ಕುವೆಂಪು ನಗರದಲ್ಲಿರುವ ಆದಿಚುಂಚನಗಿರಿ ರಸ್ತೆಯಲ್ಲಿ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ 76 ನೇ ವರ್ಷದ ಜಯಂತಿಯನ್ನು ಆಚರಿಸಲಾಯಿತು ಪುಷ್ಪನಮನ ಸಲ್ಲಿಸಿ ಮಾತನಾಡಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್ ವಿ ರಾಜೀವ್ ಆಕಾಶಕ್ಕೆ ಆಕಾಶವೇ ಸರಿಸಮಾನ. ಅಂತೆಯೇ ಬಾಲಗಂಗಾಧರನಾಥ ಸ್ವಾಮೀಜಿ ಸಾಧನೆಯ ಹಾದಿ ಬಲು ದೊಡ್ಡದು. ಶ್ರೀಗಳು ಹಾಕಿಕೊಟ್ಟ ದಾರಿಯಂತೆ ಅವರ ಆದರ್ಶಗಳನ್ನು ಪಾಲಿಸಿಕೊಂಡು ಹೋಗುತ್ತಿರುವ ನಿರ್ಮಲಾನಂದನಾಥ ಸ್ವಾಮೀಜಿಯೂ ಅವರ ಸಾಲಿನಲ್ಲಿ ನಿಲ್ಲುತ್ತಾರೆ. ಶ್ರೀಗಳು ಒಂದು ಜನಾಂಗಕ್ಕೆ, ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೇ ಎಲ್ಲಾ ಜನಾಂಗ ಹಾಗೂ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿದ ಮಹಾನ್ ಸಾಧಕರಾಗಿದ್ದಾರೆ’ ಎಂದರು.

ನಂತರ ವಿಜಯನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಬಾಲಕೃಷ್ಣ ಮಾತನಾಡಿ ಕಾಲಾತೀತ ಸಾಧಕರು ಪುಜ್ಯ ಶ್ರೀ ಬಾಲಗಂಗಾಧರನಾಥ ಶ್ರೀ ಗಳು ಕರ್ನಾಟಕಕಂಡ ಅವತಾರ ಪುರುಷರಲೊಬ್ಬರು ಆದಿ ಚುಂಚನಗಿರಿ ಕ್ಷೇತ್ರ ಶ್ರೀ ಗಳ ಪ್ರವೇಶ ದಿಂದ ಪವಾಡವೆಂಬಂತೆ ಇಡೀ ದೇಶದ ಜನರ ಗಮನ ಸೆಳೆದಿದೆ ಚುಂಚನಗಿರಿಯನ್ನು ಚಿನ್ನದಗಿರಿ ಎಂಬಂತೆ ಮರು ಸೃಷ್ಠಿ ಸಿದ್ದಾರೆ.ಶ್ರೀ ಗಳು ಧಾರ್ಮಿಕ ದೃಷ್ಟಿಯಲ್ಲಿ ಜಗದ್ಗುರುಗಳು ಎನಿಸಿಕೊಂಡಿದ್ದರು ಅವರು ಸೇವೆಯೇ ಪೂಜೆಎಂದು ಭಾವಿಸಿದ ಜನಮುಖ ಚಿಂತಕರು ಆಗಿದ್ದರು.ಮಠಗಳು ಇರುವುದು ಗುರುಗಳಿಗಲ್ಲಾ .ಜನರಿಗೆ ಎಂಬುವುದು ಅವರ ಆಧರ್ಶವಾಗಿತ್ತು. ಈ ಜನರಲ್ಲಿ ಶೋಷಿತರು ದಲಿತರು ಅನಕ್ಷರಸ್ಥರು ರೈತರು ಮುಂತಾದ ನಿರ್ಲಿಕ್ಷಿತರ ಬಗ್ಗೆ ಸ್ಪಂದಿಸುವ ಹಂಬಲವುಳ್ಳವರಾಗಿದ್ದರು.
ನಂತರ ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ ಮಾತನಾಡಿ
ಬಾಲಗಂಗಾಧರನಾಥ ಶ್ರೀ ಗಳು ಮಹಾಕನಸುಗಾರರು 1974 ರಲ್ಲಿ ಶ್ರೀ ಕ್ಷೇತ್ರದ 71ನೇ ಪೀಠಾಧ್ಯಕ್ಷರಾಗಿ ಸಮಾಜಕ್ಕೆ ಅರ್ಪಿಸಿಕೊಂಡರು.ಕೇವಲ ಶಿಶುವಿಹಾರ.ಪ್ರಾರ್ಥಮಿಕ ಶಿಕ್ಷಣದ ಶಾಲೆಗೆ ಸೀಮಿತಗೊಂಡಿದ್ದ ಶ್ರೀ ಕ್ಷೇತ್ರದ ಶಿಕ್ಷಣಾಕ್ಷೇತ್ರವನ್ನು ಪ್ರೌಢಶಾಲೆಗಳು ಕಾಲೇಜು .ಅನಾಥಾಲಯಗಳು.ವಸತಿ ಶಿಕ್ಷಣಾ ಸಂಸ್ಥೆ. ಇಂಜಿನಿಯರಿಂಗ್ ವೈಧ್ಯಕೀಯ . ಜಾಗತೀಕ ಗುಣಮಟ್ಟದ ಬಿಜಿಎಸ್ ಆಸ್ಪತ್ರೆಗಳು .ಇತ್ತೀಚಗೆ ಬಿಜಿಎಸ್ ವಿಶ್ವವಿದ್ಯಾಲಯ ಅಂತಾಹ ರೂಪಿಸಿದ ಹೆಗ್ಗಳಿಕೆ ಶ್ರೀ ಗಳದ್ದು.
ಒಬ್ಬ ವ್ಯಕ್ತಿಯ ಜಿವಿತಾವದಿಕಾಲದಲ್ಲಿ ಇದೆಲ್ಲಾ ಸಾಧ್ಯವೇ ? ಎಂದು ಆಶ್ಚರ್ಯ ಪಡುವುವವರಿಗೆ ಸಾಧಿಸಿ ತೋರಿಸಿದವರು

ಇದೇ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಎಚ್ ವಿ ರಾಜೀವ್ ,ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ,ಒಕ್ಕಲಿಗರ ಸಂಘದ ಅಧ್ಯಕ್ಷರಾದ ಮಂಜುಗೌಡ ,ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ,ವಿಜಯನಗರ ಪೊಲೀಸ್ ವೃತ್ತ ನಿರೀಕ್ಷಕರಾದ ಬಾಲಕೃಷ್ಣ ,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮೀದೇವಿ ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ , ಬಾಲಗಂಗಾಧರನಾಥ ಸ್ವಾಮಿ
ಭಕ್ತವೃಂದ ಸಂಚಾಲಕರುಗಳಾದ ಕುಮಾರ್ ಗೌಡ ,ವಿನಯ್ ಬಾಬು ,ಚರಣ್ ರಾಜ್ ,ಬೆಟ್ಟೇಗೌಡ , ಆನಂದ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ , ಜಿ ಎಂ ಪಂಚಾಕ್ಷರಿ ,ದೇವರಾಜ್, ಸುಚೇಂದ್ರ ,ಸಂತೋಷ್ ಗೌಡ,ರವೀಂದ್ರ , ಮೋಹನ್ ಕುಮಾರ್ ಗೌಡ ,ವಿನಯ್ ಕಣಗಾಲ್ ,ಗೋಪಾಲ್ ,ಹಾಗೂ ಇನ್ನಿತರರು ಹಾಜರಿದ್ದರು.

By admin