Month: January 2022

ವಸತಿ ಯೋಜನೆಗೆ ಅರ್ಜಿಆಹ್ವಾನ

ಮೈಸೂರು, ಜನವರಿ 31 :- ತಿ.ನರಸಿಪುರ ಪುರಸಭೆ ವ್ಯಾಪ್ತಿಯಲ್ಲಿ ಸ್ವಂತ ನೀವೆಶನ ಹೊಂದಿ ವಸತಿ ರಹಿತರಾಗಿರುವ ಜನರಿಗೆ ಡಾ. ಬಿ.ಅರ್. ಅಂಬೆಡ್ಕರ್ ನಗರ ವಸತಿ ಯೋಜನೆಯಡಿ ಅಂಗವಿಕಲರಿಗೆ, ಹಿರಿಯನಾಗರಿಕರಿಗೆ, ವಿಧುರರು, ವಿಧವೆಯರಿಗೆ ನಿವೇಶನ ಕಲ್ಪಿಸಲು ಗುರಿ ನಿಗಧಿಪಡಿಸಲಾಗಿದ್ದು ಅರ್ಹ ಪಲಾನುಭವಿಗಳಿಂದ ಅರ್ಜಿಯನ್ನು…

ಅಪ್ರಾಪ್ತ ಬಾಲಕಿಗೆ ಪ್ರೀತಿಸುವಂತೆ ಬೆದರಿಕೆ : ಅಪರಾಧಿಗೆ ಶಿಕ್ಷೆ

ಚಾಮರಾಜನಗರ: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವಂತೆ ಬಲವಂತ ಪಡಿಸಿದಲ್ಲದೇ ಪ್ರೀತಿಸದಿದ್ದಲ್ಲಿ ನಿನ್ನ ಅಣ್ಣನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ೨೨ ದಿನ ಶಿಕ್ಷೆ ಮತ್ತು ೧೦ ಸಾವಿರ ರೂ ದಂಡ…

ದೊಡ್ಡಾಣೆಯಲ್ಲಿ ಆರೋಗ್ಯ ಮುಂಜಾಗ್ರತಾ ನಿಯಂತ್ರಣ ಜಾಗೃತಿ ಕಾರ್ಯಕ್ರಮ

ಚಾಮರಾಜನಗರ: ಜ್ವರ ಪ್ರಕರಣಗಳು ವರದಿಯಾಗಿದ್ದ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಾಣೆ ಗ್ರಾಮದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಮುಂಜಾಗ್ರತಾ ನಿಯಂತ್ರಣ ಕ್ರಮಗಳನ್ನು ಕೈಗೊಂಡು ಗ್ರಾಮಸ್ಥರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗಿದೆ.

ಹೆಚ್ಚುವರಿ ಶಾಲಾ ಕೊಠಡಿ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ

ಚಾಮರಾಜನಗರ: ತಾಲೂಕಿನ ವೆಂಕಟಯ್ಯನಛತ್ರದ ಹೊಸೂರು ಹಾಗೂ ಬಡಗಲಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಶಾಲಾಕೊಠಡಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.ನಂತರ ಅವರು ಮಾತನಾಡಿ, ರಾಜ್ಯಸರಕಾರ ಶಿಕ್ಷಣಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುತ್ತಿದೆ. ಜಿಲ್ಲೆಯಲ್ಲಿ ವೈದ್ಯಕೀಯ ಶಿಕ್ಷಣ, ಎಂಜಿನಿಯರಿಂಗ್…

