ಮೈಸೂರು: ಕೋವಿಡ್-19 ಹರಡುವಿಕೆಯ ಎರಡನೇ ಅಲೆಯನ್ನು ತಡೆಯುವ ಸಲುವಾಗಿ ಸರ್ಕಾರ ಲಾಕ್ ಡೌನ್ ಜಾರಿ ಮಾಡಿದ್ದು, ನಗರದಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದು, ಅನಗತ್ಯವಾಗಿ ಸಂಚರಿಸಿದ 388ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರ ವ್ಯಾಪ್ತಿಯ ಎಲ್ಲ್ಲ ಸ್ಥಳಗಳಲ್ಲಿ ಓಡಾಡುವ ಸಾರ್ವಜನಿಕರನ್ನು ಪೊಲೀಸರು ಪರಿಶೀಲಿಸಿದ್ದು, ಈ ವೇಳೆ ಸರ್ಕಾರದ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಅನಾವಶ್ಯಕವಾಗಿ ಓಡಾಡುತ್ತಿದ್ದ ಸಾರ್ವಜನಿಕರ 375ದ್ವಿ ಚಕ್ರ ವಾಹನಗಳು, 7 ಆಟೋ ರಿಕ್ಷಾ, 6 ಕಾರುಗಳು ಸೇರಿದಂತೆ ಒಂದೇ ದಿನದಲ್ಲಿ ಒಟ್ಟು 388 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇಷ್ಟೇ ಅಲ್ಲದೆ, ಕೋವಿಡ್-19 ಪ್ರಮುಖ ನಿಯಮಗಳಾದ ಮಾಸ್ಕ್ ಧರಿಸುವಿಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಉಲ್ಲಂಘನೆ ಸಂಬಂಧ ಮೈಸೂರು ನಗರದಲ್ಲಿ ಒಟ್ಟು 173 ಪ್ರಕರಣಗಳನ್ನು ದಾಖಲಿಸಿ, ರೂ. 33200ರೂ.ನ್ನು ಸ್ಥಳದಲ್ಲಿಯೇ ದಂಡ ವಿಧಿಸಿದ್ದಾರೆ. ಜತೆಗೆ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದ ನಜರ್‌ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಮೃಗಾಲಯದ ಮುಖ್ಯ ರಸ್ತೆಯಲ್ಲಿರುವ ಸುರಭಿ ಪಾಸ್ಟ್‌ಫುಡ್‌ನ ಮಾಲೀಕ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ತನ್ನ ಪಾಸ್ಟ್‌ಫುಡ್‌ನಲ್ಲಿ ಗ್ರಾಹಕರುಗಳಿಗೆ ಊಟವನ್ನು ಮಾರಾಟ ಮಾಡುತ್ತಾ ಕೋವಿಡ್-19 ಮಾರ್ಗಸೂಚಿಗಳನ್ನು ಹಾಗೂ ಲಾಕ್‌ಡೌನ್ ಆದೇಶವನ್ನು ಉಲ್ಲಂಘನೆ ಮಾಡಿರುವ ಸಂಬಂಧ ಸುರಭಿ ಫಾಸ್ಟ್‌ಫುಡ್‌ನ ಮಾಲೀಕರ ವಿರುದ್ದ ಹಾಗೂ ನಜರ್‌ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಮೃಗಾಲಯದ ಮುಖ್ಯ ರಸ್ತೆಯಲ್ಲಿರುವ ರಾಘವೇಂದ್ರ ಪಾಸ್ಟ್‌ಫುಡ್‌ನ ಮಾಲೀಕ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ತನ್ನ ಪಾಸ್ಟ್‌ಫುಡ್‌ನಲ್ಲಿ ಗ್ರಾಹಕರುಗಳಿಗೆ ಊಟವನ್ನು ಮಾರಾಟ ಮಾಡುತ್ತಾ ಕೋವಿಡ್-19ರ ಆದೇಶವನ್ನು ಉಲ್ಲಂಘನೆ ಮಾಡಿರುವ ಸಂಬಂಧ ರಾಘವೇಂದ್ರ ಫಾಸ್ಟ್‌ಫುಡ್‌ನ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಲು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.
ಕೋವಿಡ್-19 ನಿಯಮಗಳು ಹಾಗೂ ಲಾಕ್‌ಡೌನ್ ನಿಯಮಗಳ ಜಾರಿ ಸಂಬಂಧ ಮೈಸೂರು ನಗರ ಪೊಲೀಸರು ಮೇಲ್ಕಂಡಂತೆ ಪ್ರತಿ ನಿತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕೋವಿಡ್-೧೯ ಹರಡುವಿಕೆ ನಿಯಂತ್ರಣದಲ್ಲಿ ನಗರದ ಪೊಲೀಸರಿಗೆ ಸಾರ್ವಜನಿಕರು ಕೋವಿಡ್-೧೯ ನಿಯಮಗಳನ್ನು ಪಾಲಿಸುವ ಮೂಲಕ ಸಹಕಾರ ನೀಡಬೇಕೆಂದು ಪೊಲೀಸ್ ಆಯುಕ್ತರವರಾದ ಡಾ. ಚಂದ್ರಗುಪ್ತ ಅವರು ತಿಳಿಸಿದ್ದಾರೆ.

By admin