ಚಾಮರಾಜನಗರ: ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಶಂಕರ್ ಅವರನ್ನು ನಗರದ ಜಿಲ್ಲಾ ವಕೀಲರಸಂಘದ ಕಚೇರಿಯಲ್ಲಿ ಉಪ್ಪಾರಸಮುದಾಯದ ಮುಖಂಡರಿಂದ ಸನ್ಮಾನಿಸಲಾಯಿತು.
ಸರಳ ಕಾರ್ಯಕ್ರಮದಲ್ಲಿ ಉಪ್ಪಾರ ಸಮುದಾಯದ ಮುಖಂಡ ಚಾ.ಹ.ರಾಮು ಮಾತನಾಡಿ, ಅಂಬೇಡ್ಕರ್ ಹೇಳಿರುವಂತೆ ಯಾರೂ ಸಹ ಅದೃಷ್ಟ ನಂಬಿ ಕೂರಬಾರದು, ಎಲ್ಲರೂ ಪರಿಶ್ರಮದಿಂದ ಮುಂದೆ ಬರಬೇಕು, ಸಮುದಾಯದ ವಿದ್ಯಾರ್ಥಿಗಳು ಉನ್ನತಮಟ್ಟದ ವಿದ್ಯಾಭ್ಯಾಸ ಪಡೆದು, ಅತ್ಯುನ್ನತವಾದ ಸರಕಾರಿ ಹುದ್ದೆಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಸ್ವಾಮಿ, ವಕೀಲರಾದ ದಲಿತ್‌ರಾಜ್, ನಾಗರಾಜೇಂದ್ರ, ಚನ್ನಿಪುರಮೋಳೆಯ ಚಿನ್ನಸ್ವಾಮಿ, ಮಹದೇವು, ಸಿ.ಎಂ.ಕೆಂಪರಾಜು, ಸುರೇಶ್, ಶ್ರೀಕಂಠಮೂರ್ತಿ, ದೊಡ್ಡಮೋಳೆ ರಂಗಸ್ವಾಮಿ ಹಾಜರಿದ್ದರು.
