ಚಾಮರಾಜನಗರ: ಸಾಂಸ್ಕೃತಿಕ ನಗರಿ ಮೈಸೂರುನ್ನು ವಿಶ್ವದ ಆಧ್ಯಾತ್ಮಿಕ ನಗರವಾಗಿ ನಿರ್ಮಿಸಿದ ಕೀರ್ತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ ಸಲ್ಲುತ್ತದೆ. ವೇದಾಂತ, ಹಿಂದು ಸ್ಮೃತಿ, ಸಂಗೀತ ಚಿಕಿತ್ಸೆ, ಸತ್ಸಂಗ, ಬೋನ್ಸಾಯಿ ಸಮಾವೇಶದ ಮೂಲಕ ಇಡೀ ವಿಶ್ವಕ್ಕೆ ಮಾರ್ಗದರ್ಶನ ನೀಡಿ ವಿಶ್ವಶಾಂತಿಯನ್ನು ಬೆಳೆಸುತ್ತಿರುವ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಲೋಕದ ಮಾರ್ಗದರ್ಶಿ ತಪಸ್ವಿಗಳು ಎಂದು ರಾ? ಯುವ ಪ್ರಶಸ್ತಿ ಪುರಸ್ಕೃತ, ಜೈಹಿಂದ್ ಪ್ರತಿ?ನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈ ಹಿಂದ್ ಪ್ರತಿ?ನ ಹಾಗೂ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಅವಧೂತ ದತ್ತ ಪೀಠದ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ೮೦ನೇ ವರ್ಧಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಇಡೀ ವಿಶ್ವದ ಎಲ್ಲ ದೇಶಗಳನ್ನು ಸಂಚಾರ ಮಾಡಿ ಭಾರತದ ವೇದಾಂತ, ವೇದಾಂಗ, ಮಹಾಕಾವ್ಯ, ಧರ್ಮಸೂತ್ರ, ಪುರಾಣ, ಹಿಂದು ಸ್ಮೃತಿ ಹಾಗೂ ಸಂಗೀತ ಚಿಕಿತ್ಸೆಯ ಮೂಲಕ ವಿಶ್ವದಲ್ಲೇ ಭಾರತದ ಕೀರ್ತಿಯನ್ನು ಹರಡಿರುವ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಶ್ರೇ? ದಾರ್ಶನಿಕರು ಹಾಗೂ ತಪಸ್ವಿಗಳೆಂದು ಇವರ ೮೦ನೇ ವಧಂತಿ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರಿಗೆ ಇವರ ಮಾರ್ಗದರ್ಶನ ಶಕ್ತಿ ಮತ್ತು ಸ್ಪೂರ್ತಿ ಅಗತ್ಯವೆಂದು ತಿಳಿಸಿದರು.
ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ವಿಶ್ವಶಾಂತಿ ಗಾಗಿ ಶ್ರಮಿಸುತ್ತಿರುವ ಮಹಾ ಮಾನವತಾವಾದಿ. ಪ್ರಕೃತಿ , ಹಾಗೂ ಪಕ್ಷಿ ಪ್ರಿಯರಾದ ಸ್ವಾಮೀಜಿಯವರು ಶುಖವನ ಆರಂಭಿಸುವ ಮೂಲಕ ಸಾವಿರಾರು ಪಕ್ಷಿಗಳ ರಕ್ಷಕರಾಗಿದ್ದಾರೆ. ಶುಖವನ, ಬೋನ್ಸಾಯಿ ಸಂರಕ್ಷಣೆ ಹಾಗೂ ಸಾಮೂಹಿಕ ಹನುಮಾನ್ ಚಾಲೀಸದ ಮೂಲಕ ವಿಶ್ವ ದಾಖಲೆಗಳನ್ನು ಸೃಷ್ಟಿಸಿ, ಮೈಸೂರು ನಗರವನ್ನು ವಿಶ್ವದಲ್ಲಿ ಬೆಳಗುವಂತೆ ಮಾಡಿದ ಮಹಾನ್ ಆಧ್ಯಾತ್ಮ ಪುರು?ರು ಎಂದು ಋಗ್ವೇದಿ ತಿಳಿಸಿದರು.
ಜೈ ಹಿಂದ್ ಪ್ರತಿ?ನದ ನಿರ್ದೇಶಕರಾದ ದಿನೇಶ್ ರವರು ಗಣಪತಿ ಸಚ್ಚಿದಾನಂದ ಸ್ವಾಮೀಜಿ ವಧಂತಿ ಮಹೋತ್ಸವ ಉದ್ಘಾಟಿಸಿದರು. ಗಣಪತಿ ಸಚ್ಚಿದಾನಂದ ಸ್ವಾಮಿಜಿ ಅವರು ಮಹಾಸಂತರು.ತಮ್ಮ ದಿವ್ಯ ಜ್ಞಾನ ಹಾಗೂ ಅನುಭವದ ಮೂಲಕ ಲಕ್ಷಾಂತರ ಭಕ್ತರನ್ನು ಹೊಂದಿರುವ ಸ್ವಾಮೀಜಿಯವರ ಅವಧೂತ ದತ್ತ ಪೀಠ ಸರ್ವರಿಗೂ ಆಧ್ಯಾತ್ಮಿಕ ಚಿಂತನೆ ಮತ್ತು ಸ್ಪೂರ್ತಿಯನ್ನು ಬೆಳೆಸುತ್ತಿದೆ. ಮೈಸೂರು ನಗರದ ಮಹಾನ್ ಆಶ್ರಮವಾಗಿ ಭಾರತದ ಸನಾತನ ಧರ್ಮವನ್ನು ಹಾಗೂ ದಿವ್ಯಶಕ್ತಿಯನ್ನು ಬೆಳೆಸುತ್ತಿರುವ ಮಹಾನ್ ಚೇತನ ಎಂದು ತಿಳಿಸಿದರು.
ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಶಿಕ್ಷಕರಾದ ಸುರೇಶ್ ಜೋಷಿ, ಶ್ರೀಮತಿ ವಿಜಯಲಕ್ಷ್ಮಿ, ಜೈಹಿಂದ್ ಪ್ರತಿ?ನದ ಕುಸುಮ, ಝಾನ್ಸಿಮಕ್ಕಳ ಪರಿ?ತ್ ಅಧ್ಯಕ್ಷರಾದ ಶ್ರಾವ್ಯ ಋಗ್ವೇದಿ ಉಪಸ್ಥಿತರಿದ್ದರು.
