• ಜನರಿಗೆ ಸಹಕರಿಸುವಂತೆ ಸಚಿವರು ಮಾಡಿದ ಮನವಿಗೆ ಸ್ಪಂದಿಸಿದ ಆಸ್ಪತ್ರೆ
• ಸರ್ಕಾರದಿಂದ ಕೆಲವು ನೆರವು ಕೇಳಿದ ಆಸ್ಪತ್ರೆ, ಸಚಿವರಿಂದ ಮಾಡಿಸಿಕೊಡುವ ಭರವಸೆ
ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರ ಹಾಗೂ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಅತಿ ದೊಡ್ಡ ಆಸ್ಪತ್ರೆಯಾಗಿರುವ ಬಿಜಿಎಸ್ ಜಿಮ್ಸ್ ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಸಾರ್ವಜನಿಕ ಬಳಕೆಗೆ ಆಕ್ಸಿಜನ್ ಬೆಡ್ ವ್ಯವಸ್ಥೆಯನ್ನು 100ಕ್ಕೆ ಹೆಚ್ಚಿಸುವಂತೆ ಯಶವಂತಪುರ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮಾಡಿದ ಮನವಿಗೆ ಪೂರಕ ಸ್ಪಂದನೆ ದೊರೆತಿದೆ.
ಸೋಮವಾರ ಬಿಜಿಎಸ್ ಜಿಮ್ಸ್ ಗೆ ಭೇಟಿ ನೀಡಿದ ಸಚಿವರು, ದಿನೇ ದಿನೆ ಕೋವಿಡ್ ಮಹಾಮಾರಿ ಪ್ರಕರಣಗಳು ಹೆಚ್ಚಳಗೊಳ್ಳುತ್ತಿದೆ. ಎಲ್ಲ ಕಡೆಯೂ ಆಕ್ಸಿಜನ್ ಬೆಡ್ ಕೊರತೆ ಕಂಡುಬರುತ್ತಿದೆ. ಇಂತಹ ಸಮಸ್ಯೆ ನನ್ನ ಕ್ಷೇತ್ರದಲ್ಲಿ ತಲೆದೋರಬಾರದು. ಜನರಿಗೆ ಉತ್ತಮ ಚಿಕಿತ್ಸೆ ದೊರೆಯಬೇಕು ಎಂದು ತಿಳಿಸಿದರು.
ಬಿಜಿಎಸ್ ಆಸ್ಪತ್ರೆಯು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಇರುವ 450 ಬೆಡ್ ಗಳಲ್ಲಿ 200 ಬೆಡ್ ಗಳನ್ನು ಕೋವಿಡ್ ನಿರ್ವಹಣೆಗೆ ಕೊಟ್ಟು ಸಹಕಾರ ನೀಡಿದ್ದಾರೆ. ಆದರೆ, ಆಕ್ಸಿಜನ್ ಬೆಡ್ ಗಳ ಕೊರತೆಯಾಗಬಾರದು. ಈಗಾಗಲೇ 40 ಆಕ್ಸಿಜನ್ ಸಿಲಿಂಡರ್ ಗಳು ಹಾಗೂ 10 ವೆಂಟಿಲೇಟರ್ ಗಳ ಅವಶ್ಯಕತೆ ಇದ್ದು, ಸರ್ಕಾರದಿಂದ ಒದಗಿಸಿ ಕೊಡಬೇಕೆಂದು ಆಸ್ಪತ್ರೆ ಮಂಡಳಿ ಕೋರಿದ್ದು, ತಕ್ಷಣ ಆರೋಗ್ಯ ಇಲಾಖೆ ಜೊತೆಗೆ ಮಾತನಾಡಿ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
40 ಆಕ್ಸಿಜನ್ ಸಿಲಿಂಡರ್ ಗೆ ವ್ಯವಸ್ಥೆ ಮಾಡಿದರೆ ಈಗಿರುವ 200 ಬೆಡ್ ಗಳಲ್ಲಿ 100 ಬೆಡ್ ಗಳನ್ನು ಆಕ್ಸಿಜನ್ ಬೆಡ್ ಗಳಾಗಿ ಪರಿವರ್ತಿಸಲಾಗುತ್ತದೆ ಎಂದು ಆಸ್ಪತ್ರೆ ತಿಳಿಸಿದ್ದು, ಇದರಿಂದ ಸಾರ್ವಜನಿಕರಿಗೆ ಬಹಳವೇ ಅನುಕೂಲವಾಗಲಿದೆ. ಇದರಿಂದ ತುರ್ತು ಚಿಕಿತ್ಸೆ ಅಗತ್ಯವಿದ್ದವರಿಗೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು.
ತಿಂಗಳಲ್ಲಿ ಆಕ್ಸಿಜನ್ ಪ್ಲಾಂಟ್
ಬಿಜಿಎಸ್ ಆಸ್ಪತ್ರೆ ವತಿಯಿಂದ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಎಲ್ಲವೂ ಅಂದುಕೊಂಡಂತಾದರೆ ಇನ್ನು 20 ದಿನದಲ್ಲಿ ಪ್ಲಾಂಟ್ ಉತ್ಪಾದನೆಗೆ ಸಿದ್ಧಗೊಳ್ಳಲಿದ್ದು, ತಿಂಗಳೊಳಗೆ ಕಾರ್ಯಾಚರಣೆ ಪ್ರಾರಂಭಿಸಲಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದ್ದು, ಆಕ್ಸಿಜನ್ ಪ್ಲಾಂಟ್ ನಿರ್ಮಾಣವಾದ ಬಳಿಕ ಇನ್ನೂ ಹೆಚ್ಚಿನ ಆಕ್ಸಿಜನ್ ಬೆಡ್ ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಆದಷ್ಟು ಶೀಘ್ರದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣವಾಗಲಿದ್ದು, ಇದಕ್ಕೆ ಸರ್ಕಾರದಿಂದ ಬೇಕಾದ ಸಹಕಾರ ಸಿಗಲಿದೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ರಾಜರಾಜೇಶ್ವರಿನಗರ ವಲಯದ ಆಯುಕ್ತರಾದ ರೆಡ್ಡಿ ಶಂಕರ್ ಬಾಬು ಉಪವಿಭಾಗಧಿಕಾರಿ ಶಿವಣ್ಣ ಇವರೊಂದಿಗೆ ಬಿಜಿಎಸ್ ಗ್ಲೋಬಲ್ ಮುಖ್ಯಸ್ಥರು ಸೇರಿದಂತೆ ಆರ್ ಆರ್ ನಗರ ವಲಯದ ವೈದ್ಯಾಧಿಕಾರಿಗಳು, ಆಸ್ಪತ್ರೆ ವೈದ್ಯರು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
*100 ಆಕ್ಸಿಜನ್ ಬೆಡ್ ಕೊಡುವಂತೆ ಬಿಜಿಎಸ್ ಜಿಮ್ಸ್ ಗೆ ಸಚಿವ ಎಸ್ ಟಿ ಎಸ್ ಮನವಿ*