ಹನಗೋಡು: ಇಲ್ಲಿನ ರಸಗೊಬ್ಬರ ಹಾಗೂ ಕ್ರಿಮಿನಾಶಕ ಮಾರಾಟ ಅಂಗಡಿಗಳ ಮೇಲೆ ಹುಣಸೂರು ಕೃಷಿ ಸಹಾಯಕ ನಿರ್ಧೇಶಕ ವೆಂಕಟೇಶ್ ದಿಢೀರ್ ದಾಳಿ ನಡೆಸಿ ಅಂಗಡಿಗಳಲ್ಲಿರುವ ದಾಸ್ತಾನು ಹಾಗೂ ಮಾರಾಟ ರಶೀತಿಗಳ ಪರಿಶೀಲನೆ ನಡೆಸಿದರು.
ಹನಗೋಡಿನಲ್ಲಿ ಕೊರೋನಾ ಲಾಕ್ ಡೌನ್ ವೇಳೆ ಕೆಲ ರಸಗೊಬ್ಬರ ಅಂಗಡಿಗಳಲ್ಲಿ ಹೊಸ ದರದ ಗೊಬ್ಬg ಚೀಲ ತೋರಿಸಿ ಹಳೇ ದರದ ಗೊಬ್ಬರ ನೀಡುತ್ತಿದ್ದಾರೆ. ಅಲ್ಲದೆ ರಸಗೊಬ್ಬರ ಹಾಗೂ ಕ್ರಿಮಿನಾಶಕ ಗಳಿಗೆ ಬಿಲ್ ನೀಡದೇ ಹೆಚ್ಚಿನ ಬೆಲೆ ತೆಗೆದುಕೊಳ್ಳತ್ತಿದ್ದಾರೆ ಎಂಬ ದೂರಿನ ಮೇರೆಗೆ ಹುಣಸೂರು ಕೃಷಿ ಸಹಾಯಕ ನಿದೆಶಕ ವೆಂಕಟೇಶ್ ಅವರು ದಿಢೀರ್ ದಾಳಿ ನಡೆಸಿ ಎಲ್ಲ ಅಂಗಡಿಗಳಲ್ಲಿರುವ ದಾಸ್ತಾನು ಹಾಗೂ ಮಾರಾಟ ಮಾಡಿರುವುದಕ್ಕೆ ಬಿಲ್ ನೀಡಿರುವ ಬಗ್ಗೆ ಪರಿಶೀಲಿಸಿದರು.
ಈ ವೇಳೆ ಕೆಲ ಅಂಗಡಿಗಳಲ್ಲಿ ಬಿಲ್ ನೀಡದೆ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದ್ದು ಅಂತಹ ಅಂಗಡಿ ಮಾಲೀಕರಿಗೆ ಎಚ್ಚರಿಕೆಯೊಂದಿಗೆ ಶೋಕಾಶ್ ನೋಟಿಸ್ ನೀಡಿ, ಎಲ್ಲ ರಸಗೊಬ್ಬರ ಅಂಗಡಿಗಳ ಮುಂದೆ ಅಂಗಡಿಯಲ್ಲಿ ಹಾಲಿ ಇರುವ ರಸಗೊಬ್ಬರ ಹಾಗೂ ಕ್ರಿಮಿನಾಶಕಗಳ ದಾಸ್ತಾನುಗಳ ವಿವರ ಹಾಗೂ ನಿಗದಿತ ದರಪಟ್ಟಿಯನ್ನು ಅಳವಡಿಸಿರಬೇಕು. ಹಳೆ ದಾಸ್ತಾನುವಿರುವ ರಸಗೊಬ್ಬರವನ್ನು ಹಳೆ ದರಕ್ಕೆ, ಹೊಸ ದರವಿರುವ ಗೊಬ್ಬರವನ್ನು ಹೊಸ ದರಕ್ಕೆ ಮಾರಾಟ ಮಾಡಿ ರಶೀತಿ ನೀಡಬೇಕು. ರೈತರಿಗೆ ರಸಗೊಬ್ಬರ ಹಾಗೂ ಕ್ರೀಮಿನಾಶಕಗಳ ಮಾರಾಟದಲ್ಲಿ ವಂಚನೆ ಮಾಡುತ್ತಿರುವ ಬಗ್ಗೆ ದೂರು ಬಂದರೆ ಅಂತಹ ಅಂಗಡಿಗಳ ವ್ಯಾಪಾರ ಪರವಾನಗಿಯನ್ನು ರದ್ದು ಪಡಿಸಲಾಗುವುದೆಂದು ಎಚ್ಚರಿಕೆ ನೀಡಿದರು.

By admin