Month: May 2021

ಆರೋಗ್ಯಕರ ಬದುಕಿಗೆ ನಿದ್ದೆ ಅತಿಮುಖ್ಯ..!

ನಮ್ಮ ಎಲ್ಲ ಆಯಾಸಗಳನ್ನು ಹೊಡೆದೋಡಿಸಿ ದೇಹವನ್ನು ಉಲ್ಲಾಸಗೊಳಿಸುವ ಶಕ್ತಿಯಿರುವುದು ನಿದ್ದೆಗೆ ಮಾತ್ರ. ಹೀಗಿರುವಾಗ ನಮ್ಮ ದಿನನಿತ್ಯದ ಜೀವನದಲ್ಲಿ ಆರೋಗ್ಯಕರ ನಿದ್ದೆಗೆ ಒತ್ತು ನೀಡುವುದು ಅತಿ ಮುಖ್ಯವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಲೈಫ್ ಸ್ಟೈಲ್ ಒಂದಷ್ಟು ಬದಲಾವಣೆಯಾಗಿದೆ. ಹೀಗಾಗಿ ರಾತ್ರಿಯೆಲ್ಲ ಮೊಬೈಲ್, ಟಿವಿ ನೋಡುತ್ತಾ…

ಪ್ರಮಾಣವಚನ ಸ್ವೀಕರಿಸಿದ ತಮಿಳುನಾಡು ಸಿಎಂ ಸ್ಟಾಲಿನ್

ಚೆನೈ: ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಆಯ್ಕೆಯಾಗಿದ್ದ ಡಿಎಂಕೆ ನಾಯಕ ಎಂ.ಕೆ.ಸ್ಟಾಲೀನ್ ಅವರು ಶುಕ್ರವಾರ ತಮಿಳುನಾಡಿನ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಬನವರಿವಾಲ್ ಪುರೋಹಿತ್ ಅವರು ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಅವರ ಸಚಿವ ಸಂಪುಟದ ೩೩ ಮಂದಿ ನೂತನ…

ನಾಗರಹೊಳೆ ಕಾಡಂಚಿನ ಜನರ ನೆಮ್ಮದಿ ಕಸಿದ ಹುಲಿರಾಯ!

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಗ್ರಾಮಗಳ ರೈತರ ನಿದ್ದೆಗೆಡಿಸಿರುವ ಹುಲಿಗಾಗಿ ಸಾಕಾನೆಗಳ ಸಹಾಯದಿಂದ ಹುಡುಕಾಟ ಆರಂಭವಾಗಿದೆ. ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಾಡಂಚಿನ ದಾಸನಪುರ ಮತ್ತು ದೊಡ್ಡಹೆಜ್ಜೂರಿನಲ್ಲಿ ಹುಲಿಯೊಂದು ಮೇಲಿಂದ ಮೇಲೆ ಜಾನುವಾರಗಳ ಮೇಲೆ ದಾಳಿ ಮಾಡುತ್ತಿದ್ದು ಕಳೆದೊಂದು ವಾರದಲ್ಲಿ…

ಚಾಮರಾಜನಗರದಲ್ಲಿ 14ಮಂದಿ ಕೊರೋನಾಗೆ ಬಲಿ

ಚಾಮರಾಜನಗರ: ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದ್ದು, ಗುರುವಾರ ಹದಿನಾಲ್ಕು ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಗುರುವಾರ ರಾತ್ರಿವರೆಗೆ 794 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಕೊರೊನಾ ಸೋಂಕಿನಿಂದ…