ಮಹಾತ್ಮ ಗಾಂಧೀಜಿ ವಿಶ್ವದ ಶ್ರೇಷ್ಠ ವ್ಯಕ್ತಿ: ಸುರೇಶ್ ಋಗ್ವೇದಿ

ಚಾಮರಾಜನಗರ: ಭಾರತದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿಯವರ ಹೋರಾಟ ವಿಶ್ವಕ್ಕೇ ಹಿಂಸಾತ್ಮಕವಾದ ಹೋರಾಟದ ಮೂಲಕ ಸ್ವಾತಂತ್ರ್ಯಗಳಿಸಿದ ನಂತರ ಗಾಂಧೀಜಿಯವರ ದೃಷ್ಟಿಕೋನ ಸರ್ವೋದಯವಾಗಿತ್ತು. ಸರ್ವೋದಯವೆಂದರೆ ಸರ್ವರ ಪ್ರಗತಿಯೇ ಆಗಿದೆ. ಸರ್ವೋದಯ ಮಹಾತ್ಮ ಗಾಂಧೀಜಿಯವರು ಕಲ್ಪಿಸಿಕೊಂಡ ಆದರ್ಶ ಸಮಾಜದ ವ್ಯವಸ್ಥೆ. ಸರ್ವೋದಯವೆಂದರೆ ಸರ್ವರ ಸರ್ವವಿಧದ ಸಮಾಜದ ಎಲ್ಲಾ…

ಮನುಕುಲಕ್ಕೆ ಸಾಹಿತ್ಯದ ಬೆಳಕು ಚೆಲ್ಲಿದ ಬೇಂದ್ರೆ:ಮಡ್ಡಿಕೆರೆ ಗೋಪಾಲ್, 

ಪ್ರಕೃತಿಯನ್ನು ಒಳಗಣ್ಣಿನಿಂದ ನೋಡಿದರೆ ಮಾತ್ರ ಭಾವನೆ ಮೂಡಲು ಸಾಧ್ಯ ಎಂಬುದನ್ನು ವರಕವಿ ದ.ರಾ.ಬೇಂದ್ರ ತಮ್ಮ ಕವನ ಮತ್ತು ಕಾವ್ಯಗಳಿಂದ ನಿರೂಪಿಸಿದ್ದಾರೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಬಣ್ಣಿಸಿದರು.ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ದ.ರಾ.ಬೇಂದ್ರೆ 126ನೇ ಜಯಂತಿ…

ಇ-ಶ್ರಮದಾನ್ ಕಾರ್ಡ್ ಖರ್ಚುವೆಚ್ಚವನ್ನು ಭರಿಸುವ ಕೆಲಸ ಮಾಡಲಾಗುವುದು: ನೂತನ ಕಸಾಪ ತಾಲೂಕು ಅಧ್ಯಕ್ಷ  ನವೀನ್‌ಕುಮಾರ್   

ಪಿರಿಯಾಪಟ್ಟಣ ತಾಲ್ಲೂಕಿನ ಎಲ್ಲಾ ಪತ್ರಕರ್ತರಿಗು ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವ ಮತ್ತು ಪತ್ರಿಕಾ ವಿತರಕರಿಗೆ ಇ-ಶ್ರಮದಾನ್ ಕಾರ್ಡ್ ಕೊಡಿಸುವುದುಕ್ಕೆ ಒದಗುವ ಖರ್ಚುನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವತಿಯಿಂದ ಭರಿಸಿ ಕೊಡಲಾಗುವುದು ಎಂದು ನೂತನ ಕಸಾಪ ತಾಲೂಕು ಅಧ್ಯಕ್ಷ ನವೀನ್‌ಕುಮಾರ್ ತಿಳಿಸಿದರು.…

ಕನ್ನಡಕ್ಕೆ ಕಂಟಕವಾದ ಸುಪ್ರೀಂಕೋರ್ಟ್ ತೀರ್ಪು ; ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಲ್ಲ

ಲೇಖನ ಅಭಿವ್ಯಕ್ತಿ:- ಚಿಮಬಿಆರ್ (ಮಂಜುನಾಥ ಬಿ.ಆರ್) ಕನ್ನಡಿಗರು ಮತ್ತೊಮ್ಮೆ ಚಳವಳಿಯ ಹಾದಿ ಹಿಡಿಯಲೇ ಬೇಕಾದ ಸಂದರ್ಭವೊಂದು ಇದೀಗ ಸನ್ನಿಹವಾಗಿದೆ. 1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದ ತರುವಾಯ ಭಾಷಾವಾರು ಶಿಕ್ಷಣ ಮಾಧ್ಯಮವಾಗುವುದು ಆ ಹಿನ್ನೆಲೆಯಲ್ಲಿ ಸೂಕ್ತವಾಗಬೇಕಿತ್ತು. ಆದರೆ ಭಾಷಾ ರಾಜಕೀಯ ಅಥವಾ ಆಡಳಿತ…

