Month: April 2022

ಏ.16 ರಂದು ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ: ಜವಾಬ್ದಾರಿಯುತ ಕಾರ್ಯನಿರ್ವಹಣೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚನೆ

ಚಾಮರಾಜನಗರ: ಜಿಲ್ಲೆಯ ಪ್ರಸಿದ್ದ ಯಾತ್ರಾಕ್ಷೇತ್ರ ಬಿಳಿಗಿರಿರಂಗನ ಬೆಟ್ಟದ ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದಲ್ಲಿ ಏಪ್ರಿಲ್ ೧೬ರಂದು ಜರುಗಲಿರುವ ಬ್ರಹ್ಮ ರಥೋತ್ಸವ, ಜಾತ್ರಾ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನಿಗದಿಪಡಿಸಿರುವ ಕಾರ್ಯಚಟುವಟಿಕೆಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚಿಸಿದರು. ನಗರದ…

ಮಧುಮೇಹ ಹಾಗೂ ಕಣ್ಣಿನ ತಪಾಸಣಾ ಶಿಬಿರ

ನ್ಯೂ ಡಯಾ ಕೇರ್ ಸೆಂಟರ್ & ಪಾಲಿ ಕ್ಲಿನಿಕ್, ಡಾ. ಅಗರ್ವಾಲ್ ಕಣ್ಣಿನ ಆಸ್ಪತ್ರೆ ಹಾಗೂ ಹಾರ್ಟ್ ಸಂಸ್ಥೆಯ ಸಹಯೋಗದೊಂದಿಗೆ ಮೈಸೂರು ವಕೀಲರ ಸಂಘದ ವತಿಯಿಂದ ವಕೀಲರು ಹಾಗೂ ಸಾರ್ವಜನಿಕರಿಗೆ ಉಚಿತ ಮಧುಮೇಹ ಹಾಗೂ ಕಣ್ಣಿನ ತಪಾಸಣೆ ಶಿಬಿರವನ್ನು ವಕೀಲರ ಸಭಾಭವನದಲ್ಲಿ…

ತಳಿರು ತೋರಣಗಳಿಂದ ಬಣ್ಣಾರಿ ಮಾರಿಯಮ್ಮನ್ ದೇವತೆಯ ಹಬ್ಬ

ಸರಗೂರು ತಾಲೂಕಿನ ಬೀದರಹಳ್ಳಿ ಗ್ರಾಮದಲ್ಲಿ ಶ್ರೀ ಬಣ್ಣಾರಿ ಮಾರಿಯಮ್ಮನ್ ದೇವತೆಯ ಹಬ್ಬ ವಿಜೃಂಭಣೆಯಿಂದ ನಡೆಯಿತು. ಸರಗೂರು. ತಾಲೂಕಿನ ಬೀದರಹಳ್ಳಿ ಗ್ರಾಮದಲ್ಲಿ ಶ್ರೀ ಬಣ್ಣಾರಿ ಮಾರಿಯಮ್ಮನ್ ದೇವತೆ ಹಬ್ಬ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಹಬ್ಬದ ಹಿನ್ನಲೆಯಲ್ಲಿ ಗ್ರಾಮದ ಪ್ರಮುಖ ಬೀದಿಗಳನ್ನು ತಳಿರು, ತೋರಣಗಳಿಂದ…

ಕೂತನೂರು ಗೋಮಾಳದಲ್ಲಿ ಗಣಿಗಾರಿಗೆ ನಿಲ್ಲಿಸುವಂತೆ ಗ್ರಾಮಸ್ಥರಿಂದ ದೂರು

ಗುಂಡ್ಲುಪೇಟೆ: ಕೂತನೂರು ಸ.ನಂ.368ರ ಗೋಮಾಳದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ಗಣಿಗಾರಿಕೆ ನಿಲ್ಲಿಸಬೇಕು ಎಂದು ತಾಲೂಕಿನ ಕೂತನೂರು ಗ್ರಾಮಸ್ಥರು ತಹಸೀಲ್ದಾರ್‍ಗೆ ದೂರು ಸಲ್ಲಿಸಿದ್ದಾರೆ. ಕೂತನೂರು ಗ್ರಾಮದ ಸ.ನಂ.368 ಜಾಗ ಸರ್ಕಾರಿ ಗೋಮಾಳವಾಗಿದು ಸದರಿ ಪ್ರದೇಶದಲ್ಲಿ ಕಟ್ಟೆಯಿದೆ ಇಲ್ಲಿ ಜನುವಾರುಗಳು ಮೇಯಲು ಹಾಗು ನೀರು ಕುಡಿಯಲು…

ಬ್ರಾಹ್ಮಣರ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಒತ್ತು

ಗುಂಡ್ಲುಪೇಟೆ: ಬ್ರಾಹ್ಮಣ ಸಮಾಜವು ತೀರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವುದನ್ನು ಮನಗಂಡು ರಾಜ್ಯ ಸರ್ಕಾರ ಅಖಿಲ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ತೆರೆಯುವ ಮೂಲಕ ಪುರೋಹಿತರು ಹಾಗೂ ಅರ್ಚಕರ ಸರ್ವತೋಮುಖ ಅಭಿವೃದ್ಧಿಗೆ ಹಲವು ರೀತಿಯ ಯೋಜನೆ ಅನುಷ್ಠಾನ ಗೊಳಿಸಿದೆ ಎಂದು ಅಖಿಲ ಕರ್ನಾಟಕ…

ದುಡಿಯೋಣ ಬಾʼ ಪ್ರಚಾರ ರಥಕ್ಕೆ ಚಾಲನೆ ನೀಡಿದ ಜಿ.ಪಂ. ಸಿಇಒ ಬಿ.ಆರ್.ಪೂರ್ಣಿಮಾ

ಮೈಸೂರು,ಏ.5: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರವಾಗಿ ಕೆಲಸ ನೀಡುವ ಉದ್ದೇಶದಿಂದ ದುಡಿಯೋಣ ಬಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಗ್ರಾಮೀಣ ಪ್ರದೇಶದ ಜನರೆಲ್ಲರೂ ಅಭಿಯಾನದಲ್ಲಿ ಭಾಗವಹಿಸಿ ಉದ್ಯೋಗ ಪಡೆಯಿರಿ ಎಂದು ಜಿಲ್ಲಾ…

ಡಾ. ಬಾಬುಜಗಜೀವನ್ ರಾಮ್ ಅವರಿಂದ ಪ್ರಾಮಾಣಿಕ ಸೇವೆ : ಷಡಕ್ಷರಮುನಿ ದೇಶೀಕೇಂದ್ರ ಸ್ವಾಮೀಜಿ

ಚಾಮರಾಜನಗರ: ಹಲವು ಮಹತ್ವದ ಇಲಾಖೆಗಳ ಸಚಿವ ಸ್ಥಾನದ ಜವಾಬ್ದಾರಿಯನ್ನು ನಿರ್ವಹಿಸಿದ ಡಾ. ಬಾಬುಜಗಜೀವನ್ ರಾಮ್ ಅವರು ಸಂಶೋಧನೆ, ವಿಜ್ಞಾನ, ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಇಲಾಖೆಯ ಕಾರ್ಯ ಕ್ಷೇತ್ರಕ್ಕೆ ಪ್ರಾಮಾಣಿಕವಾಗಿ ನ್ಯಾಯ ತಂದು ಕೊಟ್ಟರು ಎಂದು ಚಿತ್ರದುರ್ಗದ ಆದಿಜಾಂಬವ ಮಹಾಸಂಸ್ಥಾನ ಮಠದ, ಕೋಡಿಹಳ್ಳಿ…

