Month: May 2021

ಮೋದಿ ಕಟೌ ಟ್‍ ಗೆ ಚಪ್ಪಲಿಯಲ್ಲಿ ಹೊಡೆದ ಯುವಕ ಅರೆಸ್ಟ್!

ಹಾಸನ:ಪ್ರತಿಯೊಬ್ಬರಿಗೂ ಒಂದೊಂದು ವಿಚಾರಕ್ಕೆ ನಮ್ಮ ನಾಯಕರ ಮೇಲೆ ಆಕ್ರೋಶ ವ್ಯಕ್ತವಾಗುವುದು ಸಹಜ ಹಾಗೆಂದು ಅದನ್ನು ವಿಕೃತ ರೀತಿಯಲ್ಲಿ ತೀರಿಸಿಕೊಳ್ಳುವುದು ಮಾತ್ರ ಅಪರಾಧವಾಗಿದೆ. ಇದರ ಅರಿವಿದ್ದರೂ ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರ ಕಟೌ ಟ್ ಗೆ ಚಪ್ಪಲಿಯಲ್ಲಿ ಹೊಡೆಯುವ ದೃಶ್ಯವೊಂದು ಬೆಳಕಿಗೆ…

ಕೊಡಗಿನಲ್ಲಿ ಕೊರೊನಾ ಮುಕ್ತ ಗ್ರಾ.ಪಂ.ಗೆ 5 ಲಕ್ಷ

ಮಡಿಕೇರಿ: ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತ್ ಗಳಲ್ಲಿ ‘ಕೊರೊನಾ ಮುಕ್ತ ಗ್ರಾಮ’ ಮಾಡುವ ಗ್ರಾ.ಪಂ.ಗೆ ಶಾಸಕರ ನಿಧಿಯಡಿ 5 ಲಕ್ಷ ರೂ ನೀಡಲಾಗುವುದು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಪ್ರಕಟಿಸಿದ್ದಾರೆ. ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಭೇಟಿ…

ಅಗ್ರೀವಾರ್ ಘಟಕ -ಸಮನ್ವಯ ಸಮಿತಿ ಸ್ಥಾಪನೆ

ಬೆಂಗಳೂರು: ಕೋವಿಡ್-19 ರ ಲಾಕ್ಡೌನ್ ಸಮಯದಲ್ಲಿ ರಾಜ್ಯದ ರೈತರು ಅದರಲ್ಲೂ ಮುಖ್ಯವಾಗಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ ವ್ಯಾಪ್ತಿಗೆ ಬರುವ ದಕ್ಷಿಣ ಕರ್ನಾಟಕದ 10 ಜಿಲ್ಲೆಗಳ ರೈತರಿಗೆ ಕಾಲಕಾಲಕ್ಕೆ ಕೃಷಿ ತಾಂತ್ರಿಕ ಮಾಹಿತಿ ಹಾಗೂ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಬಗ್ಗೆ…

ಖಾಸಗಿ ಶಿಕ್ಷಕರಿಗೆ ಪ್ಯಾಕೇಜ್ ನೀಡಲು ಸಿಎಂಗೆ ಸಭಾಪತಿ ಪತ್ರ

ಬೆಂಗಳೂರು: ಜಾಗತಿಕ ಮಹಾಮಾರಿ ಕೋವಿಡ್‌ನಿಂದ ನಾಡಿನ ಜನತೆ ತಲ್ಲಣಗೊಂಡಿದೆ. ಹೀಗಿರುವಾಗ ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಬದುಕು ಅಯೋಮಯವಾಗಿದೆ. ಅವರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುವಂತೆ ಕೂಗುಗಳು ಎದ್ದಿವೆ. ಇದೇ ಸಂದರ್ಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ…

ಕೇಂದ್ರದಿಂದ ರಸಗೊಬ್ಬರ ಮೇಲಿನ ಸಬ್ಸಿಡಿ ಹೆಚ್ಚಳ

ಬೆಂಗಳೂರು: ಮುಂಗಾರು ಹಂಗಾಮಿನಲ್ಲಿ ಡಿಎಪಿ ಹಾಗೂ ಪಿ & ಕೆ ರಸಗೊಬ್ಬರ ಸಬ್ಸಿಡಿಯನ್ನು 50-ಕೆ.ಜಿ. ಚೀಲವೊಂದಕ್ಕೆ 511 ರೂಪಾಯಿಯಿಂದ 1,211 ರೂಪಾಯಿಗೆ (ಶೇ. 140) ಹೆಚ್ಚಳ ಮಾಡಿ ಕೇಂದ್ರ ರಸಗೊಬ್ಬರ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ. ಪೋಷಕಾಂಶ ಆಧಾರಿತ ರಸಗೊಬ್ಬರ ಸಬ್ಸಿಡಿ…