ಕೊರೋನಾ ತಡೆಗೆ ಮೈಸೂರಿನ ಹದಿನಾರು ಗ್ರಾಮ ಸೀಲ್ ಡೌನ್

ಮೈಸೂರು: ಮಹಾಮಾರಿ ಕೊರೋನಾ ಸೋಂಕು ಇದೀಗ ಗ್ರಾಮೀಣ ಪ್ರದೇಶವನ್ನು ಇನ್ನಿಲ್ಲದಂತೆ ಕಾಡಲು ಆರಂಭಿಸಿದೆ. ಕಳೆದ ಬಾರಿ ಗ್ರಾಮಗಳನ್ನು ಸೀಲ್ ಡೌನ್ ಮಾಡುವ ಮೂಲಕ ನಿಯಂತ್ರಣ ಮಾಡಲಾಗಿತ್ತಾದರೂ ಈ ಬಾರಿ ಸೀಲ್ ಡೌನ್ ಮಾಡದ ಕಾರಣದಿಂದಾಗಿ ತೀವ್ರತೆ ಹೆಚ್ಚಾಗುತ್ತಿದೆ ಎಂಬ ಆರೋಪಗಳು ಕೇಳಿ…

ಕೊರೋನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ಸಚಿವ ನಾರಾಯಣಗೌಡ

ಮಂಡ್ಯ: ಕೊರೋನಾ ಬಗ್ಗೆ ಭಯ ಬೇಡ, ಆತ್ಮವಿಶ್ವಾಸದಿಂದ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಕೊರೋನಾ ಯುದ್ಧವನ್ನು ಗೆದ್ದು ಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ ನಾರಾಯಣಗೌಡ ಕೊರೋನಾ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಶೆಟ್ಟನಾಯಕನಕೊಪ್ಪಲು ಗ್ರಾಮದಲ್ಲಿರುವ ಕಿತ್ತೂರರಾಣಿ ಚೆನ್ನಮ್ಮ ವಸತಿಶಾಲೆಯಲ್ಲಿ…

ಡಿಸಿಯನ್ನು ಮೈಸೂರಿನಲ್ಲೇ ಉಳಿಸಲು ಮನವಿ

ಮೈಸೂರು: ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಇಪ್ಪತ್ತನಾಲ್ಕು ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಮೇಲೆ ಆರೋಪ ಹೊರಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆಗೊಳಿಸದೆ ಜಿಲ್ಲಾಧಿಕಾರಿಯಾಗಿ…

ಚರಕ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಕೊಡುಗೆ

ಮೈಸೂರು: ಕೊರೋನಾ ಮಹಾಮಾರಿ ಹೆಚ್ಚುತ್ತಿರುವ ಈ ಕಾಲದಲ್ಲಿ ಆಸ್ಪತ್ರೆಗೆ ಬರುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬಹಳಷ್ಟು ಆಸ್ಪತ್ರೆಗಳಲ್ಲಿ ಕುಳಿತುಕೊಳ್ಳಲು ಕುರ್ಚಿಗಳಾಗಲೀ, ನೆರಳಾಗಲೀ ಇಲ್ಲದಂತಾಗಿದೆ. ಇದನ್ನರಿತ ಜೀವಧಾರ ರಕ್ತನಿಧಿ ಕೇಂದ್ರವು ಮೈಸೂರಿನ ಗಂಗೋತ್ರಿ ಬಡಾವಣೆಯಲ್ಲಿರುವ ಆಯುಷ್ ಇಲಾಖೆಯ ಚರಕ ಸರ್ಕಾರಿ ಆಯುರ್ವೇದ ಸ್ನಾತಕೋತರ…

ಚುನಾವಣೆಯ ಫಲಿತಾಂಶದಂತೆಯೇ ಆಸ್ಪತ್ರೆಗಳಲ್ಲಿನ ಹಾಸಿಗೆ, ವೆಂಟಿಲೇಟರ್ ಇನ್ನಿತರ ಆರೋಗ್ಯ ಸೌಲಭ್ಯಗಳ‌ ಮಾಹಿತಿಯನ್ನು ಮಾಧ್ಯಮಗಳು ದಿನವಿಡೀ ಪ್ರಕಟಿಸಲಿ ಎಂದು ಒತ್ತಾಯ

ಮೈಸೂರು 05. ಕರೋನ ಮಹಾಮಾರಿಯ ಹೆಸರಿನಲ್ಲಿ ಆಗುತ್ತಿರುವ ಭ್ರಷ್ಟಾಚಾರವನ್ನು ತಡೆಯಲು ಮಾಧ್ಯಮ ರಂಗದವರು ಸಹಕರಿಸಬೇಕಾಗಿ ವಿನಂತಿಸುತ್ತ ಸುವರ್ಣ ಬೆಳಕು ಫೌಂಡೇಶನ್ ವತಿಯಿಂದ ಮನವಿ. ಕರೋನ ಮಹಾಮಾರಿ ಎರಡನೆ ಅಲೆಯ ಸಂಕಷ್ಟದ ಕಾರಣದಿಂದಾಗಿ ಸಾರ್ವಜನಿಕರು ಅಪಾರ ತೊಂದರೆಗಳಿಗೆ ಒಳಗಾಗುತ್ತಿದ್ದಾರೆ. ಸಾಮಾನ್ಯ ಜನತೆಯು ಆಸ್ಪತ್ರೆಗಳಲ್ಲಿ…

ನಾಗೇಂದ್ರಬಾಬು-ರಾಜಣ್ಣರಿಗೆ ಆರ್.ಕೆ.ಲಕ್ಷ್ಮಣ್ ಪ್ರಶಸ್ತಿ ಪ್ರದಾನ

ಮೈಸೂರು: ವಿಶ್ವ ವ್ಯಂಗ್ಯ ಚಿತ್ರಕಾರರ ದಿನಾಚರಣೆ ಅಂಗವಾಗಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಹಾಗೂ ಮೈಸೂರು ಯುವ ಬಳಗದ ವತಿಯಿಂದ ಆರ್.ಕೆ.ಲಕ್ಷ್ಮಣ್ ಸ್ಮೃತಿ ಪ್ರಶಸ್ತಿ ಪ್ರದಾನವನ್ನು ವಿದ್ಯಾರಣ್ಯಪುರಂನಲ್ಲಿರುವ ಎಸ್.ವಾಸುದೇವ್ ಮಹಾರಾಜ್ ಫೌಂಡೇಶನ್ ಆವರಣದಲ್ಲಿ ನಾಡಿನ ಖ್ಯಾತ ವ್ಯಂಗ್ಯ ಚಿತ್ರಗಾರ ಹಾಗೂ ಫುಲ್ ಬ್ರೈಟ್…

ಕೊರೋನಾ ಮಹಾಮಾರಿಗೆ ತತ್ತರಿಸಿದ ಕೊಡಗು!

ಮಡಿಕೇರಿ: ಕಳೆದ ಮೂರು ವರ್ಷಗಳಿಂದ ಕೊಡಗು ಮಹಾಮಳೆ, ಪ್ರವಾಹ, ಜಲಪ್ರಳಯದಿಂದ ತತ್ತರಿಸಿಹೋಗಿದೆ. ಅದರ ನಡುವೆ ಕಳೆದೊಂದು ವರ್ಷದಿಂದ ಕೊರೋನಾ ಎಂಬ ತೂಗುಕತ್ತಿ ನೇತಾಡುತ್ತಿರುವುದರಿಂದ ಒಂದೆಡೆ ಜೀವ ಉಳಿಸಿಕೊಳ್ಳಲು ಇನ್ನೊಂದೆಡೆ ಜೀವನ ಮಾಡಲು ಹೆಣಗಾಡಬೇಕಾಗಿದೆ. ಕೊಡಗಿನಲ್ಲಿ ಕೃಷಿ ಹೊರತು ಪಡಿಸಿದರೆ ಇತರೆ ಯಾವ…

