ ಹಾಗಿಲ್ಲ ಅಧಿಕಾರಿಗಳು ಯುಜಿಡಿ ಸಮಸ್ಯೆ ಪರಿಹಾರಕ್ಕೆ ಮೀನಮೇಷ ಎಣಿಸುತ್ತಿದ್ದಾರೆ.೫೦ನೇ ವಾರ್ಡ್ ನಲ್ಲಿ ಇದಕ್ಕೆ ಶಾಶ್ವತ ಪರಿಹಾರ ನೀಡುವಂತೆ ಸ್ಥಳೀಯರು ತಮ್ಮ ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.
ಹೇಮಂತ್ ಕುಮಾರ್
೫೦ ನೇ ವಾರ್ಡ್ ನಿವಾಸಿ
‘ಯುಜಿಡಿ ಅವ್ಯವಸ್ಥೆಯಿಂದ ಇಡೀ ಬಡಾವಣೆ ಕೊಳೆಗೇರಿಯಂತಾಗಿದೆ. ಮ್ಯಾನ್‌ಹೋಲ್‌ಗಳಿಂದ ಕೊಳಚೆ ನೀರು ಹಾಗೂ ಮಲಮೂತ್ರ ರಸ್ತೆಗೆ ಹರಿಯುತ್ತಿದ್ದು, ಬಡಾವಣೆಯಲ್ಲಿ ದುರ್ನಾತ ಹೆಚ್ಚಿದೆ. ರಸ್ತೆಗಳಲ್ಲಿ ಓಡಾಡಲು ಸ್ಥಳೀಯರಿಗೆ ಹಾಗೂ ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿದೆ’
ಮಹೇಶ್ ನಾಯಕ್
೫೦ ನೇ ವಾರ್ಡ್ ನಿವಾಸಿ
ಸುವರ್ಣ ಬೆಳಕು ಫೌಂಡೇಷನ್’ ಅಧ್ಯಕ್ಷರು
ಯುಜಿಡಿ ಸಮಸ್ಯೆ ಎಲ್ಲಿ ಯಾವ ಭಾಗದಲ್ಲಿ ಹೆಚ್ಚು ಹೆಚ್ಚು ಆಗುತ್ತಿದೆ. ಅಲ್ಲಿನ ಸ್ಥಳಕ್ಕೆ ಸಂಬಂಧ ಪಟ್ಟ ಇಂಜಿನಿಯರ್’ ಗಳು
ಬಂದು ಪರೀಶೀಲನೆ ಮಾಡಿ ಅದಕ್ಕೆ ಸೂಕ್ತ ಪರಿಹಾರ ನೀಡಿ ಕಂಡುಕೊಳ್ಳಬಹುದು. ಅದರೆ ಇಂಜಿನಿಯರ್’ ಗಳು ಸಂಬಂಧ ಪಟ್ಟ ಅಧಿಕಾರಿಗಳು ತಲೆಕೆಡಿಸಿಕೊಳ್ಳತ್ತಿಲ್ಲ.ಈಗ ಇನ್ನೂ ಮಳೆಗಾಲ ಪ್ರಾರಂಭ ಗೊಳ್ಳುತ್ತಿದೆ. ಅದಷ್ಟು ಬೇಗ ಪರಿಹಾರ ಕಂಡು ಕೊಂಡರೆ ಒಳ್ಳೆಯದು.