ಕೊರೋನಾ ವಾರಿಯರ್ಸ್ ಗಳಿಗೆ ಬಾಳೆಗೊನೆ ವಿತರಣೆ

ಕೆ.ಆರ್.ಪೇಟೆ: ಕೊರೋನಾ ಸಂಕಷ್ಟದಲ್ಲಿ ಸಮಯದಲ್ಲಿ ಸಂಘ ಸಂಸ್ಥೆಗಳು ಸೇರಿದಂತೆ ಹಲವು ಸಂಘಟನೆಗಳು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದು ಅದರಂತೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ತಾಲೂಕಿನ ಬಾಳೆ ಬೆಳೆಯುವ ರೈತರಿಂದ ನೇರವಾಗಿ ಬಾಳೆಹಣ್ಣನ್ನು ಖರೀದಿಸಿ ಗೊನೆ ಸಹಿತ ಕೊರೋನಾ ವಾರಿಯರ್ಸ್ ಗಳಿಗೆ ಹಂಚುವ…

ಪಿಪಿಇ ಕಿಟ್ ಧರಿಸಿ ವಾರ್ಡ್‌ನಲ್ಲಿ ಡಿಸಿಎಂ ಸಂಚಾರ

ಮಂಡ್ಯ: ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಂಡ್ಯ ಜಿಲ್ಲೆಯಲ್ಲಿ ಕೋವಿಡ್ ವ್ಯವಸ್ಥೆ ವೀಕ್ಷಿಸಲು ಬಿರುಸಿನ ಪ್ರವಾಸ ನಡೆಸಿದರಲ್ಲದೆ ಮದ್ದೂರು, ಬೂದನೂರು ಹಾಗೂ ಮಂಡ್ಯ ಆಸ್ಪತ್ರೆಗಳಿಗೆ ಭೇಟಿ ವ್ಯಾಪಕ ಪರಿಶೀಲನೆ ನಡೆಸಿದರು. ಮಂಡ್ಯದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ…

ಆಹಾರ ಸೇವನೆಯಲ್ಲಿನ ಆಶಿಸ್ತು ಆರೋಗ್ಯಕ್ಕೆ ಮಾರಕ!

ಇವತ್ತು ಹಲವು ರೀತಿಯ ರೋಗಗಳು ನಮ್ಮನ್ನು ಕಾಡುತ್ತಿರುವುದರಿಂದ ತಾವು ಇಷ್ಟಪಡುವ ಆಹಾರವನ್ನು ಸೇವಿಸಲಾಗದೆ, ವೈದ್ಯರು ಸೂಚಿಸಿದ ಆಹಾರವನ್ನಷ್ಟೆ ಸೇವಿಸಬೇಕಾದ ಪರಿಸ್ಥಿತಿ ಬಹಳಷ್ಟು ಜನರದ್ದಾಗಿದೆ. ಅವತ್ತು ಹೊತ್ತಿನ ಊಟಕ್ಕೂ ತೊಂದರೆಯಿತ್ತು. ಇವತ್ತು ಎಲ್ಲವೂ ಇದೆ ಆದರೆ ಇಷ್ಟಪಟ್ಟಿದ್ದನ್ನು ತಿನ್ನಲಾರದ ಸ್ಥಿತಿಯಾಗಿದೆ ಎಂದು ಕೆಲವರು…

ಕರೋನ ಸಂಕಷ್ಟದಲ್ಲಿ ವಿವಿಧ ರೀತಿಯ ಸೇವೆ ಸಲ್ಲಿಸುತ್ತಿರುವ ಬ್ರಹ್ಮಶ್ರೀ ಯೋಗ ಮಂದಿರ

ಮೈಸೂರು 21. ಕೊರೋನಾ ಎರಡನೇ ಅಲೆ ಮಹಾಮಾರಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಲಾಕ್ ಡೌನ್ ಸಂಕಷ್ಟದಲ್ಲಿರುವ 36ಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ತಲುಪಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದೆ ಬ್ರಹ್ಮಶ್ರೀ ಯೋಗಮಂದಿರದ ವಿದ್ಯಾರ್ಥಿಗಳು. ಬ್ರಹ್ಮಶ್ರೀ ನಾರಾಯಣಗುರು ಯೋಗ ಮಂದಿರವು ಮೂವತ್ತು ವರ್ಷಗಳಿಂದ ಯೋಗಾಸನ…

ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯ ಕೊಲೆ

ಚಾಮರಾಜನಗರ: ವ್ಯಕ್ತಿಯೊಬ್ಬ ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ದೊಣ್ಣೆಯಿಂದ ಹೊಡೆದು ಕೊಂದು ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ನಡೆದಿದೆ. ಭೀಮನಬೀಡು ಗ್ರಾಮದ ಬಸವಶೆಟ್ಟಿ ಎಂಬಾತನೇ ಅನೈತಿಕ ಸಂಬಂಧದಿಂದ ಸಾವನ್ನಪ್ಪಿದ ದುರ್ದೈವಿ. ಈತ ಅದೇ ಗ್ರಾಮದ ಶಿವಣ್ಣ…

