Month: June 2021

ಜನರ ಹೆಣದ ಮೇಲೆ ಅಧಿಕಾರ ನಡೆಸುವ ಸರ್ಕಾರ: ಡಿಕೆಶಿ

ಪಾಂಡವಪುರ : ರಾಜ್ಯ ಬಿಜೆಪಿ ಸರ್ಕಾರ ಜನರ ಹೆಣದ ಮೇಲೆ ಅಧಿಕಾರ ನಡೆಸುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ಗುಡುಗಿದರು. ಪಟ್ಟಣದ ಹಾರೋಹಳ್ಳಿಯ ಶ್ರೀಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕ…

ಸೇವಾಸಿಂಧುನಲ್ಲಿಯೇ ಜನನ ಮರಣ ಪ್ರಮಾಣ ಪತ್ರ !

ಬೆಂಗಳೂರು: ಸೇವಾ ಸಿಂಧು ತಂತ್ರಾಂಶದ ಮೂಲಕ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಸಾರ್ವಜನಿಕರೇ ಮುದ್ರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಾ.ನಾರಾಯಣಗೌಡ ಅವರು ತಿಳಿಸಿದ್ದಾರೆ. ಸಾರ್ವಜನಿಕರು…

ಕೊರೊನಾ ತಡೆಗೆ ಆಯುಷ್ ನೀಡಿದ ಸಲಹೆಗಳೇನು ಗೊತ್ತಾ?

ಬೆಂಗಳೂರು: ಆಯುಷ್ ಇಲಾಖೆ ವತಿಯಿಂದ ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ನಿಗಧಿತ, ನಿಖರವಾದ ಸೂಕ್ತ ಔಷಧಿಗಳು ಇಲ್ಲದ ಕಾರಣ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಆಯುರ್ವೇದ ಸಲಹೆಗಳನ್ನು ನೀಡಿದ್ದು, ಅದನ್ನು ಜನಪಾಲಿಸಿದ್ದೇ ಆದರೆ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಹಾಗಾದರೆ ಆ ಸಲಹೆಗಳೇನು…

ಗೆಳೆಯನ ತೋಟದಲ್ಲಿ ಚಿರನಿದ್ದೆಗೆ ಜಾರಿದ ಸಂಚಾರಿ ವಿಜಯ್!

ಬೆಂಗಳೂರು: ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿ ಪ್ರತಿಭಾವಂತ ನಟನೆಂಬ ಖ್ಯಾತಿಗೆ ಪಾತ್ರರಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ನಟ ಸಂಚಾರಿ ವಿಜಯ್ ಬಾಳಿನ ಪಯಣ ಮುಗಿಸಿ ಕರ್ಮಭೂಮಿಯಿಂದ ಮತ್ತೆ ಜನ್ಮ ಭೂಮಿಯತ್ತ ತೆರಳಿ ಹುಟ್ಟೂರಿನ ಗೆಳೆಯನ ತೋಟದಲ್ಲಿ ಚಿರನಿದ್ದೆಗೆ ಜಾರಿದ್ದಾರೆ. ಬೆಂಗಳೂರಿನಿಂದ…

ಕೃಷಿ ಪ್ರಶಸ್ತಿ-ಕೃಷಿ ಉತ್ಪಾದನಾ ಬಹುಮಾನ ಯೋಜನೆಗೆ ಅರ್ಜಿ ಆಹ್ವಾನ

ಮಡಿಕೇರಿ : ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಕೃಷಿ ಪ್ರಶಸ್ತಿ-ಕೃಷಿ ಉತ್ಪಾದನಾ ಬಹುಮಾನ ಯೋಜನೆಯನ್ನು ಕೃಷಿ ಇಲಾಖಾ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತೀ ವರ್ಷದಂತೆ ಈ ವರ್ಷವೂ (2021-22) ಸಹ ರೈತರಿಂದ ಬೆಳೆ ಸ್ಪರ್ಧೆಗೆ…

