ಎಚ್.ಡಿ.ಕೋಟೆ, ಸರಗೂರು ಶ್ರೀ ರತ್ನಾಕರ ವಾಲ್ಮೀಕಿ ತಾಲೂಕು ನಾಯಕರ ಯುವ ವೇದಿಕೆಯ ೨೦೨೧ನೇ ಸಾಲಿನ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಡಾ.ನಿಂಗನಾಯಕ, ಡಾ.ಕೆಂಡಮ್ಮ, ರಾಜ್ಯ ಪ್ರಶಸ್ತಿ ವಿಜೇತ ಆಗತ್ತೂರು ಜವರನಾಯಕ ಅವರನ್ನು ಸನ್ಮಾನಿಸಲಾಯಿತು.

ಸರಗೂರು: ಪ್ರತಿಯೊಬ್ಬರೂ ಸೇವೆ ಮನೋಭಾವವನ್ನು ಮೈಗೂಢಿಸಿಕೊಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಮುನ್ನುಗ್ಗಬೇಕು ಎಂದು ಶಾಸಕ ಅನಿಲ್ ಚಿಕ್ಕಮಾಧು ತಿಳಿಸಿದರು.
ಪಟ್ಟಣದಲ್ಲಿ ನಡೆದ ಶ್ರೀ ರತ್ನಾಕರ ವಾಲ್ಮೀಕಿ ತಾಲೂಕು ಯುವ ವೇದಿಕೆಯ ೨೦೨೧ನೇ ಸಾಲಿನ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ದಿನದರ್ಶಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಂಪಾದನೆಯೇ ಮನುಷ್ಯನ ಬದುಕಾಗಬಾರದು. ಸಂಪಾದನೆಯೊAದಿಗೆ ಸೇವಾಮನೋಭಾವವನ್ನೂ ಬೆಳೆಸಿಕೊಳ್ಳಬೇಕು. ಇದರಿಂದ ಬಡವರು, ಶೋಷಿತರು ಸಬಲರಾಗಲು ಸಾಧ್ಯ. ಇಂಥ ಕೆಲಸವನ್ನು ರತ್ನಾಕರ ವಾಲ್ಮೀಕಿ ಯುವ ವೇದಿಕೆ ಕಳೆದ ಮೂರು ವರ್ಷಗಳಿಂದ ಮಾಡಿಕೊಂಡು ಬರುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಅವರು ಹೇಳಿದರು.

ವೇದಿಕೆಯ ಅಧ್ಯಕ್ಷ ಮುಳ್ಳೂರು ಗೋವಿಂದನಾಯಕ ಮಾತನಾಡಿ, ನಾಯಕ ಸಮಾಜದ ಅಭಿವೃದ್ಧಿಗೆ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅದು ಸಮಾಜದ ಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು. ಇದನ್ನು ಜನಾಂಗದ ಯುವ ಸಮೂಹ ಮಾಡಿದರೆ ಒಳಿತಾಗಲಿದೆ ಎಂದರು.

ವೇದಿಕೆಯ ಅಧ್ಯಕ್ಷ ಮುಳ್ಳೂರು ಗೋವಿಂದನಾಯಕ ಅಧ್ಯಕ್ಷತೆ ವಹಿಸಿದ್ದರು. ನಾಯಕರ ಸಂಘದ ಅಧ್ಯಕ್ಷ ಶಂಭುಲಿ0ಗನಾಯಕ, ಗೌರವಾಧ್ಯಕ್ಷ ಎಂ.ಸಿ.ದೊಡ್ಡನಾಯಕ, ಯುವ ಮುಖಂಡ ಬೀಚನಹಳ್ಳಿ ಜಯಪ್ರಕಾಶ್, ಕನಕಪ್ರಶಸ್ತಿ ವಿಜೇತ, ಉದ್ಯಮಿ ಬಾಬುನಾಯಕ್, ಹನುಮನಾಯಕ, ವೇದಿಕೆಯ ಪದಾಧಿಕಾರಿಗಳಾದ ಕೋಳಿರಾಜು, ವೀರಭದ್ರನಾಯಕ, ಆರ್.ಚಲುವನಾಯಕ, ಎಸ್.ಚಂದ್ರು, ನಿಂಗರಾಜು, ವೆಂಕಟಚಲ, ರವಿಕುಮಾರ್, ವಿಜಯ್‌ಪ್ರಕಾಶ್, ರವಿ, ಎಂ.ಜವರಾಜು, ನವೀನ್‌ಕುಮಾರ್, ಸದಾಶಿವ, ಬಸಪ್ಪ, ಸ್ವಾಮಿ, ಸೋಮೇಶ್, ಸಣ್ಣಸ್ವಾಮಿನಾಯಕ ಸೇರಿದಂತೆ ಇನ್ನಿತರರು ಹಾಜರಿದ್ದರು.

 

ಇದೇ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಡಾ.ನಿಂಗನಾಯಕ, ಡಾ.ಕೆಂಡಮ್ಮ, ರಾಜ್ಯ ಪ್ರಶಸ್ತಿ ವಿಜೇತ ಆಗತ್ತೂರು ಜವರನಾಯಕ ಅವರನ್ನು ಸನ್ಮಾನಿಸಲಾಯಿತು.

By admin