Month: December 2022

ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮಗಳಿಗೆ ಜಿ.ಪಂ. ಸಿಇಒ ಕೆ.ಎಂ. ಗಾಯಿತ್ರಿ ಭೇಟಿ : ಪರಿಶೀಲನೆ

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮ ಪಂಚಾಯಿತಿ ಕಚೇರಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಗುರುವಾರ (ಡಿ.೨೨) ಅನಿರೀಕ್ಷಿತ ಭೇಟಿ ನೀಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಜಲಜೀವನ್ ಮಿಷನ್, ಸ್ವಚ್ಛ…

ಕೋವಿಡ್ ಮಾರ್ಗಸೂಚಿ ಪಾಲನೆಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಸೂಚನೆ

ಚಾಮರಾಜನಗರ: ಕೆಲವು ದೇಶಗಳಲ್ಲಿ ಕೋವಿಡ್-೧೯ ಪ್ರಕರಣಗಳು ಏರಿಕೆಯಾಗಿರುವ ವರದಿ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಜಿಲ್ಲೆಯಲ್ಲಿ ಪಾಲನೆ ಮಾಡಬೇಕಿದ್ದು, ಕೋವಿಡ್ ಪರೀಕ್ಷೆ ಹೆಚ್ಚಳ, ಲಸಿಕಾಕರಣಕ್ಕೆ ವೇಗ ನೀಡುವ ಕಾರ್ಯಕ್ಕೆ ಮುಂದಾಗಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ…

ಪಿ.ಎಂ. ಸ್ವನಿಧಿ ಯೋಜನೆ ಮಹತ್ವ ಅರಿತು ಸೌಲಭ್ಯ ನೀಡಲು ಮುಂದಾಗಿ : ಜಿಲ್ಲಾಧಿಕಾರಿ ಡಿ.ಎಸ್.ರಮೇಶ್

ಚಾಮರಾಜನಗರ: ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಮಹತ್ವವನ್ನು ಎಲ್ಲಾ ಬ್ಯಾಂಕ್ ಅಧಿಕಾರಿಗಳು ಅರಿತು ಬೀದಿಬದಿ ವ್ಯಾಪಾರಿಗಳಿಗೆ ಸಾಲಸೌಲಭ್ಯ ನೀಡಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ…

ಗೃಹರಕ್ಷಕರ ಸೇವಾ ಮನೋಭಾವ ಶ್ಲಾಘನೀಯ : ಜಿಲ್ಲಾ ಪೊಲೀಓಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್

ಚಾಮರಾಜನಗರ: ಜೀವದ ಹಂಗು ತೊರೆದು ಸ್ವಯಂಪ್ರೇರಿತರಾಗಿ ಪೊಲೀಸರೊಂದಿಗೆ ಕಾರ್ಯನಿರ್ವಹಿಸುವ ಗೃಹರಕ್ಷಕರ ಸೇವಾ ಮನೋಭಾವ ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಅವರು ತಿಳಿಸಿದರುನಗರದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿಂದು ಜಿಲ್ಲಾ ಗೃಹರಕ್ಷಕದಳದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಖಿಲ ಭಾರತ…

ಕೌಟುಂಬಿಕ ಭದ್ರತೆ, ಜೀವನ ನಿರ್ವಹಣೆಗೆ ಉದ್ಯೋಗ ಅಗತ್ಯವಾಗಿದೆ : ಜಿಲ್ಲಾಧಿಕಾರಿ ಡಿ.ಎಸ್. ರಮೇಶ್

ಚಾಮರಾಜನಗರ: ಕುಟುಂಬ ಭದ್ರತೆ, ಜೀವನ ನಿರ್ವಹಣೆಗೆ ಅತ್ಯಗತ್ಯವಾಗಿರುವುದರಿಂದ ಪ್ರತಿಯೊಬ್ಬರು ಉದ್ಯೋಗ ಮೇಳಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಅಭಿಪ್ರಾಯಪಟ್ಟರು.ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಇವರ…

