ಚಾಮರಾಜನಗರ: ಗ್ರಾಮದಲ್ಲಿನ ಜನತೆ ಮೃತಪಟ್ಟರೇ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲು ಜಾಗವಿಲ್ಲ. ಕೃಷಿಚಟುವಟಿಕೆಗಳಿಗೆ ಜಮೀನಿಗೆ ತೆರಳುವ ಕೃಷಿಕರಿಗೆ ನೀರುನಿಂತು ತೊಂದರೆಯಾಗಿದ್ದು, ಕೂಡಲೇ ಪರ್ಯಾಯ ಕ್ರಮಕ್ಕೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ತಾಲೂಕಿನ ದೊಡ್ಡಮೋಳೆ ಗ್ರಾಮದ ಗ್ರಾಮಸ್ಥರು ಶಾಸಕ ಸಿ.ಪುಟ್ಟರಂಗಶೆಟ್ಟಿಗೆ ಮನವಿ ಮಾಡಿದರು.
ತಾಲೂಕಿನ ಹರದನಹಳ್ಳಿ ಗ್ರಾಮದ ಮರಗದಕೆರೆ, ಚಿಕ್ಕಕೆರೆ, ಸಿಂಡಿಗೆರೆ, ದೊಡ್ಡಕೆರೆಯಿಂದ ನೀರು ಬಿಟ್ಟವೇಳೆ ದೊಡ್ಡ,ಮೋಳೆ ಗ್ರಾಮದ ಮಧ್ಯೆ ನೀರು ನಿಲ್ಲುತ್ತಿದೆ. ಈ ನೀರು ಸ್ಮಶಾನಜಾಗದಲ್ಲಿ ನಿಲ್ಲುತ್ತಿದೆ. ಇದರಿಂದ ಗ್ರಾಮಸ್ಥರು ಮೃತದೇಹವನ್ನು ಅಂತ್ಯಕ್ರಿಯೆ ಮಾಡಲು ದಾರಿಯಿಲ್ಲದಂತಾಗಿರುವ ಸ್ಥಿತಿಯಿದೆ, ಗ್ರಾಮಕ್ಕೆ ಸಂಬಂಧಪಟ್ಟ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜತೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿನೀಡಿ, ಪರಿಸ್ಥಿತಿಯನ್ನು ಅವಲೋಕಿಸಿದರು.
ಇದೇವೇಳೆ ಅವರು ಶಾಸಕರು’ ಸ್ಮಶಾನ ಸೇರಿದಂತೆ ಕೃಷಿಜಮೀನುಗಳಿಗೆ ತೆರಳುವ ಸಾರ್ವಜನಿಕರ ಅನೂಕೂಲಕ್ಕಾಗಿ ಪರ್ಯಾಯ ರಸ್ತೆಮಾರ್ಗ ಕಲ್ಪಿಸಬೇಕು, ಗ್ರಾಮದ ಮಧ್ಯೆ ನೀರುನಿಲ್ಲದಂತೆ ಕ್ರಮಕೈಗೊಳ್ಳುವಂತೆ ಶಾಸಕರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಪಂ ಮಾಜಿಸದಸ್ಯ ಪುಟ್ಟಸ್ವಾಮಿ, ನಿಗಮದ ಎಇಇ ಮಂಜುನಾಥ್, ಎಂಜಿನಿಯರ್ ಗಳಾದ ಮಹದೇವಸ್ವಾಮಿ, ಅವಿನಾಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.