ಚಾಮರಾಜನಗರ ಡಿಸಿ ಆರೋಪಕ್ಕೆ ಮೈಸೂರು ಡಿಸಿ ಸ್ಪಷ್ಟನೆ

ಮೈಸೂರು: ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ನಡೆದ ದುರ್ಘಟನೆಗೆ ಮೈಸೂರು ಜಿಲ್ಲಾಧಿಕಾರಿಯನ್ನು ಹೊಣೆಯಾಗಿಸಿ ಆರೋಪ ಮಾಡುತ್ತಿರುವುದಕ್ಕೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪ್ರತಿ ಜಿಲ್ಲೆಯಲ್ಲಿ ಆಕ್ಸಿಜನ್ ಬಗ್ಗೆ ಕಾಳಜಿ ವಹಿಸಬೇಕಿತ್ತು. ಅವರು ತಮ್ಮ ವೈಫಲ್ಯವನ್ನಿಟ್ಟುಕೊಂಡು…

ಮೈಸೂರಲ್ಲಿ ಅಕ್ಸಿಜನ್ ಸಿಲಿಂಡರ್ ಅಕ್ರಮ ಮಾರಾಟ!

ಮೈಸೂರು: ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆಕ್ಸಿಜನ್ ಸಿಗದೆ ಕೆಲವು ಸೋಂಕಿತರು ಸಾವನ್ನಪ್ಪುತ್ತಿರುವ ಘಟನೆಗಳು ಕಣ್ಣಮುಂದೆಯೇ ನಡೆಯುತ್ತಿದ್ದರೂ ಕೆಲವರು ಕಾಳ ಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರಿ ಹಣ ಸಂಪಾದಿಸುವ ದಂಧೆಗಿಳಿದಿರುವುದು ದುರಂತವೇ ಸರಿ. ಎರಡು ದಿನಗಳ ಹಿಂದೆಯಷ್ಟೆ ಚಾಮರಾಜನಗರ…

ಅಧರ್ಮದ ಬಾಗಿಲು ಬೇಗ ತೆರೆಯಬಹುದು… ಆದರೆ?

ಮಗುವಾಗಿ ಭೂಮಿಗೆ ಬಂದಾಗ ನಮಗೆ ಜಾತಿ ಸಂಸ್ಕೃತಿ, ಯಾವುದೂ ಇರಲ್ಲ. ನಂತರ ಹೆತ್ತವರ ಆರೈಕೆಯಲ್ಲಿ ಬೆಳೆಯುತ್ತಾ ಎಲ್ಲವೂ ಬರುತ್ತದೆ. ಮಗು ಹುಟ್ಟಿದ ಮನೆಯ ಆಚಾರ, ವಿಚಾರ, ನಡೆ, ನುಡಿಯನ್ನು ಅನುಕರಣೆ ಮಾಡುತ್ತಾ ಬೆಳೆಯುತ್ತದೆ. ಮಗು ಬೆಳೆಯುತ್ತಾ ಹೋದಂತೆಯೇ ಸುತ್ತಲಿನ ಪರಿಸರ, ಬೆಳೆಯುತ್ತಿರುವ…

ಕೊರೋನಾ ನಿಯಂತ್ರಣಕ್ಕೆ ಭೂವರಹನಾಥನಿಗೆ ವಿಶೇಷ ಪೂಜೆ

ಕೃಷ್ಣರಾಜಪೇಟೆ: ಒಂದೆಡೆ ಮನುಷ್ಯನನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೋನಾ ಮಹಾಮಾರಿಯನ್ನು ನಿಯಂತ್ರಿಸುವ ಸಲುವಾಗಿ ಹೋರಾಟ ನಡೆಯುತ್ತಿದ್ದರೆ ಮತ್ತೊಂದೆಡೆ ದೇಗುಲಗಳಲ್ಲಿ ಪ್ರಾರ್ಥನೆ, ವಿಶೇಷ ಪೂಜೆಗಳು ಕೂಡ ನಡೆಯುತ್ತಿದ್ದು, ಅದರಂತೆ ಕೊರೋನಾ ಎರಡನೇ ಅಲೆಯ ಭೀತಿಯನ್ನು ಹೋಗಲಾಡಿಸುವಂತೆ ಪ್ರಾರ್ಥಿಸಿ ತಾಲೂಕಿನ ಭೂವರಹನಾಥಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗಿದೆ.…