Month: May 2021

ಕರ್ನಾಟಕದಲ್ಲಿ ಲಾಕ್ ಡೌನ್ ವಿಸ್ತರಣೆ ಬಹುತೇಕ ಸಾಧ್ಯತೆ ಸಿಎಂ ಬಿ ಎಸ್ ವೈ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ

ಬೆಂಗಳೂರು ಮೇ 17: ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಪೂರಕ ಮಾಹಿತಿ ಸಂಗ್ರಹಿಸಲಿದ್ದಾರೆ . ಜಿಲ್ಲಾಧಿಕಾರಿಗಳ ಜತೆ ಮುಖ್ಯಮಂತ್ರಿ ಇಂದು ಸಭೆ ನಡೆಸಲಿದ್ದಾರೆ . ರಾಜ್ಯದಲ್ಲಿ ಕೊರೋನಾ ಗ್ರಾಮೀಣ ಪ್ರದೇಶಗಳಿಗೆ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂದಿನ ಸಭೆ…

ನಿರಾಶ್ರಿತರ ಹಸಿವು ನೀಗಿಸುವ ‘ವೀ ಕೇರ್ ಫಾರ್ ಯು ಮೈಸೂರು’

ಮೈಸೂರು: 17 ಮೇ ಕೊರೊನ ಮಹಾಮಾರಿ ಎರಡನೇ ಅಲೆಯ ಪ್ರಭಾವದಿಂದ ಉಂಟಾಗಿರುವ ಲಾಕ್ ಡೌನ್ ಸಂಕಷ್ಟದ ಈ ಸಮಯದಲ್ಲಿ ಮೈಸೂರು ನಗರದಲ್ಲಿರುವ ನಿರಾಶ್ರಿತರಿಗೆ ಹಾಗೂ ನಿರ್ಗತಿಕರನ್ನು ಹುಡುಕಿ ಹಸಿವನ್ನು ನೀಗಿಸುವ ಕಾರ್ಯವನ್ನು ನಗರದ ‘ವೀ ಕೇರ್ ಫಾರ್ ಯೂ ಮೈಸೂರು’ ಯುವಕರ…

ಸೋಂಕಿತರನ್ನು ಕೋವಿಡ್ ಕೇರ್ ಕೇಂದ್ರಕ್ಕೆ ಶೀಘ್ರ ದಾಖಲಿಸಿ

ಚಾಮರಾಜನಗರ: ಕೋವಿಡ್ ಸೋಂಕು ವ್ಯಾಪಿಸದಂತೆ ತಡೆಯಲು ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ಸೋಂಕಿತರನ್ನು ಶೀಘ್ರವಾಗಿ ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಿಸುವ ಕಾರ್ಯವನ್ನು ಚುರುಕುಗೊಳಿಸುವಂತೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸೂಚನೆ ನೀಡಿದ್ದಾರೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಟಾಸ್ಕ್‌ಪೋರ್ಸ್ ಸಮಿತಿ…

ಕೊರೋನಾಗೆ ಜೆ.ಎಸ್.ಎಸ್ ಶಾಲಾ ಶಿಕ್ಷಕ ಬಲಿ

ಹಾಸನ : ಕೊರೋನಾಗೆ ಶಿಕ್ಷಕರು ಬಲಿಯಾಗುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮಧ್ಯೆ ಕೊರೋನಾಗೆ ಜೆ.ಎಸ್.ಎಸ್ ಶಾಲಾ ಶಿಕ್ಷಕ ಬಲಿಯಾಗಿರುವ ಘಟನೆ ನಡೆದಿದೆ. ಸಕಲೇಶಪುರ ತಾಲ್ಲೂಕಿನ ಬಾಗೆ ಜೆಎಸ್‌ಎಸ್ ಪಬ್ಲಿಕ್ ಶಾಲೆಯ ಶಿಕ್ಷಕ ಆನಂದ್ ಮೃತಪಟ್ಟ ದುರ್ದೈವಿ. ಇವರಿಗೆ ಕೊರೋನಾ…

ತಾಯಿಯ ಅಂತಿಮ ದರ್ಶನಕ್ಕೆ ಬಂದ ಮಗ ಸಾವು!

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ಮೀಸಲು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ರವರ ಅತ್ತೆ ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದು, ಮೃತರ ಮಗ ತಾಯಿಯನ್ನು ಕೊನೆಯ ಬಾರಿಗೆ ನೋಡಲು ಬಂದು ಹೃದಯಾಘಾತದಿಂದ ಮೃತಪಟ್ಟಿರುವ ಧಾರುಣ ಘಟನೆ ಚಾಮರಾಜನಗರ ತಾಲ್ಲೂಕಿನ ಹುರುಳಿನಂಜನಪುರ ಗ್ರಾಮದಲ್ಲಿ…

ಅನಾಥವಾದ ಮಗುವಿಗೆ ಇನ್ಮುಂದೆ ಚಿಕ್ಕಮ್ಮನೇ ಅಮ್ಮ

ಚಾಮರಾಜನಗರ: ಕೊರೋನಾ ಯಾರು ನಿರೀಕ್ಷೆ ಮಾಡದಂತಹ ಅನಾಹುತ ಸೃಷ್ಟಿಸಿದೆ. ಅಷ್ಟೇ ಅಲ್ಲದೆ, ಹಲವು ಹೃದಯ ವಿದ್ರಾವಕ ಘಟನೆಗಳಿಗೆ ಸಾಕ್ಷಿಯಾಗಿದೆ. ಕೆಲವರು ಮಕ್ಕಳನ್ನು ಇನ್ನು ಕೆಲವರು ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಇದೀಗ ಕೊರೋನಾದಿಂದಾಗಿ ಅಪ್ಪ ಅಮ್ಮನ ಕಳೆದು ಕೊಂಡು ತಬ್ಬಲಿಯಾಗಿದ್ದ ಐದು ವರ್ಷದ…

ಮಳೆಗಾಲ ಬಂತೆಂದರೆ ಕೊಡಗಿನಲ್ಲಿ ಆತಂಕ ಶುರು !

ಮಡಿಕೇರಿ: ಒಂದು ಕಾಲದಲ್ಲಿ ಮಳೆಗಾಲವನ್ನು ಪೂರ್ವ ಸಿದ್ಧತೆಯೊಂದಿಗೆ ಸಂಭ್ರಮದಿಂದಲೇ ಬರಮಾಡಿಕೊಳ್ಳುತ್ತಿದ್ದ ಕೊಡಗಿನ ಮಂದಿ ಕಳೆದ ಕೆಲವು ವರ್ಷಗಳಿಂದ ಮಳೆಗಾಲ ಬಂತೆಂದರೆ ಬೆಚ್ಚಿಬೀಳುವಂತಾಗಿದೆ. ಕಾರಣ ಮಳೆಗಾಲ ತಂದೊಡ್ಡಿದ ಘೋರ ಅನಾಹುತಗಳು ಇಲ್ಲಿನ ಜನರ ಎದೆಯೊಳಗೆ ಅವಲಕ್ಕಿ ಕುಟ್ಟುವಂತೆ ಮಾಡಿದೆ. ಮಳೆ ಜೋರಾಗಿ ಬಂದರೆ…

ಕೊರೋನಾ ಎರಡನೇ ಅಲೆ ಸವಾಲ್ ತಂದೊಡ್ಡಿದೆ:ಬಿಎಸ್‌ವೈ

ಬೆಂಗಳೂರು: ಕೋವಿಡ್-೧೯ ರ ಮೊದಲನೇ ಅಲೆಗಿಂತಲೂ ಎರಡನೇ ಅಲೆ ನಿರೀಕ್ಷೆಗೂ ಮೀರಿ ಎಲ್ಲೆಡೆ ಸಂದಿಗ್ದತೆಯನ್ನು ಹುಟ್ಟು ಹಾಕಿದೆ. ಅಲ್ಲದೆ, ವೈದ್ಯ, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರ ಮೇಲೆ ಹೆಚ್ಚಿನ ಒತ್ತಡ ಹೇರಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ…

ಚಾಮರಾಜನಗರದ ನಂಜದೇವನಪುರ ಡೈರಿ ಸಿಬ್ಬಂದಿಗೆ ಕೋರೊನಾ

ಚಾಮರಾಜನಗರ: ತಾಲ್ಲೂಕಿನ ನಂಜದೇವನಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿನ ಸಿಬ್ಬಂದಿಗಳಿಬ್ಬರಿಗೆ ಕೋರೊನಾ ಸೋಂಕು ದೃಢವಾಗಿದ್ದರಿಂದ ಡೈರಿಯ ವಹಿವಾಟು ಬಂದ್ ಮಾಡಲಾಗಿದೆ. ನಂಜೇದೇವನಪುರ ಗ್ರಾಮದಲ್ಲಿ 150 ಕ್ಕೂ ಹೆಚ್ಚು ಮಂದಿ ಹಾಲಿನ ಡೈರಿಗೆ ಹಾಲು ಹಾಕುವವರಿದ್ದು, 13 ರಿಂದ 15 ಕ್ಯಾನ್…

ಸೋಂಕಿತರು ಆತ್ಮವಿಶ್ವಾಸ ಬೆಳೆಸಿಕೊಂಡು ಗುಣಮುಖರಾಗಿ

ಮಂಡ್ಯ: ಕೊರೋನಾ ಯುದ್ಧವನ್ನು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಗೆಲ್ಲಬೇಕು ಕೊರೋನಾ ಪಾಸಿಟಿವ್ ಸೋಂಕಿತರು ಧೈರ್ಯಗೆಡದೇ ಆತ್ಮವಿಶ್ವಾಸದಿಂದ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಮನೆಗೆ ತೆರಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಮನವಿ ಮಾಡಿದರು. ಅವರು ತಾಲ್ಲೂಕು ಆಡಳಿತದೊಂದಿಗೆ ತಾಲ್ಲೂಕಿನ ಶೆಟ್ಟನಾಯಕನಕೊಪ್ಪಲು…

ಅದ್ಧೂರಿ ಮದುವೆ: ತಡವಾಗಿ ಪ್ರಕರಣ ದಾಖಲು

ಚಾಮರಾಜನಗರ: ಕೋವಿಡ್-19 ರ ನಿಯಮವನ್ನು ಉಲ್ಲಂಘಿಸಿ ಪುತ್ರನಿಗೆ ಅದ್ಧೂರಿ ವಿವಾಹ ಮಾಡಿದ ಆರೋಪದ ಹಿನ್ನಲೆಯಲ್ಲಿ ಜಿಪಂ ಸದಸ್ಯನ ವಿರುದ್ಧ ತಡವಾಗಿ ರಾಮಾಪುರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ರಾಮಾಪುರ ಕ್ಷೇತ್ರದ ಜಿಪಂ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಬಸವರಾಜು ಹಾಗೂ…

ರಾಜ್ಯಕ್ಕೆ500ಪ್ಲಾಸ್ಮಾ ಘಟಕ ಕೊಡುಗೆ

ಬೆಂಗಳೂರು: ಝೆಕ್ ರಿಪಬ್ಲಿಕ್ ವತಿಯಿಂದ ರಾಜ್ಯಕ್ಕೆ 500 ಪ್ಲಾಸ್ಮಾ ಘಟಕಗಳನ್ನು ದೇಣಿಗೆಯಾಗಿ ನೀಡಲು ಮುಂದಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬೆಂಗಳೂರಿನ ಕಾನ್ಸುಲೇಟ್ ಕಚೇರಿಯ ಕೌನ್ಸಲ್ ಸಿ.ಎಸ್. ಪ್ರಕಾಶ್ ಭೇಟಿ ಮಾಡಿ. ಪ್ರಾಗ್‌ನ ಸೆಂಟ್ರಲ್ ಮಿಲಟರಿ ಆಸ್ಪತ್ರೆಯಲ್ಲಿ ಈಗಾಗಲೇ…

