ಮೈಸೂರು:- ರೋಟರಿ ಕ್ಲಬ್‍ನ ಸಹಭಾಗಿತ್ವದಲ್ಲಿ ಲೂಯಿಸ್ ಬ್ರೈಲ್ ಅವರ 212 ನೇ ಜನ್ಮ ದಿನಾಚರಣೆಯನ್ನು ಸೋಮವಾರ ತಿಲಕ್ ನಗರದ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆಯಲ್ಲಿ ಆಚರಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಕೆ.ಪದ್ಮ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಉಪನಿರ್ದೇಶಕರಾದ ಮಂಜುಳ ಪಾಟೀಲ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ಮಾಲಿನಿ, ಅಂಧ ಮಕ್ಕಳ ಸರ್ಕಾರಿ ಪಾಠಶಾಲೆಯ ಅಧೀಕ್ಷಕರಾದ ಸತೀಶ, ನಿವೃತ್ತ ಅಧೀಕ್ಷಕರಾದ ಹೆಚ್. ಎಸ್. ಬಲರಾಂ, ಕಿವುಡು ಮಕ್ಕಳ ಸರ್ಕಾರಿ ಪಾಠಶಾಲೆಯ ಅಧೀಕ್ಷಕರಾದ ಗಂಗಾಧರ್ ಮತ್ತು ರೋಟರಿ ಕ್ಲಬ್ (south east) ಅಧೀಕ್ಷಕರಾದ ರಾಜೀವ್, ಕಾರ್ಯದರ್ಶಿ ಮೋಹನ್ ಸದಸ್ಯರಾದ ರವೀಂದ್ರ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

By admin