ಮೈಸೂರು: ಸೈಕಲ್ ಪ್ಯೂರ್ ಅಗರಬತ್ತಿ ತಯಾರಕರಾದ ಎನ್. ರಂಗರಾವ್ ಅಂಡ್ ಸನ್ಸ್ (ಎನ್‌ಆರ್‌ಆರ್‌ಎಸ್) ಸಂಸ್ಥೆಯು ಇಪ್ಪತ್ತೊಂದು ದಿನಗಳ ಪಿತೃತ್ವ ರಜೆಯನ್ನು ಪ್ರಕಟಿಸುವ ಮೂಲಕ ಗಮನಸೆಳೆದಿದೆ.

ನೂತನ ಅಪ್ಪಂದಿರು ತಮ್ಮ ನವಜಾತ ಶಿಶುವಿನೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಅವಕಾಶವನ್ನು ಪೂರೈಸಲಿದೆ. ಜೊತೆಗೆ ಅವರು ಈ ಸಮಯದಲ್ಲಿ ತಮ್ಮ ಪತ್ನಿಯರಿಗೆ ಬೆಂಬಲ ನೀಡಬಹುದಾಗಿರುತ್ತದೆ. ಈ ನೀತಿಯು ಜೂನ್ ೨೦ ರಿಂದ ಜಾರಿಗೆ ಬರಲಿದೆ. ಇದರೊಂದಿಗೆ ಶಿಶುವಿನ ಆರೈಕೆಯಲ್ಲಿ ಸಂಪೂರ್ಣವಾಗಿ ತೊಡಗಿರಲು ವೇತನ ಸಹಿತ ಮೂರು ವಾರಗಳ ಸಮಯವನು ಕಂಪನಿಯು ಕೆಲಸ ಮಾಡುತ್ತಿರುವ ತಂದೆಯರಿಗೆ ನೀಡಲಿದೆ.

ಬಹಳ ಕಾಲದಿಂದ ಪಿತೃತ್ವ ರಜೆ ಎನ್ನುವ ಚಿಂತನೆ ಭಾರತದಲ್ಲಿ ಇರಲಿಲ್ಲ. ಪುರುಷರಿಗೆ ಪಿತೃತ್ವ ರಜೆಯ ನೀತಿಯನ್ನು ಯಾವುದೇ ಸರ್ಕಾರ ಕಡ್ಡಾಯ ಮಾಡಿಲ್ಲ. ಅವರಿಗೆ ಸಾಮಾನ್ಯವಾಗಿ ಸರ್ಕಾರಿ ಕ್ಷೇತ್ರದಲ್ಲಿ ಒಂದು ಅಥವಾ ಎರಡು ವಾರಗಳ ವೇತನ ಸಹಿತ ರಜೆಯನ್ನು ಸಾದರಪಡಿಸಲಾಗುತ್ತದೆ. ಖಾಸಗಿ ಕ್ಷೇತ್ರದಲ್ಲಿ ಇದು ಕಂಪನಿಯಿಂದ ಕಂಪನಿಗೆ ವ್ಯತ್ಯಾಸವಾಗುತ್ತದೆ. ಬಹುತೇಕ ಸಂಸ್ಥೆಗಳು ಅಪ್ಪಂದಿರಿಗೆ ವೇತನ ಸಹಿತ ರಜೆಯನ್ನು ನೀಡುವುದಿಲ್ಲ.

ಪತ್ನಿಯರಿಗೆ ಮತ್ತು ಅವರ ಶಿಶುಗಳಿಗೆ ಅತ್ಯಂತ ಅಗತ್ಯವಾಗಿರುವ ಸಂದರ್ಭದಲ್ಲಿ ಸಾಕಷ್ಟು ಪ್ರಮಾಣದ ವೇತನ ಸಹಿತ ರಜೆಯನ್ನು ಅಪ್ಪಂದಿರುವ ಪಡೆಯುವ ಖಾತ್ರಿ ಮಾಡಿಕೊಳ್ಳುವಂತಹ ಈ ಪಿತೃತ್ವ ರಜೆ ನೀತಿ ಎಂಬುದು ಸೈಕಲ್ ಪ್ಯೂರ್‌ಅಗರಬತ್ತಿಸಂಸ್ಥೆ ಕೈಗೊಂಡಿರುವ ಸ್ವಾಗತಾರ್ಹ ನಡೆ ಎನ್ನುವುದರಲ್ಲಿ ಎರಡು ಮಾತಿಲ್ಲ

By admin