ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗೀತಾ ಮಹದೇವ್ ಹಾಗೂ ಉಪಾಧ್ಯಕ್ಷರಾಗಿ ಸಫೀರ್ ಅಹಮದ್ ಆಯ್ಕೆಗೊಂಡರು.
ಹಲಗನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗೀತ ಮಹದೇವ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಾಮಪತ್ರ ಸಲ್ಲಿಸಿ ಗೀತ ಮಹದೇವ್ 11 ಮತಗಳನ್ನು ಪಡೆದು ಜಯಶೀಲರಾದರೆ, ವೀಣಾ 07 ಮತಗಳನ್ನು ಪಡೆದು ಪರಾಭವಗೊಂಡರು. ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸಫೀರ್ ಅಹಮದ್ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಫೀಕ್ ಅಹಮಾದ್ ನಾಮಪತ್ರ ಸಲ್ಲಿಸಿ, ಸಫೀರ್ ಅಹಮದ್ 11 ಮತಗಳನ್ನು ಪಡೆದು ಜಯಶೀಲರಾದರೆ, ರಫೀಕ್ ಅಹಮದ್ 7 ಮತಗಳನ್ನು ಪಡೆದು ಪರಾಭವಗೊಂಡರು. ಇವರ ಆಯ್ಕೆಯನ್ನು ಚುನಾವಣಾಧಿಕಾರಿ ಲೋಹಿತ್ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗೀತಾ ಮಹದೇವ್ ಮಾತನಾಡಿ, ಅಧ್ಯಕ್ಷರಾಗಿ ಆಯ್ಕೆ ಮಾಡಿ ಬೆಂಬಲಿಸಿದ ಸರ್ವರಿಗೂ ಧನ್ಯವಾದಗಳು ಜನತೆಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸಿ, ಜನರ ಮತ್ತು ಗ್ರಾಮದ ಅಭಿವೃದ್ಧಿಗೆ ಶ್ರಮ ವಹಿಸುತ್ತೇನೆ ಎಂದರು.
ಉಪಾಧ್ಯಕ್ಷರಾಗಿ ಆಯ್ಕೆಯಾದ ರಫಿ ಅಹಮದ್ ಮಾತನಾಡಿ, ಅಧ್ಯಕ್ಷರು, ನಾನು ಹಾಗೂ ಆಯ್ಕೆಯಾದ ಗ್ರಾಮ ಪಂಚಾಯತಿ ಸದಸ್ಯರೆಲ್ಲರೂ ಪಕ್ಷಭೇದ ಮರೆತು ಜನರ ಸೇವೆ ಮಾಡುತ್ತೇವೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಅತ್ತರ್ ಮತ್ತಿನ್ ಮಾತನಾಡಿ, ಹಲಗನಹಳ್ಳಿ ಗ್ರಾಮ ಪಂಚಾಯಿತಿಯ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಯಶಸ್ವಿಯಾಗಿದ್ದು, ಆಯ್ಕೆಯಾದ ಎಲ್ಲಾ ಸದಸ್ಯರು ಜನರ ಆಶಯಕ್ಕೆ ತಕ್ಕಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಸದಸ್ಯರಾದ ಪುಟ್ಟಸ್ವಾಮಿಗೌಡ, ಕುಮಾರ್, ವಸಂತ್, ನೂರ್ ಅಸ್ಮ, ಸುನೋಬಿಯ, ಆರ್. ಎಸ್ ಮಹದೇವ್, ಸಂತೋಷ, ಸುರೇಶ್, ರವಿ ಗೌಡ, ವೆಂಕಟೇಶ್, ಗೋವಿಂದೇಗೌಡ, ಶಂಕರ್, ಯಶ್ರಿಫ್ ಅಹಮದ್, ಕುಮಾರ್, ಜಮೀರ್ ಅಹಮದ್, ಜಾಬೀರ್ ಅಹಮದ್ ಹಾಜರಿದ್ದರು.
ಮಾಗಳಿ ರಾಮೇಗೌಡ ವರದಿಗಾರರು ಪಿರಿಯಾಪಟ್ಟಣ