ಕನ್ನಡಬೆಳ್ಳಿತೆರೆ ಕ್ಲ್ಯಾಪ್-೫ ರಿಯಲ್‌ಹೀರೋ ಕೆಂಪರಾಜ್‌ಅರಸ್

ಕನ್ನಡಬೆಳ್ಳಿತೆರೆ ಕ್ಲ್ಯಾಪ್-೫ ಮಹಾರಾಜ ಒಡೆಯರ್ ಕುಟುಂಬಕ್ಕೆ ಹತ್ತಿರವಾಗಿದ್ದ ಅರಸು ಮನೆತನಕ್ಕೆ ಸೇರಿದ ೬ಅಡಿ ಮೀರಿದ ಆಜಾನುಬಾಹು ಕೆಂಪರಾಜ್‌ಅರಸ್ ಶೋಕಿಗಾಗಿ ನಟನಾದವರು. ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ಪುನರ್ ನಾಮಕರಣ ಮಾಡಿದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜಅರಸ್ ಸೋದರ, ಹುಣಸೂರು ಬಳಿಯ ಕಲ್ಲಹಳ್ಳಿ…

ಶಿಕ್ಷಣದ ಮೊದಲ ಕ್ರಾಂತಿಜ್ಯೋತಿ; ಸಾವಿತ್ರಿಬಾಯಿ ಫುಲೆ

ಡಾ. ಅನಸೂಯ ಎಸ್. ಕೆಂಪನಹಳ್ಳಿ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ‘ಸ್ವರಾಜ್ಯ ನಮ್ಮ ಆಜನ್ಮಸಿದ್ಧ ಹಕ್ಕು!’ ಎಂಬ ಘೋಷಣೆ ಅಂದು ಮೊಳಗಿತು. ಇಂದು ನಾವು ಸಾರ್ವತ್ರಿಕವಾಗಿ ಘೋಷಿಸಬೇಕಾದುದು: ‘ಶಿಕ್ಷಣ ನಮ್ಮ ಆಜನ್ಮಸಿದ್ಧ ಹಕ್ಕು!’ ಎಂಬುದು. ಸ್ವಾತಂತ್ರ್ಯ, ಪ್ರಜಾಪ್ರಭುತ್ವಗಳು ವಾಸ್ತವವಾಗಿ ಯಶಸ್ವಿಯಾಗಬೇಕಾದರೆ ಶಿಕ್ಷಣ ಅತ್ಯವಶ್ಯಕ. ಸುಭಾಷಿತಗಳು…

ಅಪ್ಪು ಸಮಾಧಿ ಬಳಿಕ, ರಾಜ್‌ಕುಮಾರ್ ಅವರ ಸಮಾಧಿಗೆ ನಮಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡು ಇಂದಿಗೆ ೩ ತಿಂಗಳು ಕಳೆದಿದೆ. ಅವರು ಇಲ್ಲ ಎನ್ನುವ ನೋವು ಇಂದಿಗೂ ಕಡಿಮೆ ಆಗಿಲ್ಲ. ಎಲ್ಲಾ ಜಿಲ್ಲಾ ಕಡೆಗಳಿಂದ ಅಭಿಮಾನಿಗಳು ಬಂದು ಪುನೀತ್ ಸಮಾಧಿಯ ದರ್ಶನ ಪಡೆಯುತ್ತಿದ್ದಾರೆ. ಅಪ್ಪು (Appu) ಕುಟುಂಬಸ್ಥರು ಇಂದು ಮೂರನೇ ತಿಂಗಳ…

