ಗುಂಡ್ಲುಪೇಟೆ: ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹರವೆ ಜಿಲ್ಲಾ ಪಂಚಾಯಿತಿಯ ವೀರಶೈವ ಮುಖಂಡರಾದ ಗುರುಸಿದ್ದಪ್ಪ, ಸುರೇಶ್, ಯುವ ಮುಖಂಡ ದಿಲೀಪ್ ಕುಮಾರ್ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆರೆಹಳ್ಳಿ ನವೀನ, ಮುಕ್ಕಡಹಳ್ಳಿ ರವಿಕುಮಾರ್, ಉದಯಕುಮಾರ್, ಗಿರೀಶ್ ಹರವೆ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ ಮುಖಂಡರಿಗೆ ಕಾಂಗ್ರೆಸ್ ಯುವ ಮುಖಂಡ ಗಣೇಶ ಪ್ರಸಾದ್ ಪಕ್ಷದ ಶಾಲು ಹಾಗೂ ಹೂವಿನ ಹಾರಹಾಕಿ ಬರಮಾಡಿಕೊಂಡರು.
ಈ ವೇಳೆ ಕಾಂಗ್ರೆಸ್ ಯುವ ಮುಖಂಡ ಗಣೇಶ ಪ್ರಸಾದ್ ಮಾತನಾಡಿ, ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಯುವಕರು ಪಕ್ಷದಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಹರವೇ ಭಾಗದಲ್ಲಿ ಕಾಂಗ್ರೆಸ್ ಸದೃಢವಾಗಿದ್ದು, ಮುಂದಿನ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಜಿಪಂ ಸದಸ್ಯರಾದ ಕೆರೆಹಳ್ಳಿ ನವೀನ ಮಾತನಾಡಿ, ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಈಗಿನಿಂದಲೇ ಸಿದ್ದತೆ ನಡೆಸಬೇಕು. ನಮ್ಮ ಸರ್ಕಾರ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡುವ ಕೆಲಸವಾಗಬೇಕು. ಇದಕ್ಕೆ ಸ್ಥಳೀಯ ಮುಖಂಡರು ಹೆಚ್ಚಿನ ಸಹಕಾರ ನೀಡಬೇಕು ಎಂದು ಕೋರಿದರು.
ಗ್ರಾಪಂ ಸದಸ್ಯರಾದ ದೇವಮಣಿ ಸಿದ್ದನಾಯಕ, ನಟರಾಜು, ಗ್ರಾಪಂ ಮಾಜಿ ಸದಸ್ಯರಾದ ಪ್ರಕಾಶ್, ನಾಗೇಶ್, ನಂಜುಂಡಸ್ವಾಮಿ, ಮಹದೇವಯ್ಯ, ದೊಡ್ಡಕೂಸು, ಶಿಕ್ಷಕ ಮಾದಪ್ಪ, ರವಿ, ಪ್ರವಿಣ್, ಹರವೇ ಮಲ್ಲು, ಮಹದೇವಸ್ವಾಮಿ, ಕಾಂಗ್ರೆಸ್ ಯುವ ಮುಖಂಡ ಸಿದ್ದು, ಇತರರು ಮುಖಂಡರು.
ವರದಿ: ಬಸವರಾಜು ಎಸ್ ಹಂಗಳ