ಆರೋಗ್ಯದ ಸಮತೋಲನಕ್ಕೆ ಆಯುರ್ವೇದದ ಬಸ್ತಿ ಚಿಕಿತ್ಸೆ
ಆಯುರ್ವೇದದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ಅನಾರೋಗ್ಯವನ್ನು ದೂರಮಾಡಲು ಪಂಚಕರ್ಮಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಪಂಚಕರ್ಮವು ದೇಹವನ್ನು ಶುದ್ಧಗೊಳಿಸುವ ಜೊತೆಗೆ ದೋಷಗಳ ಸಮತೋಲನವನ್ನು ಕಾಪಾಡುವ ವಿಶೇಷ ಚಿಕಿತ್ಸೆಯಾಗಿದೆ. ದೇಹದಲ್ಲಿನ ಅನಾರೋಗ್ಯವನ್ನು ನಿವಾರಿಸುವುದಷ್ಟೇ ಅಲ್ಲದೆ, ಆರೋಗ್ಯವಂತರು ತಮ್ಮ ಆರೋಗ್ಯವನ್ನು ದೀರ್ಘಕಾಲ ಉಳಿಸಿಕೊಳ್ಳಲು ಸಹ ಪಂಚಕರ್ಮ…
