ಚಾಮರಾಜನಗರ: ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದ್ದು, ಗುರುವಾರ ಹದಿನಾಲ್ಕು ಮಂದಿ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಗುರುವಾರ ರಾತ್ರಿವರೆಗೆ 794 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಹದಿನಾಲ್ಕು ಮಂದಿ ಸಾವನ್ನಪ್ಪುವುದರೊಂದಿಗೆ ಇದುವರೆಗೂ ಮೃತಪಟ್ಟ ಸೋಂಕಿತರ ಸಂಖ್ಯೆ212ಕ್ಕೇರಿದೆ.
ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದ್ದು, ಜಿಲ್ಲೆಯಲ್ಲಿ3801 ಸಕ್ರೀಯ ಪ್ರಕರಣ ದೃಢವಾಗಿದೆ. ರೋಗದ ಗುಣಲಕ್ಷಣ ಹೊಂದಿದವರು ತಪಾಸಣೆ ನಡೆಸುತ್ತಿದ್ದು, ಪರೀಕ್ಷಾ ವರದಿಗಳಲ್ಲಿ ಸೋಂಕು ದೃಢವಾಗುತ್ತಿರುವುದು ಆತಂಕ ತಂದಿದೆ. ಈ ನಡುವೆ ಕೋರೊನಾ ಸೋಂಕಿನಿಂದ ಗುಣಮುಖರಾಗಿ 379 ಮಂದಿ ಬಿಡುಗಡೆಹೊಂದಿದ್ದು, ಇದುವರೆಗೆ ಕೊರೋನಾ ಸೋಂಕಿನಿಂದ 10325 ಮಂದಿ ಗುಣಮುಖರಾಗಿದ್ದಾರೆ. ಗುರುವಾರ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯಿಂದ744 ಹಾಗೂ ರಾಫಿಡ್ ಪರೀಕ್ಷೆಯಿಂದ50ಮಂದಿಗೆ ಕೊರೋನಾ ಸೋಂಕು ದೃಢವಾಗಿದೆ.
ಕೋರೊನಾ ಸೋಂಕಿನಿಂದ ಚಾಮರಾಜನಗರ ಪಟ್ಟಣದ 49ವರ್ಷದ ಮಹಿಳೆ, ಹೊನ್ನಹಳ್ಳಿ ಗ್ರಾಮದ 55 ವರ್ಷದ ಪುರುಷ, ಉಮ್ಮತ್ತೂರು ಗ್ರಾಮದ40 ವರ್ಷದ ಪುರುಷ, ಬಂಡಿಗೆರೆ ಗ್ರಾಮದ 50 ವರ್ಷದ ಪುರುಷ, ಕೊಳ್ಳೇಗಾಲ ಪಟ್ಟಣದ 40ವರ್ಷದ ಪುರುಷ, ತಾಲ್ಲೂಕಿನ ಬಂಡಳ್ಳಿ ಗ್ರಾಮದ 50 ವರ್ಷದ ಪುರುಷ, ಕುಂತೂರು ಗ್ರಾಮದ 45ವರ್ಷದ ಮಹಿಳೆ, ಗುಂಡ್ಲುಪೇಟೆ ತಾಲ್ಲೂಕಿನ ಹೊಂಗಹಳ್ಳಿ ಗ್ರಾಮದ 42ವರ್ಷದ ಪುರುಷ, ಯಳಂದೂರು ತಾಲ್ಲೂಕಿನ ಮಲ್ಲಿಗಳ್ಳಿ ಗ್ರಾಮದ63 ವರ್ಷದ ಪುರುಷ, ಕೆಸ್ತೂರುಗ್ರಾಮದ 70 ವರಷದ ಪುರುಷ, ಕಂದಹಳ್ಳಿ ಗ್ರಾಮದ 45 ವರ್ಷದ ಪುರುಷ, ಹನೂರು ಪಟ್ಟಣದ 60ವರ್ಷದ ಪುರುಷ, ತಾಲ್ಲೂಕಿನ ಪಿ.ಬಿ ದೊಡ್ಡಿ ಗ್ರಾಮದ80 ವರ್ಷದ ಮಹಿಳೆ, ದೊಮ್ಮನ ಗದ್ದೆ ಗ್ರಾಮದ 39 ವರ್ಷದ ಪುರುಷ ಸಾವನ್ನಪ್ಪಿದ್ದಾರೆ ಎಂದು ಚಾಮರಾಜನಗರ ಜಿಲ್ಲಾಡಳಿತ ಹೊರಡಿಸಿದ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.