ಚಾಮರಾಜನಗರ:  ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಯೋಗದೊಂದಿಗೆ ಜಲ ಜೀವನ್ ಮಿಷನ್ ಯೋಜನೆಯ ವಿವಿಧ ಅನು?ನ ಹಂತದಲ್ಲಿ ತಾಂತ್ರಿಕ ಸಿಬ್ಬಂದಿಗಳಿಗೆ ಜಿಲ್ಲಾ ಮಟ್ಟದ ಎರಡನೇ ದಿನದ ತರಬೇತಿಯನ್ನು ಜಲ ಜೀವನ್ ಮಿಷನ್ ಯೋಜನೆಯನ್ನು  ಅನು?ನಗೊಳಿಸುತ್ತಿರುವ ಚಾಮರಾಜನಗರ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿಂದು  ಆಯೋಜಿಸಲಾಗಿತ್ತು 

 ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ತರಬೇತಿಯನ್ನು ಉದ್ದೇಶಿಸಿ ಮಾತನಾಡಿ ಜಿಲ್ಲಾಮಟ್ಟದ ಎರಡನೇ ದಿನದ ಕ್ಷೇತ್ರಭೇಟಿ ತರಬೇತಿ ಕಾರ್ಯಕ್ರಮ ಇದಾಗಿದ್ದು, ಯೋಜನೆ ಕುರಿತ ಅನೇಕ ವಿಷಯಗಳು ಸಮಗ್ರವಾಗಿ ಎಂಜಿನಿಯರ್, ಗುತ್ತಿಗೆದಾರರು ಸೇರಿದಂತೆ ಎಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಿಬ್ಬಂದಿಗಳಿಗೆ ತರಬೇತಿ ಉದ್ದೇಶ ಮನವರಿಕೆಯಾಗಿದೆ. ಶಿವಪುರ ಗ್ರಾಮದಲ್ಲಿ ೨೬೨೮ ನಳ ಸಂಪರ್ಕ ಇದೆ. ಈ ಪೈಕಿ ೧೫೧೮ ನಳ ಸಂಪರ್ಕ ಕಲ್ಪಿಸುವ ಗುರಿ ಹೊಂದಿದ್ದು, ಈಗಾಗಲೇ ೧೧೧೦ ನಳ ಅಳವಡಿಕೆಯಾಗಿದೆ. ಬಾಕಿ ಉಳಿದಿರುವ ಕಾಮಗಾರಿಯು ಪ್ರಗತಿಯಲ್ಲಿದೆ ಎಮದರು.

ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯಲ್ಲಿ ಶೇಕಡ ೫೦ರ? ಮಹಿಳಾ ಸದಸ್ಯರನ್ನು ಒಗ್ಗೂಡಿಸಿ ಗ್ರಾಮದ ತಮ್ಮ ವಾರ್ಡ್‌ಗಳಲ್ಲಿ ಎಎಒ ಕಾಮಗಾರಿ ಸರಿಯಾಗಿ ನಡೆಯುತ್ತಿದೆಯೆ, ಕಾಮಗಾರಿಯಲ್ಲಿ ಏನಾದರೂ ಸಮಸ್ಯೆ ಇದೆಯೆ? ಇತ್ಯಾದಿ ಜವಾಬ್ದಾರಿಗಳನ್ನು ಸದಸ್ಯರು ನಿರ್ವಹಿಸಬೇಕು. ಶಿವಪುರ ಗ್ರಾಮದಲ್ಲಿ ೧೧ ಜನ ಮಹಿಳಾ ಸದಸ್ಯರನ್ನು ಒಗ್ಗೂಡಿಸಿ ನೀರಿನ ಮಾದರಿ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತಿದೆ. ಜಲ ಜೀವನ್ ಮಿ?ನ್ ಯೋಜನೆಯಲ್ಲಿ ಸಮುದಾಯದ ಸಹಭಾಗಿತ್ವ ಅಗತ್ಯ ಎಂದು ತಿಳಿಸಿದರು.

ಶೇಕಡ ೧೦ರಷ್ಟು ಸಮುದಾಯ ವಂತಿಕೆ ಸಂಗ್ರಹಿಸಿ, ಸಂಗ್ರಹಿಸಿದ ಸಮುದಾಯ ವಂತಿಕೆಯನ್ನು ಸರ್ಕಾರಕ್ಕೆ ಸಂದಾಯ ಮಾಡಲಾಗುತ್ತದೆ, ಸಂದಾಯ ಮಾಡಿದ ವಂತಿಕೆ ಮೊತ್ತವು ಆನ್‌ಲೈನ್‌ನಲ್ಲಿ ಡಿಸ್‌ಪ್ಲೇ ಆಗಲಿದೆ. ಈಗಾಗಲೇ ಗ್ರಾಮ ಪಂಚಾಯಿತಿಗಳಿಂದ ನೀಡಿರುವ ೧೫ನೇ ಹಣಕಾಸು ಹಾಗೂ ಸಾರ್ವಜನಿಕರಿಂದ ಸಂಗ್ರಹಿಸಿದ ೧೦ರಷ್ಟು ವಂತಿಕೆಯ ನಿರ್ವಹಣೆಯನ್ನು ಕೇಂದ್ರಸರ್ಕಾರ ಗಮನಿಸಲಿದೆ. ಹಾಗಾಗಿ ಯೋಜನೆ ಅನುಷ್ಟಾನದಲ್ಲಿ ಸಹಕಾರ, ಸಮುದಾಯದ ಸಹಭಾಗಿತ್ವ ಎಲ್ಲವು ಅಗತ್ಯವಾಗಿದೆ. ಇಲ್ಲವಾದಲ್ಲಿ ಕೇಂದ್ರ ಸರ್ಕಾರದಿಂದ ಬರುವಂತಹ ಅನುದಾನ, ಇತರೆ ಸೌಲಭ್ಯಗಳನ್ನು ಸರ್ಕಾರ ನೀಡಲು ಸದ್ಯವಾಗುವುದಿಲ್ಲ. ಜಲಜೀವನ್ ಮಿ?ನ್ ಯೋಜನೆಯ ಜಾಗೃತಿ ಮೂಡಿಸಲು ISಂ ಬೆಂಬಲ ಸಂಸ್ಥೆಯನ್ನು ನೇಮಿಸಲಾಗಿದೆ, ಪ್ರತಿ ಕುಟುಂಬಗಳಿಂದ ಆಧಾರ್ ಕಾರ್ಡನ್ನು ಸಂಗ್ರಹಿಸಬೇಕು ಮತ್ತು ಗ್ರಾಮ ಪಂಚಾಯಿತಿ ಗಳ ವಾರ್ಡಿನ ಸದಸ್ಯರೇ ಸಮುದಾಯ ವಂತಿಕೆ ಸಂಗ್ರಹಣೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಮನವರಿಕೆ ಮಾಡಿಕೊಟ್ಟರು. 

 ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೈಸೂರು ವೃತ್ತದ ಅಧೀಕ್ಷಕ ಅಭಿಯಂತರಾದ  ಎಂ.ಎನ್. ಕೃ?ಮೂರ್ತಿ ಅವರು ಮಾತನಾಡಿ ನೀರಿನ ಸರಬರಾಜಿನಲ್ಲಿ ವ್ಯತ್ಯಯವಿದ್ದು ಅದನ್ನು ಸರಿಪಡಿಸಿ, ಎಲ್ಲಾ ಮನೆಗಳಿಗೂ ಸ್ಟ್ಯಾಂಡ್ ಪೋಸ್ಟ್ ಕಲ್ಪಿಸಬೇಕು, ಮುಖ್ಯವಾಗಿ ಬಡವರು ಹಾಗೂ ಗುಡಿಸಲುಗಳಲ್ಲಿ ವಾಸವಿರುವ ಕಡೆ ನಿರ್ಮಿಸಬೇಕು, ಪ್ರತಿಯೊಬ್ಬ ನಾಗರಿಕರಿಗೆ ಸಮಾನವಾಗಿ ಶುದ್ದ ಮತ್ತು ಸುರಕ್ಷಿತವಾದ ನೀರನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಜನರ ವಿಶ್ವಾಸಗಳಿಸಿ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯದ ಕಿರಿಯ ವಿಶ್ಲೇ?ಕ ಅನಿಲ್‌ಕುಮಾರ್ ಅವರು ಯೋಜನೆಯಡಿ ಕಾರ್ಯಾತ್ಮಕ ನಳ ಸಂಪರ್ಕದ ಮೂಲಕ ಪೂರೈಕೆ ಆಗುತ್ತಿರುವ ನೀರನ್ನು ಸ್ಥಳದಲ್ಲಿಯೇ ಕ್ಷೇತ್ರ ಪರೀಕ್ಷಾಕಿಟ್ ಉಪಯೋಗಿಸಿ ಪಿ.ಹೆಚ್ ನೀರಿನ ಗಡುಸುತನ, ಫ್ಲೋರೈಡ್, ಕ್ಲೋರೈಡ್, ನೈಟ್ರೇಟ್, ಕಬ್ಬಿಣಾಂಶ, ಬ್ಯಾಕ್ಟೀರಿಯಾಗಳ ನೀರಿನ ಮಾದರಿಯ ಗುಣಮಟ್ಟ ಪರೀಕ್ಷೆಯನ್ನು ಅಧಿಕಾರಿಗಳ ಹಾಗೂ ಗ್ರಾಮಸ್ಥರ ಸಮಕ್ಷತೆಯಲ್ಲಿ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಚಾಮರಾಜನಗರ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಗಂಗಾಧರಯ್ಯ, ನಿವೃತ್ತ ಕಾರ್ಯಪಾಲಕ ಅಭಿಯಂತರರಾದ ಶಿವಶಂಕರಯ್ಯ, ರಾಜ್ಯ ಸಂಪನ್ಮೂಲ ವ್ಯಕ್ತಿ ರಾಮಚಂದ್ರಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಶಿವಪುರ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರು, ಸದಸ್ಯರು, ಯೋಜನೆಯ ಅನು?ನ ತಾಂತ್ರಿಕ ಸಿಬ್ಬಂದಿಗಳು, ಸಹಾಯಕ ಇಂಜಿನಿಯರ್‌ಗಳು, ಕಿರಿಯ ಇಂಜಿನಿಯರ್‌ಗಳು, ಡಿಪಿಎಆರ್ ತಯಾರಿಕಾ ಸಂಸ್ಥೆಯ ಸಿಬ್ಬಂದಿಗಳು, ೩ನೇ ತಪಾಸಣಾ ಸಂಸ್ಥೆಯ ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರ ಪರವಾದ ಇಂಜಿನಿಯರ್‌ಗಳು, ಎಎಒ ಡಿಪಿಎಂ ಹಾಗೂ ಹಾರ್ಟ್ಸ್ ಬೆಂಬಲ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.

ಬಳಿಕ ಚಾಮರಾಜನಗರ ತಾಲ್ಲೂಕಿನ ಉಮ್ಮತ್ತೂರಿನ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಲಾಯಿತು. ಕಾರ್ಯಕ್ರಮದ ಪ್ರಮಾಣ ಪತ್ರವನ್ನು ವಿತರಿಸಲಾಯಿತು.