ಖಾಸಗಿ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಗೆ ಸಿಎಂಗೆ ಮನವಿ

ಬೆಂಗಳೂರು: ಕೋವಿಡ್ ಕಾರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಅನುದಾನ ರಹಿತ ಶಿಕ್ಷಕರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆಗೆ ಶಿಕ್ಷಣ ಸಚಿವ ಸುರೇಶ್‍ ಕುಮಾರ್ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿರುವ ಅವರು, ಸರ್ಕಾರ ವಿಧಿಸಿದ ಲಾಕ್ ಡೌನ್ ರಾಜ್ಯಾದ್ಯಂತ…

ಕಾರ್ಮಿಕರಿಗೆ ಮಾಸಿಕ 10ಸಾವಿರ ನೆರವಿಗೆ ಆಗ್ರಹ

ಬೆಂಗಳೂರು: ಕೊರೊನಾ ಲಾಕ್ಡೌನ್ ನಿಂದಾಗಿ ವಾಣಿಜ್ಯ ಚಟುವಟಿಕೆಗಳು ಸ್ತಬ್ಧಗೊಂಡಿದ್ದು, ಕಾರ್ಮಿಕ ವರ್ಗ ಅಪಾರ ತೊಂದರೆಗೆ ಸಿಲುಕಿದ್ದು, ಕಾರ್ಮಿಕರ ಅಭ್ಯುದಯಕ್ಕೆ ಹಣಕಾಸಿನ ನೆರವಿನ ಜೊತೆಗೆ ಇತರ ಸೌಲಭ್ಯಗಳನ್ನೂ ಸರ್ಕಾರ ನೀಡಬೇಕು, ಲಾಕ್ಡೌನ್ ಸಂಕಷ್ಟದ ಕೆಲಸವಿಲ್ಲದ ಅವಧಿಗೆ ತಲಾ ಮೂರು ಸಾವಿರ ರೂ ಕಾರ್ಮಿಕರಿಗೆ…

ಹಾರೋಹಳ್ಳಿಯಲ್ಲಿ ಕೊರೋನಾಗೆ ವ್ಯಕ್ತಿ ಬಲಿ

ಪಾಂಡವಪುರ : ಕೊರೊನಾ ಮಹಾಮಾರಿಗೆ ಪಟ್ಟಣದ ಹಾರೋಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ಗ್ರಾಮದ ದಿವಂಗತ ಯಜಮಾನ್ ಸಿದ್ದೇಗೌಡ ಪುತ್ರ ಶಿವಕುಮಾರ್ ಅಲಿಯಾಸ್ ಅಂಗಡಿ ಬಾಬು (40) ಮೃತ ವ್ಯಕ್ತಿ. ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರರನ್ನು ಆಗಲಿದ್ದಾರೆ. ಕಳೆದ…

ಪಾಂಡವಪುರ ತಾಲೂಕು ಆಡಳಿತಕ್ಕೆ ಅಂಬ್ಯುಲೆನ್ಸ್ ಹಸ್ತಾಂತರ

ಪಾಂಡವಪುರ: ಕೊರೊನಾ ಎರಡನೇ ಅಲೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸೇವೆ ದೊರಕಿಸುವ ಸಲುವಾಗಿ ರೈತಸಂಘ, ಕೆ.ಎಸ್.ಪುಟ್ಟಣ್ಣಯ್ಯ ಫೌಂಡೇಶನ್, ದರ್ಶನ್ ಪುಟ್ಟಣ್ಣಯ್ಯ ಅಭಿಮಾನಿಗಳ ವತಿಯಿಂದ ಆಕ್ಸಿಜನ್ ಸಹಿತ ಆಂಬುಲೆನ್ಸ್ ಹಾಗೂ 1 ಸಾವಿರ ಔಷಧಿ ಕಿಟ್‌ಗಳನ್ನು ವಿತರಿಸಲಾಯಿತು. ಪಟ್ಟಣದ…

ಕೆ.ಆರ್.ಪೇಟೆ: ವಾರದ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್

ಕೆ.ಆರ್.ಪೇಟೆ: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಗ್ರಾಮೀಣ ಪ್ರದೇಶಕ್ಕೆ ವ್ಯಾಪಕವಾಗಿ ಹರಡುವ ಸೂಚನೆಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಜನರ ಆರೋಗ್ಯದ ಹಿತದೃಷ್ಠಿಯಿಂದ ಕೆ.ಆರ್.ಪೇಟೆ ಟೌನ್ ಸೇರಿದಂತೆ ತಾಲೂಕಿನಾದ್ಯಂತ ವಾರದಲ್ಲಿ ನಾಲ್ಕು ದಿನಗಳು ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ…