ಹಾಸನ: ಕೊರೊನಾದ ಸಂಕಷ್ಟದ ಸಮಯದಲ್ಲಿ ಬಡವರ, ದಿನಕೂಲಿ ಮಾಡುವವರ ಕಷ್ಟಗಳನ್ನು ಅರಿತು ಸಂತ ಜೋಸೆಫರ ವಿದ್ಯಾಸಂಸ್ಥೆಯ ಸ್ಪಂದಿಸಿದೆ.

ಈಗಾಗಲೇ ಸಹಾಯ ಹಸ್ತ ಚಾಚುವ ಕಾರ್ಯದಲ್ಲಿ ನಿರತವಾಗಿರುವ ಸಂಸ್ಥೆಯು ಸದಾ ಬಿಡುವಿಲ್ಲದ ಶೈಕ್ಷಣಿಕ ಚಟುವಟಿಕೆಗಳ ಮಧ್ಯದಲ್ಲೂ ಶಾಲಾ, ಕಾಲೇಜುಗಳು ಕೋವಿಡ್ ಸಂತ್ರಸ್ತರಿಗೆ ನೆರವು ನೀಡುವುದರೊಂದಿಗೆ ಆಸೆರೆಯಾಗಿ ನಿಂತಿವೆ.

ಸಂಸ್ಥೆ ಮುಖ್ಯಸ್ಥರಾದ ರೆ.ಫಾದರ್ ಜೋಸೆಫ್ ಡಿ’ಸೋಜ  ಎಸ್ ಜೆ ಹಾಗೂ ಕೋವಿಡ್ ನಿರ್ವಹಣಾ ಜವಬ್ದಾರಿ ಹೊತ್ತಿರುವ ರೆ. ಫಾದರ್ ಹೆನ್ರಿ ಸಲ್ಡಾನ ಎಸ್.ಜೆ ಅವರು ಸುಮಾರು 200 ಕುಟುಂಬಗಳಿಗೆ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಗೋಧಿ, ರವೆ, ಸಕ್ಕರೆ, ಉಪ್ಪು ಹಾಗೂ ತರಕಾರಿಗಳನ್ನು ಒಳಗೊಂಡ ಆಹಾರದ ಕಿಟ್‌ಗಳನ್ನು ತಯಾರಿಸಿ ನಗರದ ಅಗಿಲೆ ಹಳ್ಳಿ, ಹಾಗೂ ಹೊರವಲಯದ ರಸ್ತೆ ಬದಿಯಲ್ಲಿ ಬೀಡುಬಿಟ್ಟಿರುವ ಗುಡಿಸಲು ವಾಸಿಗಳಿಗೆ, ಚನ್ನಪಟ್ಟಣ, ಶಾಂತಿಗ್ರಾಮ, ಚೌರಿಕೊಪ್ಪಲು, ಮುಂತಾದ ಸ್ಥಳಗಳಿಗೆ ಹೋಗಿ ವಿತರಿಸಿದ್ದಾರೆ.

ಇವರ ಕಾರ್ಯಕ್ಕೆ ರೆ.ಫಾದರ್ ಸಂತೋಷ್ ಎಸ್.ಜೆ ಹಾಗೂ ಬ್ರದರ್ ಮ್ಯಾಕ್ಸಿಮ್ ಎಸ್. ಜೆ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಕೈ ಜೋಡಿಸಿದ್ದಾರೆ. ಹಳೆಯ ವಿದ್ಯಾರ್ಥಿಗಳು ಸಹ ಸಹಾಯ ಮಾಡಿದ್ದಾರೆ. ಕೊರೊನಾ ಬಾಧಿತ ಪೊಲೀಸ್ ಇಲಾಖೆಯ ಕುಟುಂಬದವರಿಗೂ ಹಾಸನ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಯವರ ಸಲಹೆ ಪಡೆದು ಸಹಾಯವನ್ನು ಮಾಡಲಾಗಿದೆ. ಜತೆಗೆ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಕೊರೊನಾ ಬಾಧಿತ ಕುಟುಂಬಕ್ಕೂ ನೆರವು ನೀಡಲಾಗಿದೆ.

By admin