ಶಿಕ್ಷಕಿ ಸಿದ್ದಗಂಗಮ್ಮ ನಿಧನ; ಶಿಕ್ಷಣ ಇಲಾಖೆ ಸಿಬ್ಬಂದಿ, ಪೋಷಕರಿಂದ ಶ್ರದ್ದಾಂಜಲಿ

ಚಾಮರಾಜನಗರ: ನಗರದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಸಿದ್ದಗಂಗಮ್ಮ ನಿಧನರಾದ ಹಿನ್ನೆಲೆಯಲ್ಲಿ ಶಿಕ್ಷಣಇಲಾಖೆ ಅಧಿಕಾರಿಗಳು, ಪೋಷಕರು ಹಾಗೂ ಎಸ್‌ಡಿಎಂಸಿ ವತಿಯಿಂದ ಶಾಲಾವರಣದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.ಇದೇವೇಳೆ ಕ್ಷೇತ್ರಶಿಕ್ಷಣಾಧಿಕಾರಿ ಸೋಮಣ್ಣೇಗೌಡ ಮಾತನಾಡಿ,…

ಶ್ರೀ ಗವಿ ಸಿದ್ಧೇಶ್ವರ ದೇವಾಲಯ ಜೀರ್ಣೋದ್ಧಾರ ಮಾಡಲು 3 ಕೋಟಿ ಅನುದಾನ ನೀಡಬೇಕೆಂದು ಮನವಿ

ಮೈಸೂರು : ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನ ಬೆಟ್ಟದ ಮಧ್ಯಭಾಗದಲ್ಲಿರುವ ಶ್ರೀ ಗವಿ ಸಿದ್ಧೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಲು ಮೇಗಳಕೊಪ್ಪಲು ಅಕ್ಕಪಕ್ಕದ 7ಹಳ್ಳಿಗಳ ಗ್ರಾಮಸ್ಥರು ಸರ್ಕಾರದ ಅನುದಾನ ಪಡೆಯದೆ ಸಮಾನ ವಂತಿಕೆ ಹಾಕಿಕೊಂಡು ಗವಿ ಸಿದ್ದೇಶ್ವರ ಬೆಟ್ಟಕ್ಕೆ ತ್ವರಿತಗತಿಯಲ್ಲಿ…

ವಾಲ್ಮೀಕಿ ನಾಯಕ ಮಹಾಸಭಾದಿಂದ ಪುಣ್ಯಾನಂದಪುರಿ ಶ್ರೀಗಳ ಸ್ಮರಣೆ

ಗುಂಡ್ಲುಪೇಟೆ: ಪಟ್ಟಣದ ಪೆÇಲೀಸ್ ಠಾಣೆ ಎದುರು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ವತಿಯಿಂದ ಶ್ರೀ ಪುಣ್ಯಾನಂದಪುರಿ ಮಹಾ ಸ್ವಾಮೀಜಿ 15ನೇ ವರ್ಷದ ಪುಣ್ಯ ಸ್ಮರಣೆ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಭಾದ ಅಧ್ಯಕ್ಷ…

ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಅಂಬೇಡ್ಕರ್-ಬಾಬೂಜೀ ದೇಶದ ಎರಡು ಕಣ್ಣು: ಶಾಸಕ

ಗುಂಡ್ಲುಪೇಟೆ: ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಡಾ.ಬಿ.ಆರ್.ಅಂಬೇಡ್ಕರ್ ಹಾಗು ಬಾಬು ಜಗಜೀವನ ರಾಂ ದೇಶದ ಎರಡು ಕಣ್ಣುಗಳಿದ್ದಂತೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ತಿಳಿಸಿದರು. ಪಟ್ಟಣದಲ್ಲಿ ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ ವತಿಯಿಂದ ಪುರಸಭಾ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿಯ ಹರಿಕಾರ…

