ಮೈಸೂರು: ಮೈಮೇಲೆ ಬಿಸಿ ನೀರು ಸುರಿದುಕೊಂಡಿದ್ದ ೨ ವರ್ಷದ ಮಗು ಮೃತಪಟ್ಟ ಘಟನೆ ಮೈಸೂರು ತಾಲೂಕಿನ ದಾಸನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ದಾಸನಕೊಪ್ಪಲು ನಿವಾಸಿಯಾದ ರಾಮು-ಜಯಲಕ್ಷ್ಮೀ ದಂಪತಿ ಪುತ್ರಿ ಆದ್ಯಾ (2) ಮೃತಪಟ್ಟ ಮಗು. ಸ್ನಾನ ಮಾಡಿಸುವಾಗ ತಣ್ಣೀರು ತರುವುದಕ್ಕೆಂದು ತಾಯಿ ಹೋಗಿದ್ದರು. ಈ ವೇಳೆ ತಿಳಿಯದೆ ಮಗು ಮೈಮೇಲೆ ಬಿಸಿ ನೀರು ಸುರಿದುಕೊಂಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಆದ್ಯಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೆ.ಆರ್.ಆಸ್ಪತ್ರೆಯಲ್ಲಿ ಮಗು ಕೊನೆಯುಸಿರೆಳೆದಿದೆ.