ಜ.೩೧ರಿಂದ ನೈಟ್ ಕರ್ಫ್ಯೂ ರದ್ದು, ಅಂದಿನಿಂದಲೇ ಶಾಲೆಗಳೂ ಆರಂಭ

ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಅಲ್ಲ ಸಚಿವರುಗಳು ಭಾಗಿಯಾಗಿದ್ದರು. ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಆರ್ ಅಶೋಕ್, ಸಾರಿಗೆ ಬಸ್ ಗಳಲ್ಲಿ ಸಿಟ್ಟಿಂಗ್ ಕೆಪಾಸಿಟಿ ಮುಂದುವರಿಸಲಾಗುತ್ತದೆ. ಪಬ್, ಹೊಟೇಲ್ ಗಳು ಶೇ.೧೦೦…

ಹೊಂಡರಬಾಳು ಶಾಲೆಗೆ ಅಧಿಕಾರಿಗಳ ಭೇಟಿ : ಶಾಲೆಗೆ ಹಾಜರಾದ ಮಕ್ಕಳು

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ ಜಾತಿ ಪ್ರಮಾಣ ಪತ್ರ ನೀಡದಿರುವ ಕಾರಣ ನೀಡಿ ತಮ್ಮ ಸಮುದಾಯದ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ತೀರ್ಮಾನಿಸಿದ್ದ ಒಡ್ಡರ ಬೋವಿ ಜನಾಂಗದ ಪೋಷಕರನ್ನು ಅಧಿಕಾರಿಗಳು ಮನವೊಲಿಸಿದ ಪರಿಣಾಮ ಮಕ್ಕಳು ಶಾಲೆಗೆ ಹಾಜರಾಗಿದ್ದಾರೆ. ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ…

ಮದ್ದೂರು ಶಾಲೆ, ಸಿದ್ದಯ್ಯನಪುರ ಗ್ರಾ.ಪಂ.ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯತ್ರಿ ಭೇಟಿ

ಬಳಿಕ ಅಮೃತ ಗ್ರಾಮ ಪಂಚಾಯಿತಿ ಯೋಜನೆಯಡಿ ಆಯ್ಕೆಯಾಗಿರುವ ಸಿದ್ದಯ್ಯನಪರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿ.ಎಂ. ಗುಣಶೇಖರ್, ಉಪಾಧ್ಯಕ್ಷರಾದ ರಾಜೇಶ್ವರಿ ಹಾಗೂ ಇತರೆ ಸದಸ್ಯರು ಅಧಿಕಾರಿಗಳೊಂದಿಗೆ ವಿವಿಧ ಕಾಮಗಾರಿ, ಯೋಜನೆ, ಸೌಲಭ್ಯಗಳ ಕುರಿತು ಸಭೆ ನಡೆಸಿದರು. ಘನ…

ಪೌರಕಾರ್ಮಿಕರ ಕಾಲೋನಿ ಸೇರಿದಂತೆ ವಿವಿಧ ವಾರ್ಡ್‌ಗಳಿಗೆ ಶಾಸಕರ ಭೇಟಿ

ಚಾಮರಾಜನಗರ: ನಗರಸಭೆ ವ್ಯಾಪ್ತಿಯ ಪೌರಕಾರ್ಮಿಕರ ಕಾಲೋನಿ ಸೇರಿದಂತೆ ಗಾಳೀಪುರ, ಎರಡನೇ ವಾರ್ಡ್‌ನ ರಹಮತ್ ನಗರ, ೭ ನೇ ವಾರ್ಡ್ ವ್ಯಾಪ್ತಿಯ ಸೌಹಾರ್ದದಯಾನ್ ನಗರ, ತಿರುಪೂರ್‌ಲೇಔಟ್, ವಾಣಿಯಾರ್ ರಸ್ತೆ, ಕೆ.ಎನ್.ಮೊಹಲ್ಲಾ, ಮುಬಾರಕ್ ಬೀದಿ, ೧೪ ನೇ ವಾರ್ಡುಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧಿಕಾರಿಗಳ ಜತೆ…