ಮೈಸೂರಿನಲ್ಲಿ ಕೋವಿಡ್ ಪರೀಕ್ಷಾ ಅಭಿಯಾನದ ಪೂರ್ವ ಸಿದ್ಧತಾ ಸಭೆ

ಮೈಸೂರು: ನಗರದ ಕೆ.ಆರ್ ಕ್ಷೇತ್ರದಲ್ಲಿ ಜೂ. 16 ಹಾಗೂ 17 ರಂದು ನಡೆಯಲಿರುವ ಸಂಪೂರ್ಣ ಕೋವಿಡ್ ಪರೀಕ್ಷೆ ಹಾಗೂ ಜೂನ್ 21 ರಂದು ನಡೆಯಲಿರುವ ಲಸಿಕಾ ಅಭಿಯಾನದ ಕುರಿತು ಕ್ಷೇತ್ರದ 19 ವಾರ್ಡ್ ಗಳಲ್ಲೂ ಪೂರ್ವಸಿದ್ಧತಾ ಸಭೆಗಳನ್ನು ಶಾಸಕ ಎಸ್‍.ಎ.ರಾಮದಾಸ್ ನಡೆಸಿದರು.…

ಮಂಗಳೂರಿನಲ್ಲಿ ಮಳೆಗೆ ಸೇತುವೆಯಲ್ಲಿ ಬಿರುಕು!

ಮಂಗಳೂರು: ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಇಲ್ಲಿನ ಏರ್ ಪೋರ್ಟ್ ಗೆ ತೆರಳುವ ಮರವೂರಿನ ಫಲ್ಗುಣಿ ನದಿಯ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಕಾರಣದಿಂದಾಗಿ ಸುರಕ್ಷತೆ ದೃಷ್ಠಿಯಿಂದ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಮಂಗಳವಾರ ಬೆಳಗ್ಗಿನ ಜಾವ 3 ಗಂಟೆಗೆ ಮರವೂರು ಹಳೆ ಸೇತುವೆಯ…

ಮೈಸೂರಿನಲ್ಲಿ ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ

ಮೈಸೂರು: ಲಾಕ್ ಡೌನ್ ನಿಂದಾಗಿ ಸಂಬಳವಿಲ್ಲದೆ ಅನೇಕ ಮಂದಿ ಪತ್ರಕರ್ತರು ಸಂಕಷ್ಟಕ್ಕೆ ಸಿಲುಕಿದ್ದು, ಆಹಾರಕ್ಕೂ ಸಮಸ್ಯೆಯಾಗಿದ್ದು, ಇದನ್ನು ಮನಗಂಡು ಆಹಾರಕಿಟ್ ಗಳನ್ನು ವಿತರಿಸಲಾಗುತ್ತಿದೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಹೇಳಿದರು. ನಗರದ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ನಡೆದ…

ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ಗುಡುಗಿದ ಸಾ.ರಾ.ಮಹೇಶ್

ಮೈಸೂರು: ಮೈಸೂರಿನಿಂದ ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾ.ರಾ.ಮಹೇಶ್ ಅವರ ನಡುವಿನ ವಾಗ್ಯುಗ್ಧ ಇನ್ನೂ ಮುಗಿದಂತೆ ಕಾಣುತ್ತಿಲ್ಲ. ಇದೀಗ ಮತ್ತೆ ಅವರ ವಿರುದ್ಧ ಗುಡುಗಿರುವ ಶಾಸಕ ಸಾ,ರಾ.ಮಹೇಶ್ ಅವರು, ತಮ್ಮ ಕರ್ತವ್ಯಲೋಪವನ್ನು ಮುಚ್ಚಿಟ್ಟುಕೊಳ್ಳುವ ಉದ್ದೇಶದಿಂದ ನನ್ನ ಮೇಲೆ ಒತ್ತುವರಿ…

ಮೈಸೂರನ್ನು ಕೊರೊನಾ ಮುಕ್ತಗೊಳಿಸಲು ಪೈಲಟ್ ಪ್ರಾಜೆಕ್ಟ್

ಮೈಸೂರು: ಸಾರ್ವಜನಿಕರಲ್ಲಿ ಕೊರೊನಾ ತಪಾಸಣೆ ಮತ್ತು ಲಸಿಕೆ ನೀಡುವ ಮೂಲಕ ಮೈಸೂರಿನಲ್ಲಿ ಹೆಚ್ಚಿರುವ ಕೊರೊನಾವನ್ನು ನಿಯಂತ್ರಿಸಿ ಕೊರೊನಾ ಮುಕ್ತ ಜಿಲ್ಲೆಯನ್ನಾಗಿಸಲು ಪೈಲಟ್ ಪ್ರಾಜೆಕ್ಟ್ ಕಾರ್ಯಕ್ರಮ ನಡೆಸಲಾಗುತ್ತಿದ್ದು, ನಗರದ ನಾಲ್ಕು ಕ್ಷೇತ್ರಗಳ ಪೈಕಿ ಮೊದಲಿಗೆ ಕೆ.ಆರ್.ಕ್ಷೇತ್ರದಿಂದಲೇ ಕಾರ್ಯಕ್ರಮ ಆರಂಭವಾಗಲಿದೆ ಎಂದು ಶಾಸಕ ಎಸ್.ಎ.ರಾಮದಾಸ್…

