ಹೌದು, ರಿಷಬ್ ಶೆಟ್ಟಿ ಈಗ ತಂದೆಯಾಗಿದ್ದಾರೆ. ಅವರ ಪತ್ನಿ ಪ್ರಗತಿ ಶೆಟ್ಟಿ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.


ಇಷ್ಟೇ ಚಂದದ ಮಗಳು ಹುಟ್ಟಿದ್ದಾಳೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಬರೆದುಕೊಂಡು ದಂಪತಿ ಇಬ್ಬರು ಒಟ್ಟಿಗೆ ಇರುವ (photo) ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ಹಂಚಿಕೊಂಡಿದ್ದಾರೆ. ಈ ಫೆÇೀಟೋವನ್ನು ನೋಡಿದ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕವಾಗಿ ಶುಭಕೋರುತ್ತಿದ್ದಾರೆ.

ರಿಷಬ್ ಹಾಗೂ ವೃತ್ತಿಯಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿರುವ ಪ್ರಗತಿ ಅವರು ಕಳೆದ 2017 ರ ಫೆಬ್ರುವರಿ 9 ರಂದು ಕುಂದಾಪುರದಲ್ಲಿ ಮದುವೆಯಾಗಿದ್ದರು. ಗರುಡ ಗಮನ ವೃಷಭ ವಾಹನದ ಯಶಸ್ಸಿನ ನಂತರ ಶೆಟ್ರು ಬೆಲ್ ಬಾಟಮ್ 2 ಹಾಗೂ ಕಾಂತಾರಾಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.