ಮೈಸೂರು: ಶ್ರೀ ಸುತ್ತೂರು ಶಾಖಾಮಠದ ಉದ್ಯಾನದಲ್ಲಿ ಬ್ರಹ್ಮಕಮಲ ಗಿಡಗಳಲ್ಲಿ ಹೂಗಳು ಬಿಟ್ಟು ಶೋಭಿಸುತ್ತಿವೆ.
ಶ್ರೀಮಠದ ಉದ್ಯಾನದಲ್ಲಿರುವ ಒಂದೇ ಬ್ರಹ್ಮಕಮಲದ ಗಿಡದಲ್ಲಿ ಸುಮಾರು 45 ರಿಂದ 50 ಕ್ಕೂ ಹೆಚ್ಚು ಪುಷ್ಪಗಳು ಅರಳಿ ಎಲ್ಲರ ಮನಸೂರೆಗೊಂಡಿವೆ. ಇಂತಹ ಅಪರೂಪದ ದೃಶ್ಯವನ್ನು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸಹಿತ ಶ್ರೀಮಠದ ಸೇವಾ ಸಿಬ್ಬಂದಿಗಳೆಲ್ಲ ನೋಡಿ ಸಂತೋಷಪಡುತ್ತಿದ್ದಾರೆ.
ಬ್ರಹ್ಮಕಮಲದ ಬಗ್ಗೆ ನೋಡುವುದಾದರೆ ಇದರ ವೈಜ್ಞಾನಿಕ ಹೆಸರು ಎಪಿಫಿಲ್ಲಮ್ ಆಕ್ಸಿಪೆಟಲಮ್ ಇದು ಕ್ಯಾಕ್ಟೆಸಿ ಕುಟುಂಬಕ್ಕೆ ಸೇರಿದ ಹೂ ಬಿಡುವ ಆರ್ಕಿಡ್ ಕಳ್ಳಿ. ಕನ್ನಡದಲ್ಲಿ ಬ್ರಹ್ಮಕಮಲ ಅಥವಾ ಇರಳುದಾವರೆ ಎಂದು ಪ್ರಸಿದ್ಧಿಯಾಗಿದೆ. ಸುವಾಸನೆಯಿಂದ ಕೂಡಿದ ಬಿಳಿಬಣ್ಣದ ಹೂವುಗಳು ಸರಾಸರಿ 30 ಸೆಂ.ಮೀ ಉದ್ದ 17 ಸೆಂ.ಮೀ ಅಗಲ ಇರುತ್ತವೆ. ಒಂದು ಎಲೆಯಿಂದ ಗಿಡವಾಗಿ ಬೆಳೆಯುತ್ತಾ ತನ್ನ ಮೈ ತುಂಬೆಲ್ಲಾ ಹೂವುಗಳನ್ನು ಬಿಡುತ್ತದೆ. ಬ್ರಹ್ಮಕಮಲದ ಹೂವು ಅರಳುವ ಪ್ರಕ್ರಿಯೆಯೇ ಅತ್ಯಂತ ವಿಸ್ಮಯಕಾರಿಯಾಗಿದೆ. ಹಿಮಾಲಯದ ಶ್ರೇಣಿಗಳಲ್ಲಿ ಈ ಹೂಗಳು ಹೆಚ್ಚಾಗಿ ಕಂಡು ಬರುತ್ತವೆ. ಉತ್ತರಪ್ರದೇಶ ಮತ್ತು ಉತ್ತರಾಖಾಂಡ ರಾಜ್ಯಗಳ ರಾಜ್ಯಪುಷ್ಪವಾಗಿದೆ.