ಚಾಮರಾಜನಗರ ಜಿಲ್ಲೆಯ ಪಿಎಸ್ಐಗಳ ವರ್ಗಾವಣೆ

ಚಾಮರಾಜನಗರ: ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳ ಸಬ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಲಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಗೆ ಮೈಸೂರು ಜಿಲ್ಲೆಯ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಕಾನೂನು ಸುವ್ಯವಸ್ಥೆಯಲ್ಲಿದ್ದ ಸಬ್ ಇನ್ಸ್ ಪೆಕ್ಟರ್ ಆಗಿದ್ದ ವಿ.ಚೇತನ್…

ನೀರಿನಲ್ಲಿ ಮುಳುಗಿ ಮೃತಪಟ್ಟವರ ಕುಟುಂಬಕ್ಕೆ ಸಚಿವರ ಸಾಂತ್ವನ

ಕೃಷ್ಣರಾಜಪೇಟೆ: ತಾಲೂಕಿನ ಮೋದೂರು ಗ್ರಾಮದ ಕೆರೆಯ ನೀರಿನಲ್ಲಿ ಮುಳುಗಿ ಆಕಸ್ಮಿಕವಾಗಿ ಮೃತರಾದ ಇಬ್ಬರು ಯುವಕರ ಮನೆಗಳಿಗೆ ತೆರಳಿದ್ದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅವರು ವಯಕ್ತಿಕವಾಗಿ ತಲಾ 25 ಸಾವಿರ ರೂ ಪರಿಹಾರ ಧನ ವಿತರಿಸಿ ಸರ್ಕಾರದ ವತಿಯಿಂದ ವಿಶೇಷ…

ದಾನಿಗಳಿಂದ ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ

ಬೆಂಗಳೂರು: ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯಲು ಹಲವು ದಾನಿಗಳು ಮುಂದೆ ಬಂದಿದ್ದು, ನಿಗದಿತ ಶುಲ್ಕ ಪಾವತಿಸಿ ವಿವಿಧ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕರೆಗೆ ಓಗೊಟ್ಟಿರುವ ಹಲವು ಅಭಿಮಾನಿಗಳು ಕೊರೊನಾ ಸಂಕಷ್ಟಕಾಲದಲ್ಲಿ…

ಜೂ. 16 ರಿಂದ  ಕೊಡಗಿನ ನರಿಯಂದಡ-1ನೇ ಗ್ರಾಮ ಲಾಕ್‌ಡೌನ್

ಮಡಿಕೇರಿ : ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಿಯಂದಡ-1ನೇ ಗ್ರಾಮದಲ್ಲಿ ಕೋವಿಡ್-೧೯ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವುದರಿಂದ ಜೂನ್ 16ರ ಮಧ್ಯಾಹ್ನ 1 ಗಂಟೆಯಿಂದ ಜೂನ್ 24ರ ಸಂಜೆ 6 ಗಂಟೆಯವರೆಗೆ ನರಿಯಂದಡ-1 ಗ್ರಾಮವನ್ನು ಸಂಪೂರ್ಣ ಬಂದ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಈ…

ಲಿಂಗೈಕ್ಯರಾದ ಶಿವನಾಗಮ್ಮರಿಗೆ ಶ್ರದ್ಧಾಂಜಲಿ ಸಲ್ಲಿಕೆ

ಮೈಸೂರು: ಪರಮಪೂಜ್ಯ ಜಗದ್ಗುರು ಶ್ರೀ ದೇಶಿಕೇಂದ್ರ ಮಹಾಸ್ವಾಮಿಗಳ ಮಾತೃಶ್ರೀ ಶಿವ ನಾಗಮ್ಮ ಅವರು ಲಿಂಗೈಕ್ಯರಾಗಿದ್ದು, ಅವರಿಗೆ ರಾಮಾನುಜರಸ್ತೆಯಲ್ಲಿನ ಜಯಚಾಮರಾಜೇಂದ್ರ ಆಟೋ ನಿಲ್ದಾಣದಲ್ಲಿ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಆಟೋ ಸಂಘದ ಅಧ್ಯಕ್ಷರಾದ ಅಟೋ ಮಹೇಶ್, ನಗರಪಾಲಿಕೆ ಸದಸ್ಯರಾದ…