ಗೌರವ, ಸಮಾನವಕಾಶ ನೀಡಿಕೆಯಿಂದ ಮಾನವ ಹಕ್ಕುಗಳ ಸಾರ್ಥಕತೆ : ನ್ಯಾಯಾಧೀಶರಾದ ಲೋಕಪ್ಪ

ಚಾಮರಾಜನಗರ: ಸಮಾಜದಲ್ಲಿ ಪ್ರತಿಯೊಬ್ಬರಿಗೂ ಗೌರವ ನೀಡಿ, ಸಮಾನವಕಾಶ ಕಲ್ಪಿಸುವುದರಲ್ಲಿ ಮಾನವ ಹಕ್ಕುಗಳ ಸಾರ್ಥಕತೆ ಅಡಗಿದೆ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಲೋಕಪ್ಪ ಅವರು ಅಭಿಪ್ರಾಯಪಟ್ಟರು.ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ…

ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರಿಂದ ಅಹವಾಲುಗಳ ಆಲಿಕೆ

ಚಾಮರಾಜನಗರ: ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಯಳಂದೂರು ತಾಲೂಕಿನ ಕೆ. ದೇವರಹಳ್ಳಿ ಗ್ರಾಮದಲ್ಲಿಂದು ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗ್ರಾಮೀಣ ಜನರ ಅಹವಾಲುಗಳನ್ನು ಆಲಿಸಿ ಪರಿಹಾರ ಸೂಚಿಸಿದರು.ಆರಂಭದಲ್ಲಿಯೇ ಗ್ರಾಮಸ್ಥರು ಮೂಲಸೌಕರ್ಯ, ರಸ್ತೆ, ಬಸ್‌ಗಳ ವ್ಯವಸ್ಥೆ, ವಿದ್ಯುತ್, ಪಡಿತರ, ಪಿಂಚಣಿ,…

ನಗರದಲ್ಲಿ ಟಿವಿಎಸ್ ಸಾಲಮೇಳಕ್ಕೆ ಚಾಲನೆ

ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಚಾಮುಂಡಿ ಟಿವಿಎಸ್ ಷೋರೂಂ ಆವರಣದಲ್ಲಿ ದ್ವಿಚಕ್ರವಾಹನಗಳ ಸಾಲಮೇಳಕ್ಕೆ ಚಾಲನೆ ನೀಡಲಾಯಿತು.ಚಾಮುಂಡಿಟಿವಿಎಸ್ ಷೋರೂಂ ವ್ಯವಸ್ಥಾಪಕ ಟಿ.ಎಂ.ಲೋಕೇಶ್ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ದ್ವಿಚಕ್ರವಾಹನಗಳಿಗೆ ಕಡಿಮೆಬಡ್ಡಿದರದಲ್ಲಿ ಸಾಲನೀಡಲಾಗುತ್ತಿದೆ, ನಾಲ್ಕುದಿನಗಳ ಕಾಲ ಸಾಲಮೇಳ ನಡೆಯಲಿದ್ದು, ಸಾರ್ವಜನಿಕರು ಸಾಲಮೇಳದ ಸದ್ಭಳಕೆ ಮಾಡಿಕೊಳ್ಳಬೇಕು…

ಫಲಾನುಭವಿಗಳ ಬ್ಯಾಂಕ್‌ಖಾತೆಗೆ ಆಧಾರ್ ಜೋಡಣೆ, ಆಧಾರ್ ಅಧಾರಿತ ಪಾವತಿ ತ್ವರಿತವಾಗಿ ಪೂರ್ಣಗೊಳಿಸಲು ಜಿ.ಪಂ. ಸಿ.ಇ.ಒ ಕೆ.ಎಂ. ಗಾಯತ್ರಿ ಸೂಚನೆ

ಚಾಮರಾಜನಗರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಹಾಗೂ ಆಧಾರ್ ಆಧಾರಿತ (ಎ.ಪಿ.ಬಿ) ಪಾವತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಸೂಚಿಸಿದರು.ನಗರದ ಜಿಲ್ಲಾ…

ಆಲೂರಿನಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಕಾಡಾ ಅಧ್ಯಕ್ಷರಿಂದ ಗುದ್ದಲಿ ಪೂಜೆ

ಚಾಮರಾಜನಗರ: ಕಾವೇರಿ ಅಚ್ಚಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು ಅವರು ಚಾಮರಾಜನಗರ ತಾಲೂಕಿನ ಆಲೂರಿನಲ್ಲಿ ಕಾಮಯ್ಯನ ತೋಟದ ರಸ್ತೆಯ ಬಳಿ ರಸ್ತೆ ಅಭಿವೃದ್ದಿಗೆ ಚಾಲನೆ ನೀಡಿದರು.ಇದೇ ವೇಳೆ ಮಾತನಾಡಿದ ಜಿ. ನಿಜಗುಣರಾಜು ಅವರು ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ವತಿಯಿಂದ…

ಅಪರಾಧ ತಡೆ ಮಾಸಾಚರಣೆ ಜಾಗೃತಿ

ಮೈಸೂರು : ಡಿ ೨೨ ಅಪರಾಧಗಳನ್ನು ನಿಯಂತ್ರಿಸುವಲ್ಲಿ ಪೊಲೀಸರಷ್ಟೆ ಪ್ರಮುಖವಾದ ಜವಾಬ್ದಾರಿ ಸಾರ್ವಜನಿಕರಿಗೂ ಇರುತ್ತದೆ ಎಂದು ಕೆ.ಆರ್.ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಂಜು ಹೇಳಿದರು.ಕೆ.ಆರ್ ಪೊಲೀಸ್ ಠಾಣೆ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಇಂದು ಸುಣ್ಣದಕೇರಿ ಗಂಗಾಮತಸ್ಥರ ಬೀದಿಯ ಸಾರ್ವಜನಿಕರಿಗೆ…

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೫
(೫)ತ್ರಿಪುರಾಂಬ: ಪ್ರಪ್ರಥಮ ಹೀರೋಯಿನ್

ನಾಟಕ-ಸಿನಿಮ ಕ್ಷೇತ್ರಕ್ಕೆ ಮಡಿವಂತಿಕೆ ಮೈಗೂಡಿದ್ದ ಅಪರ್ವ ಕಾಲವದು. ರಂಗಭೂಮಿ-ಚಿತ್ರರಂಗ ಎರಡಕ್ಕೂ ನಟ-ನಟಿಯರು ದುರ್ಲಭ. ಒಂದುವೇಳೆ ಪುರುಷ ಕಲಾವಿದ ದೊರಕಿದರೂ ಮಹಿಳಾ ಕಲಾವಿದರು ದೊರಕುವುದೆಂದರೆ ತಪಸ್ಸು ಮೂಲಕ ವರ ಪಡೆದಷ್ಟೆ ಕಠಿಣ ಆಗಿತ್ತು! ವಿಶೇಷವಾಗಿ ಕನ್ನಡ ಚಲನಚಿತ್ರಕ್ಕೆ ನಟಿಯರನ್ನು ಹುಡುಕುವ ಕಾರ್ಯವೆಂದರೆ ಖಂಡಿತವಾಗಿ…

ದಲಿತ ಯುವತಿಗೆ ವಂಚನೆ : ಜಾತಿ ನಿಂದನೆ ಪ್ರಕರಣ ದಾಖಲು.

ಗುಂಡ್ಲುಪೇಟೆ : ದಲಿತ ಯುವತಿ ಎಂಬ ಕಾರಣಕ್ಕೆ ಮನೆಯಿಂದ ಹೊರಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಮೂವರ ಮೇಲೆ ಜಾತಿನಿಂದನೆ ಪ್ರಕರಣ ದಾಖಲಾಗಿದೆ. ಗುಂಡ್ಲುಪೇಟೆಯ ಕಗ್ಗಳದಹುಂಡಿ ಗ್ರಾಮದ ಶಿವಾನಂದ ಎಂಬುವರ ವಿರುದ್ಧ ಸಂತ್ರಸ್ತ ಮಹಿಳೆ ಗಂಭೀರ ಆರೋಪ…

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೬೪
(೪) ಬಿ.ಜಯಮ್ಮ

ದಿನಾಂಕ ೧೫ನೇ ನವೆಂಬರ್ ೧೯೧೫ರಲ್ಲಿ ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮೇರುನಟಿ ಹಿರಿಯ ರಂಗ ಕಲಾವಿದೆ ಬಿ.ಜಯಮ್ಮನವರು ತಮ್ಮ ೯ನೆ ವಯಸ್ಸಿಗೆ ತಾರಾಲೋಕಕ್ಕೆ ಪಾದಾರ್ಪಣೆ ಮಾಡಿದರು. ಆಟ ಆಡುತ್ತಾ ಪಾಠ ಕಲಿಯುವಂಥ ಎಳೆಯ ವಯಸ್ಸಿಗೆ ಕಲಾಸೇವೆ ಪ್ರಾರಂಭಿಸಿದ ದೇಶದ ಅತ್ಯಂತ…

ಡಿ.22ರಂದು ನಗರದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ

ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಕಾರ್ಯಕ್ರಮವನ್ನು ಡಿಸೆಂಬರ್ ೨೨ರಂದು ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆಯವರೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ…