Month: May 2021

ಕೊರೋನ ವಾರಿಯರ್ಸ್‍ಗೆ ಬಸವ ರತ್ನ ಪ್ರಶಸ್ತಿ ಪ್ರದಾನ.

ಮೈಸೂರು: ಸುವರ್ಣ ಬೆಳಕು ಫೌಂಡೇಷನ್ ಹಾಗೂ ಹಿಮಾಲಯ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ ಪ್ರಯುಕ್ತ ಕೊರೋನಾ ವಾರಿಯರ್ಸ್ ಗೆ ಬಸವ ರತ್ನ ಪ್ರಶಸ್ತಿಯನ್ನು ನಗರದಲ್ಲಿಂದು ಪ್ರದಾನ ಮಾಡಲಾಯಿತು. ನಗರದ ಗನ್ ಹೌಸ್ ಬಳಿಯ ಶ್ರೀ ಬಸವೇಶ್ವರ ಪ್ರತಿಮೆ ಮುಂಭಾಗ ನಡೆದ ಸರಳ…

ಮುಂದುವರೆದ ಮೂಕ ಪ್ರಾಣಿಗಳ ಹಸಿವು ನೀಗಿಸುವ ಕಾರ್ಯ

ಮೈಸೂರು: ಲಾಕ್ ಡೌನ್ ಹಿನ್ನಲೆಯಲ್ಲಿ ನಗರದಲ್ಲಿ ಆಹಾರವಿಲ್ಲದೆ ಹಸಿವಿನಿಂದ ಬಳಲುತ್ತಿರುವ ಮೂಕ ಪ್ರಾಣಿಗಳನ್ನು ಹುಡುಕಿ ಆಹಾರ ನೀಡುವ ಕಾರ್ಯವನ್ನು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಕಳೆದ ಹದಿಮೂರು ದಿನಗಳಿಂದ ಮಾಡುತ್ತಾ ಬಂದಿದೆ. ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್…

ಮೈಸೂರಿನ ರಂಗಭೂಮಿ ಕಲಾವಿದರಿಗೆ ದಿನಸಿ ಕಿಟ್ ವಿತರಣೆ

ಮೈಸೂರು: ಲಾಕ್ ಡೌನ್ ನಿಂದ ಸಂಕಷ್ಟದಲ್ಲಿ ಸಿಲುಕಿರುವ ರಂಗಭೂಮಿ ಕಲಾವಿದರಿಗೆ ಮತ್ತು ಆರ್ಕೆಸ್ಟ್ರಾ ಕಲಾವಿದರಿಗೆ ದಿನನಿತ್ಯ ಬಳಕೆಯ ದಿನಸಿ ಕಿಟ್ ಗಳನ್ನು ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ವಿತರಿಸಲಾಯಿತು . ಈ ವೇಳೆ ಮಾತನಾಡಿದ ಬಿಜೆಪಿ ನರಸಿಂಹರಾಜ…

ಕೊಡಗಿನಲ್ಲಿ ಮುಂಗಾರು ಎದುರಿಸಲು ಜಿಲ್ಲಾಡಳಿತ ಸನ್ನದ್ಧ

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಜೂನ್ ಮೊದಲ ವಾರದಲ್ಲಿಯೇ ಮುಂಗಾರು ಆರಂಭವಾಗುವ ಸಾಧ್ಯತೆ ಇರುವುದರಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಅಧಿಕಾರಿಗಳ ಸಭೆ ನಡೆಸಿ ಮುಂಗಾರು ಮಳೆಯ ವೇಳೆ ಕೈಗೊಳ್ಳಲಾಗಿರುವ…

ನಾಗರಹೊಳೆಯಲ್ಲಿ ಹೆಣ್ಣು ಕರಡಿ ಸಾವು

ಮೈಸೂರು: ಹೆಣ್ಣು ಕರಡಿಯೊಂದರ ಮೃತದೇಹ ನಾಗರಹೊಳೆ ರಾಷ್ಟ್ರೀಯ ಉದ್ಯನವನದಲ್ಲಿ ಪತ್ತೆಯಾಗಿದ್ದು, ಸ್ವಾಭಾವಿಕವಾಗಿ ಸಾವನ್ನಪ್ಪಿರುವುದಾಗಿ ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ವೀರನಹೋಸಳ್ಳಿ ವನ್ಯಜೀವಿ ವಲಯದ ಚಾಮಳ್ಳಿ ಶಾಖೆಯ ಅರಣ್ಯಪ್ರದೇಶದಲ್ಲಿ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಮೃತದೇಹ ಪತ್ತೆಯಾಗಿದ್ದು, ಇದು ಅಂದಾಜು ೫ ರಿಂದ…

ಚಾಮರಾಜನಗರ: ಖರೀದಿ ಭರದಲ್ಲಿ ಸಾಮಾಜಿಕ ಅಂತರ ಮಾಯ!

ಚಾಮರಾಜನಗರ : ಗುರುವಾರದಿಂದ ನಾಲ್ಕು ದಿನ ಚಾಮರಾಜನಗರ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್ ಡೌನ್ ಇರುವ ಹಿನ್ನಲೆಯಲ್ಲಿ ಬುಧವಾರ ಬೆಳಗ್ಗೆಯಿಂದಲೇ ಜಿಲ್ಲೆಯ ಪ್ರಮುಖ ವ್ಯಾಪಾರ ಸ್ಥಳಗಳಲ್ಲಿ ಜನ ಸಂದಣಿ ಅಧಿಕವಾಗಿತ್ತು. ವಿವಿಧ ಕಡೆಗಳಿಂದ ಸಾರ್ವಜನಿಕರು ಪ್ರಮುಖ ವ್ಯಾಪಾರ ವಹಿವಾಟು ಸ್ಥಳಗಳಿಗೆ ಆಗಮಿಸಿ ನಾಲ್ಕು…

ತಜ್ಞವೈದ್ಯರು ಮತ್ತು ವೈದ್ಯರ ನೇರ ಸಂದರ್ಶನಕ್ಕೆ ಅರ್ಜಿ 

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕೋವಿಡ್- 19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಹಾಗೂ ಕೋವಿಡ್ ಸೋಂಕಿತ ರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾಕೇರ್ ಆಸ್ಪತ್ರೆ ಮತ್ತು ಪಿ.ಕೆ.ಟಿ.ಬಿ, ಹಾಗೂ ಸಿ.ಡಿ, ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ…

ಕೊರೋನಾ ವಿಚಾರದಲ್ಲಿ ಕಾಂಗ್ರೆಸ್‌ನಿಂದ ಕೆಟ್ಟ ರಾಜಕಾರಣ

ಕೆ.ಆರ್.ನಗರ: ದೇಶದಾದ್ಯಂತ ಕೊರೋನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದರೂ ಇದಕ್ಕೆ ಸಹಕಾರ ನೀಡದ ಕಾಂಗ್ರೆಸ್ ಪಕ್ಷದ ಮುಖಂಡರು ಕೆಟ್ಟ ರಾಜಕಾರಣ ಮಾಡಿ ಜನರಲ್ಲಿ ಭಯದ ವಾತಾವರಣವನ್ನುಂಟು ಮಾಡುತ್ತಿದ್ದಾರೆ ಎಂದು…

ಶೆಟ್ಟನಾಯಕನಕೊಪ್ಪಲು ಕೋವಿಡ್ ಕೇರ್ ಸೆಂಟರ್‌ನಲ್ಲಿ ಗಾನಸುಧೆ

ಕೃಷ್ಣರಾಜಪೇಟೆ: ಕೊರೋನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲಿ ಮನೋಬಲ ತುಂಬುವ ಸಲುವಾಗಿ ಗಾನ ಸುಧೆಯನ್ನು ತಾಲೂಕಿನ ಶೆಟ್ಟನಾಯಕನಕೊಪ್ಪಲು ಗ್ರಾಮದ ಕಿತ್ತೂರರಾಣಿ ಚೆನ್ನಮ್ಮ ವಸತಿಶಾಲೆಯಲ್ಲಿ ಸ್ಥಾಪಿಸಿರುವ ಕೋವಿಡ್ ಹೆಲ್ತ್ ಕೇರ್ ಸೆಂಟರ್ ಹರಿಸಲಾಯಿತು. ಸುಮಾರು ಇನ್ನೂರಕ್ಕೂ ಹೆಚ್ಚು ಸೋಂಕಿತರು ಮಂಡ್ಯದ ರಾಗರಂಜನಿ ಸಂಗೀತ…

ರೈಲಿಗೆ ಸಿಲುಕಿ ಕಾಡಾನೆ ಸಾವು

ಸಕಲೇಶಪುರ: ಕಾಡಾನೆಯೊಂದು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹಸಿಡೆ ಗ್ರಾಮದಲ್ಲಿ ನಡೆದಿದೆ. ಹಸಿಡೆ ಗ್ರಾಮದ ಬಳಿ ರೈಲ್ವೇ ಗೇಟ್ ಹತ್ತಿರ ವಾಹನಗಳ ಕ್ರಾಸಿಂಗ್ ಮಾಡುವ ಸ್ಥಳದಲ್ಲಿ ರಾತ್ರಿ ಸುಮಾರು 11.30ರ ವೇಳೆಯಲ್ಲಿ ಬೆಂಗಳೂರು -ಕಾರವಾರ ಎಕ್ಸ್ ಪ್ರೆಸ್ ರೈಲು ಬಂದಿದ್ದು…

ಮಂಡ್ಯದ ವಳಗೆರೆಮೆಣಸ ಗ್ರಾಮ ಸೀಲ್ ಡೌನ್

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ವಳಗೆರೆಮೆಣಸ ಗ್ರಾಮದಲ್ಲಿ ಸುಮಾರು 29 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಂ.ಶಿವಮೂರ್ತಿ ನೇತೃತ್ವದಲ್ಲಿ ಗ್ರಾಮವನ್ನು ಸಂಪೂರ್ಣ ಸೀಲ್‌ಡೌನ್ ಮಾಡಿ, ಕಂಟೋನ್ ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿದೆ. ಇನ್ಮುಂದೆ ಈ ಗ್ರಾಮದಿಂದ ಜನರು…

ರಾಜ್ಯ ಸರ್ಕಾರದಿಂದ ಕೊರೋನಾ ವಿಶೇಷ ಪ್ಯಾಕೇಜ್ ಘೋಷಣೆ

ಬೆಂಗಳೂರು: ಕೊರೋನಾ ಲಾಕ್ ಡೌನ್ ನಿಂದಾಗಿ ಕೆಳ ವರ್ಗದ ವಿವಿಧ ವಲಯಗಳ ಕಾರ್ಮಿಕರು. ರೈತರು, ನಿರ್ಗತಿಕರು, ದಿನಗೂಲಿ ನೌಕರರು ಸೇರಿದಂತೆ ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಬಹಳಷ್ಟು ಮಂದಿ ಸರ್ಕಾರ ತಮಗೇನಾದರೂ ಪ್ಯಾಕೇಜ್ ಘೋಷಣೆ ಮಾಡುತ್ತದೆಯಾ ಎಂದು ಕಾಯುತ್ತಲೇ ಬಂದಿದ್ದರು. ಇದೀಗ ಸರ್ಕಾರ…

ರಸಗೊಬ್ಬರ ಹಳೆ ದರದಲ್ಲೇ ಮಾರಾಟಕ್ಕೆ ಸೂಚನೆ

ಮಂಡ್ಯ: ಮೆ. ಇಫ್ಕೋ, ಮೆ. ಐ.ಪಿ.ಎಲ್ ಹಾಗೂ ಮೆ. ಎಂ.ಸಿ.ಎಫ್ ಸಂಸ್ಥೆಗಳು ರಸಗೊಬ್ಬರದ ದರಗಳನ್ನು ಪರಿಷ್ಕರಿಸಿದ್ದು, ಈ ದರಗಳು ಹಿಂದಿನ ದರಕ್ಕಿಂತ ಹೆಚ್ಚಾಗಿರುತ್ತದೆ, ಆದರೆ ಜಿಲ್ಲೆಯಲ್ಲಿ ಹಳೆಯ (ಮಾರ್ಚ್ -2021ರ) ರಸಗೊಬ್ಬರದ ದಾಸ್ತಾನು ಇದ್ದು, ಈ ರಸಗೊಬ್ಬರವನ್ನು ಹಳೆಯ ದರದಲ್ಲಿಯೇ ಮಾರಾಟ…

ಹನಗೋಡು ಗೊಬ್ಬರ ಅಂಗಡಿ ಮೇಲೆ ದಾಳಿ

ಹನಗೋಡು: ಇಲ್ಲಿನ ರಸಗೊಬ್ಬರ ಹಾಗೂ ಕ್ರಿಮಿನಾಶಕ ಮಾರಾಟ ಅಂಗಡಿಗಳ ಮೇಲೆ ಹುಣಸೂರು ಕೃಷಿ ಸಹಾಯಕ ನಿರ್ಧೇಶಕ ವೆಂಕಟೇಶ್ ದಿಢೀರ್ ದಾಳಿ ನಡೆಸಿ ಅಂಗಡಿಗಳಲ್ಲಿರುವ ದಾಸ್ತಾನು ಹಾಗೂ ಮಾರಾಟ ರಶೀತಿಗಳ ಪರಿಶೀಲನೆ ನಡೆಸಿದರು. ಹನಗೋಡಿನಲ್ಲಿ ಕೊರೋನಾ ಲಾಕ್ ಡೌನ್ ವೇಳೆ ಕೆಲ ರಸಗೊಬ್ಬರ…

ಗೋಮಾಂಸ ಮಾರಾಟ, ವಾಹನ ಕಳ್ಳತನ ಮಾಡುತ್ತಿದ್ದವರ ಬಂಧನ

ಪಿರಿಯಾಪಟ್ಟಣ: ಗೋಮಾಂಸ ಮಾರಾಟ, ಕಾರು ಹಾಗೂ ದ್ವಿಚಕ್ರ ವಾಹನ ಕಳ್ಳತನದಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳನ್ನು ಬೆಟ್ಟದಪುರ ಠಾಣೆ ಪೊಲೀಸರು ಬಂಧಿಸಿ, 6 ಲಕ್ಷ ಮೌಲ್ಯದ ವಾಹನ ಮತ್ತು ಜಾನುವಾರು ಮಾಂಸ ಮಾರಾಟ ಮಾಡಿ ಬಂದ ನಗದು 1 ಲಕ್ಷ ರೂ ಹಣವನ್ನು ವಶಪಡಿಸಿಕೊಂಡಿದ್ದಾರೆ.…