ಗುಂಡ್ಲುಪೇಟೆ: ಕಳೆದ 20 ವರ್ಷದಿಂದಲೂ ತಾಲ್ಲೂಕಿನಲ್ಲಿ ನಿಷ್ಕ್ರೀಯವಾಗಿದ್ದ ಕುರುಬ ಸಂಘವನ್ನು ಉಚ್ಛಾಟಿಸಿ ಈ ಬಾರಿ ಹೊಸ ಸಂಘ ರಚನೆ ಮಾಡಿಲಾಗಿದೆ ಎಂದು ನೂತನ ಕುರುಬರ ಸಂಘದ ಅಧ್ಯಕ್ಷ ಹಾಗೂ ಪುರಸಭಾ ಮಾಜಿ ಅಧ್ಯಕ್ಷರಾದ ಎಲ್. ಸುರೇಶ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರಲ್ಲಿ ಕುರುಬರ ಸಂಘದ ರಚನೆ ನಂತರ ಸಭೆ ನಡೆಸಿ ಮಾತನಾಡಿದ ಅವರು, ಈ ಹಿಂದಿನ ಅಧ್ಯಕ್ಷರು ತಾಲ್ಲೂಕಿನ ಕುರುಬ ಸಮಾಜದ ಅಭಿವೃದ್ಧಿಗೆ ಯಾವುದೇ ರೀತಿಯ ಕೆಲಸಗಳನ್ನು ಮಾಡಿಲ್ಲ. ಸಮಾಜದ ಸಭೆ, ಸಮಾರಂಭ, ಪ್ರತಿಭಟನೆಗಳು ನಡೆದರೂ ಅದಕ್ಕು ನಮಗೂ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಜನಾಂಗದ ಮುಖಂಡರು ತಿರ್ಮಾನಿಸಿ ಹೊಸ ಸಂಘ ರಚನೆ ಮಾಡಲಾಗಿದೆ ಎಂದರು.
ಎಚ್.ಎನ್.ಬಸವರಾಜು(ಗೌರವಾಧ್ಯಕ್ಷರು), ನಾಗರಾಜು(ವಾಟಾಳ್), ಸಿ.ಬಿ.ಬೀರೇಗೌಡ(ಉಪಾಧ್ಯಕ್ಷರು), ಚಿಕ್ಕಾಟಿ ಶಿವರಾಜು(ಪ್ರಧಾನ ಕಾರ್ಯದರ್ಶಿ), ಬೆಳವಾಡಿ ವೆಂಕಟೇಶ್(ಖಜಾಂಚಿ), ತೆರಕಣಾಂಬಿಹುಂಡಿ ಪ್ರಕಾಶ್, ಬಸವಣ್ಣ, ಕಲೀಗೌಡನಹಳ್ಳಿ ಬಸವೇಗೌಡ ಅವರನ್ನು ಸಂಘಟನಾ ಕಾರ್ಯದರ್ಶಿಗಳಾಗಿ ಆಯ್ಕೆ ಮಾಡಲಾಗಿದೆ. ಅಲ್ಲದೇ ಹೋಬಳಿವಾರು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಖಜಾಂಚಿ ವೆಂಕಟೇಶ್ ಮಾತನಾಡಿ, ಈ ಹಿಂದೆ ಇದ್ದವರು ಕೇವಲ ನಾಮಕಾವಸ್ಥೆಗೆ ಅಧ್ಯಕ್ಷರಾಗಿದ್ದರು. ಜನಾಂಗದ ಯಾವುದೇ ರೀತಿಯ ಹೋರಾಟಕ್ಕೆ ಭಾಗಿಯಾಗುತ್ತಿರಲಿಲ್ಲ. ಕನಕ ಭವನದ ಮುಂದೆ ಇರುವ ಸಮುದಾಯದ ಜಾಗವನ್ನು ಅವರು ಒತ್ತುವರಿ ಮಾಡಿಕೊಂಡಿಕೊಂಡಿದ್ದು, ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು ಎಂದರು.
ಈ ವೇಳೆ ಸಂಘದ ಗೌರವಾಧ್ಯಕ್ಷ ಎಚ್.ಎನ್. ಬಸವರಾಜು, ಪದಾಧಿಕಾರಿಗಳಾದ ಪುಟ್ಟಬುದ್ಧಿ, ಬೆಳವಾಡಿ ವೆಂಕಟೇಶ್, ತೆಂಕಲಹುಂಡಿ ನಾಗೇಶ್, ಬಸವೇಗೌಡ, ರಾಜಪ್ಪ ಹಾಜರಿದ್ದರು.