ಅಲೆಮಾರಿಗಳ ಕಷ್ಟಕ್ಕೆ ಸ್ಪಂದಿಸಿದ ಹೋಂಗಾರ್ಡ್ಸ್!

ಮೈಸೂರು: ನಗರದ ಬಲ್ಲಾಳ್ ವೃತ್ತದಲ್ಲಿ ಗುಡಿಸಲಲ್ಲಿ ವಾಸಿಸುತ್ತಾ ಹೊಟ್ಟೆಪಾಡಿಗಾಗಿ ಮಣ್ಣಿನ ಮಡಿಕೆ, ದೇವರ ವಿಗ್ರಹ, ಆಟಿಕೆ, ಹೂವಿನ ಕುಂಡಗಳನ್ನು ನಿರ್ಮಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿರುವ ಅಲೆಮಾರಿಗಳ ಬದುಕು ಮೂರಾಬಟ್ಟೆಯಾಗಿದೆ. ಈ ಕುಟುಂಬಗಳು ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದು, ಇವರು ಮಾಡಿದ…

ತೌಕ್ತೆ ಚಂಡಮಾರುತದ ಅಬ್ಬರಕ್ಕೆ ನಲುಗಿದ ಕರಾವಳಿ

ಮಂಗಳೂರು: ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಕರಾವಳಿ ನಲುಗಿದ್ದು, ಸಮುದ್ರದಲ್ಲಿ ಅಲೆಗಳು ವೀರಾವೇಶ ತೋರುತ್ತಿದ್ದು ಕಡಲ್ಕೊರೆತ ಸೇರಿದಂತೆ ಹಲವು ರೀತಿಯ ಹಾನಿಗಳು ಸಂಭವಿಸಿದ್ದು ವ್ಯಾಪಕ ಮಳೆ ಸುರಿಯುತ್ತಿದೆ. ಅರಬ್ಭಿ ಸಮುದ್ರದ ಆಗ್ನೇಯ ಭಾಗದಲ್ಲಿ ಕಾಣಿಸಿಕೊಂಢಿರುವ ‘ತೌಕ್ತೇ’ ಚಂಡಮಾರುತದ ಪರಿಣಾಮ ಶನಿವಾರ ಬೆಳಿಗ್ಗಿನಿಂದ ಭಾರಿ…

ವಿದ್ಯಾರ್ಥಿಗಳಿಗೆ ಯದುವೀರ್ ಒಡೆಯರ್ ಕಿವಿಮಾತು!

ಮೈಸೂರು: ಕೋವಿಡ್-19 ನಿಂದ ಉಂಟಾಗಿರುವ ಈ ಲಾಕ್ ಡೌನ್ ಅನ್ನು ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ತೆಗದುಕೊಳ್ಳಿ. ಈ ಸಮಯವನ್ನು ಓದಿಗೆ, ಜ್ಞಾನರ್ಜನೆಗೆ ಬಳಸಿ ಹಾಗೂ ನಿಮ್ಮ ಕೇರಿಯರ್‌ಯನ್ನು ಉತ್ತಮಗೊಳಿಸಬಹುದಾದ ಯೋಜನೆಯನ್ನು ರೂಪಿಸಿಕೊಳ್ಳಲು ಬಳಸಿಕೊಳ್ಳಿ ಎಂದು ರಾಜವಂಶಸ್ಥ ಯದುವೀರ್ ಕೃ?ದತ್ತ ಚಾಮರಾಜ ಒಡೆಯರ್ ಅವರು…