ಉಡುಪಿ : ಹಿಜಾಬ್ ವಿವಾದದ ನಡುವೆಯೇ ಉಡುಪಿ ಜಿಲ್ಲಾಡಳಿತವು ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳ ಸುತ್ತಮುತ್ತ ಫೆಬ್ರವರಿ 14 ರಿಂದ ಫೆಬ್ರವರಿ 19 ರವರೆಗೆ ಸೆಕ್ಷನ್ 144 ಜಾರಿಗೊಳಿಸಿದೆ. ಜಿಲ್ಲೆಯ ಪ್ರೌಢಶಾಲೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ಮೆರವಣಿಗೆ ಮತ್ತು ಘೋಷಣೆಗಳಿಗೆ ಅವಕಾಶ ನಿಷೇಧಿಸಲಾಗಿದೆ.

ಹಿಜಾಬ್ ಕೇಸರಿ ವಿವಾದದ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ವಿದ್ಯಾರ್ಥಿಗಳ ಸಮರಕ್ಕೆ ಕಡಿವಾಣ ಹಾಕಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಪ್ರೌಢ ಶಾಲಾ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.
ಉಡುಪಿ ಜಿಲ್ಲಾಡಳಿತದ ಈ ಆದೇಶವು ಫೆ.14ರ ಬೆಳಗ್ಗೆ 6ರಿಂದ ಫೆ.19ರ ಸಂಜೆ 6ರವರೆಗೆ ಅನ್ವಯವಾಗಲಿದೆ. ಆದೇಶದ ಪ್ರಕಾರ, ಪ್ರೌಢಶಾಲೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ. ಪ್ರತಿಭಟನೆಗಳು ಮತ್ತು ರ್ಯಾಲಿಗಳಿಗೆ ನಿಷೇಧವಿದೆ. ಘೋಷಣೆಗಳನ್ನು ಕೊಗುವುದು, ಹಾಡುಗಳನ್ನು ಹಾಡುವುದು ಅಥವಾ ಭಾಷಣ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.