ಡಾ.ಬಾಬು ಜಗಜೀವನ್ ರಾಮ್ ಅವರ 115 ನೇ ಜನ್ಮ ದಿನಾಚರಣೆ

ಸರಗೂರು ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರಕ ಡಾ.ಬಾಬು ಜಗಜೀವನ್ ರಾಮ್ ಅವರ 115 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಣ್ಣ ಮಾತನಾಡಿದರು. ಸರಗೂರು: ಶ್ರೇಷ್ಠ ದಾರ್ಶನಿಕರ ಆಶಯಗಳು…

ಗೋಪಾಲಸ್ವಾಮಿ ಬ್ಯಾಡ್‌ಮೆಂಟನ್ ಅರೇನಾದಲ್ಲಿ ತರಬೇತಿ ಶಿಬಿರ

ಮೈಸೂರಿನ ವಿಜಯನಗರ ೪ನೇ ಹಂತದ ಎನ್.ಪಿ.ಎಸ್. ಶಾಲೆಯ ಹತ್ತಿರ ಇರುವ ಗೋಪಾಲಸ್ವಾಮಿ ಬ್ಯಾಡ್‌ಮೆಂಟನ್ ಅರೇನಾದಲ್ಲಿ ಮಕ್ಕಳಿಗೆ ಷೆಟಲ್ ಬ್ಯಾಡ್‌ಮೆಂಟನ್ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಈ ಅಕಾಡೆಮಿಯಲ್ಲಿ ಸುಸಜ್ಜಿತ ಆರು(೬) ಸಿಂಥೆಟಿಕ್ ಕೋರ್ಟ್‌ಗಳನ್ನು ಒಳಗೊಂಡಿದೆ. ಪ್ರಮಾಣಿತ ವೃತ್ತಿಪರ ತರಬೇತುದಾರರಿಂದ ತರಬೇತಿಯನ್ನು ನೀಡಲಾಗುವುದು ಹಾಗು…

ಎಪಿಎಂಸಿ ಚುನಾವಣೆ: ಎಂ.ಬಿ.ಗುರುಸ್ವಾಮಿ ಪರ ಕಾಂಗ್ರೆಸ್ ಮುಖಂಡರಿಂದ ವಿವಿಧೆಡೆ ಮತಯಾಚನೆ

ಚಾಮರಾಜನಗರ: ಚಾಮರಾಜನಗರ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ನಿರ್ದೇಶಕ ಸ್ಥಾನಕ್ಕಾಗಿ ಸ್ಪರ್ಧಿಸಿರುವ ಬದನಗುಪ್ಪೆ ಕ್ಷೇತ್ರದ ಅಭ್ಯರ್ಥಿ ಎಂ.ಬಿ.ಗುರುಸ್ವಾಮಿ ಪರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ತಾಲೂಕಿನ ಹುಲ್ಲೇಪುರ, ಯಡಿಯೂರು, ಕರಡಿಮೋಳೆ, ಮಹಂತಾಳಪುರ ಸೇರಿದಂತೆ ನಾನಾಗ್ರಾಮಗಳಲ್ಲಿ ರೈತಮುಖಂಡರನ್ನು ಭೇಟಿ ಮಾಡಿ, ಮತಯಾಚನೆ ಕಾರ್ಯಕ್ರಮ…

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸುರೇಶ್ ಎನ್ ಋಗ್ವೇದಿ ಆಯ್ಕೆ

ಚಾಮರಾಜನಗರ. ಚಾಮರಾಜನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಂಸ್ಕೃತಿ ಚಿಂತಕರು ,ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ಆಯ್ಕೆಯಾಗಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಕಾರ್ಯಕ್ರಮಗಳಲ್ಲಿ ಎರಡು ಮೂರು ದಶಕಗಳಿಂದ ಕನ್ನಡ ನಾಡು ನುಡಿ ಜಲ ಭಾಷೆಯ ಸೇವೆಯನ್ನು ಸಲ್ಲಿಸಿದ ಅವರು ಡಾಕ್ಟರ್…