ಮಹೇಶ್ ನಾಯಕ್.(ವರದಿ)
ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಈಗ ನಮ್ಮ-ನಿಮ್ಮೆಲ್ಲರ ಮನೆಯಲ್ಲೇ ತಯಾರಿಸುವ ಅಡುಗೆ
ರೀತಿ ರುಚಿ-ಶುಚಿಯ ರೀತಿಯಲ್ಲಿ ಹೊರಗಡೆ ಹೋಟೆಲ್ ಒಂದರಲ್ಲಿ ದೊರೆಯುತ್ತದೆ ಎಂದರೆ ಹೇಗಿರಬೇಡ. ಹೌದು, ಈಗ ಮೈಸೂರಿಗರಿಗೆ ಸಿಹಿ ಸುದ್ದಿ ಎಂದರೆ ಅದು ಇದೇ. ಮೈಸೂರಿನ ಪಾಠ್‍ಶಾಲಾ ವೃತ್ತದ ಬಳಿ ಬಹು ದೊಡ್ಡ ಬೇಕರಿ ಎಂದರೆ ವಿ.ಬಿ. ಬೇಕರಿ ಇಲ್ಲಂತೂ ಯಾವಾಗಲೂ ಜನರ ಗಿಜಿಗಿಜಿ ಇದ್ದೇ ಇರುತ್ತದೆ. ಇದರ ಪಕ್ಕದಲ್ಲೇ ಈಗ “ಬ್ಯಾಹ್ಮಿನ್ಸ್ ದೋಸಾ ಪಾಯಿಂಟ್” ಶುರುವಾಗಿದ್ದು, ಇಲ್ಲಿ ಪ್ರತಿ ನಿತ್ಯ ಬೆಳಿಗ್ಗೆ 11.30 ರಿಂದ ರಾತ್ರಿ 10 .ರ ತನಕ ತೆರಿದಿರುತ್ತದೆ.ಎಲ್ಲರ ಕೈಗೆಟಕುವ ದರದಲ್ಲಿ ಲಭ್ಯ.
ಗ್ರಾಹಕರಿಗೆ ರುಚಿ, ಶುಚಿ ಹಾಗೂ ಗುಣಮಟ್ಟದ ತಿಂಡಿ- ತಿನಿಸುಗಳನ್ನು ಪೂರೈಸುವ ಬದ್ಧತೆ ಹೊಂದಿರುವ ಯಾವುದೇ ಹೋಟೆಲ್ ಯಶಸ್ಸಿನ ಉತ್ತುಂಗ ಏರುತ್ತದೆ. ಇದೇ ತತ್ವವನ್ನು ಅಳವಡಿಸಿಕೊಂಡು ಗ್ರಾಹಕ ಸ್ನೇಹಿ ಹೋಟೆಲ್ ಸ್ಥಾಪಿಸಿ, ಜನರ ಉದರ ತಣಿಸುತ್ತಿದ್ದಾರೆ
ಹೊಟೇಲ್ ಮಾಲೀಕರಾದ ಅಶೋಕ್ ಹೇಳುವಂತೆ, ಕಳೆದ 20 ವರ್ಷಗಳಿಂದ ಇವರು ಕೇಟರಿಂಗ್ ಮಾಡುತ್ತಿದ್ದು, ಆವಾಗಿನಿಂದಲೂ ಹೋಟೆಲ್ ತೆರೆಯಬೇಕೆಂಬ ಕನಸು ಇವರಿತ್ತು, ಆದರೆ ಕೈಗೊಡಿರಲಿಲ್ಲ ಆದರೆ ಈಗ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೇಟರಿಂಗ್ ಕೆಲಸದಿಂದ ಸ್ವಲ್ಪ ವಿರಾಮ ಸಿಕ್ಕ ಸಮಯದಲ್ಲಿ ಇವರ ಕನಸಾದ ಹೋಟೆಲ್ ಉದ್ಯಮ “ಬ್ಯಾಹ್ಮಿನ್ಸ್ ದೋಸಾ ಪಾಯಿಂಟ್” ರ ರೂಪದಲ್ಲಿ ನನಸಾಗಿದ್ದು, ಜೊತೆಗೆ ಅರಮನೆ ನಗರಿ ಮೈಸೂರು ಎಂಬ ಖ್ಯಾತಿಗೆ ಒಳಗಾಗಿರುವ ಅರಮನೆ ಸ್ವಲ್ಪ ಅಂತರದಲ್ಲೇ ಹೋಟೆಲ್ ಶುರು ಮಾಡುವ ಭಾಗ್ಯವು ಇವರಿಗೆ ದೊರೆತಿದೆ.
“ಬ್ಯಾಹ್ಮಿನ್ಸ್ ದೋಸಾ ಪಾಯಿಂಟ್” ಹೆಸರೇ ಹೇಳುವಂತೆ
ಸೆಟ್ ದೋಸೆ ಹಾಗೂ ರವೆ ದೋಸೆ ಹೆಚ್ಚಾಗಿ ಮಾರಾಟವಾಗುತ್ತದೆ. ಮಧ್ಯಾಹ್ನ 12ರಿಂದ ಊಟ ಸಿಗುತ್ತದೆ. ಇದಲ್ಲದೆ, ಮೊಸರನ್ನ, ರವಾ ಇಡ್ಲಿ, ಚಪಾತಿ ಲಭ್ಯ ಎಂದು ಹೋಟೆಲ್ ಮಾಲೀಕ
ತಿಳಿಸಿದರು
ಅಶೋಕ್ ಮಸಾಲೆ ದೋಸೆ, ಈರುಳ್ಳಿ ದೋಸೆ, ಘೀ-ದೋಸೆ, ಮಂಗಳೂರು ಉಪ್ಪುಹುಳಿ ದೋಸೆ, ಸಾದಾ ದೋಸೆ, ಸೆಟ್ ದೋಸೆ, ಜೊತೆಗೆ ಇಡ್ಲಿ-ಚಟ್ನಿ ಸಾಂಬಾರ್, ರೈಸ್‍ಬಾತ್, ಮೇಲುಕೋಟೆ ಪುಳಿಯೋಗರೆ, ಘೀ-ರೈಸ್, ಟಮೋಟೋ ಬಾತ್ ಇನ್ನೀತರೆ ತಿಂಡಿಗಳು ದೊರೆಯುತ್ತವೆ. ಇದರ ಜೊತೆಗೆ ಈಗ ಈಗ ಬರ್ಜರಿ ಬಾಳೆ ಎಲೆ ಬೋಜನ ಕೂಡ ಲಭ್ಯವಿದೆ. ಬಾಳೆ ಎಲೆಯಲ್ಲಿ ಊಟ ಮಾಡಿದರೆ ಆರೋಗ್ಯವು ಸುಧಾರಿಸುತ್ತದೆ ಜೊತೆಗೆ ಊಟದಲ್ಲಿ ರುಚಿ ರುಚಿಯಾದ ಚಪಾತಿ, ವೆಜ್ ಪಲ್ಯ, ಚಿತ್ರಾನ್ನ, ಕುರ್ಮ, ಅನ್ನ-ಸಾಂಬಾರ್, ಮದ್ರಾಸ್ ರಸಂ, ಕೋಸಂಬರಿ, ಹಪ್ಪಳ, ಉಪ್ಪಿನಕಾಯಿ, ಪಾಯಸ, ಮೊಸರು ಮತ್ತು ಮಸಾಲ ಮಜ್ಜಿಗೆ ಇವಿಷ್ಟು ಈಗ ಬ್ಯಾಹ್ಮಿನ್ಸ್ ದೋಸಾ ಪಾಯಿಂಟ್ ತಮ್ಮರಿಗೂ ಕೈಗೆಟಕುವ ದರದಲ್ಲೇ ಲಭ್ಯವಿದೆ.
ಅರಮನೆಗೆ ಬರುವ ಪ್ರವಾಸಿಗರ ಹಾಗೂ ಮೈಸೂರಿಗೆ ಬರುವ ಎಲ್ಲರಿಗೂ “ಬ್ಯಾಹ್ಮಿನ್ಸ್ ದೋಸಾ ಪಾಯಿಂಟ್” ಹತ್ತಿರವಿದ್ದು ಎಲ್ಲರಿಗೂ ಅನುಕೂಲವಾಗಬಹುದು ಎಂಬ ಸಂತೋಷ ಅಶೋಕ್ ರವರದ್ದಾಗಿದೆ. ಹೋಟೆಲ್ ತೆರೆದ ನಾಲ್ಕೇ ದಿನಕ್ಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ “ಬ್ಯಾಹ್ಮಿನ್ಸ್ ದೋಸಾ ಪಾಯಿಂಟ್”ನಲ್ಲಿ ಪುಳಿಯೋಗರೆ ಗೊಜ್ಜು, ಸಾಂಬಾರ್-ರಸಂ ಪುಡಿ, ಬಿಸಿಬೇಳೇಬಾತ್ ಪುಡಿ, ವಾಂಗೀಬಾತ್ ಪುಡಿ, ಚಟ್ನಿ ಪುಡಿ, ಮಡ್ರಾಸ್ ರಸಂ ಪುಡಿ ಇನ್ನೀತರೇ ಪದಾರ್ಥಗಳೂ ಇಲ್ಲಿ ದೊರೆಯುತ್ತದೆ.
ನಾವು ಈ ಹೋಟೆಲ್ನ ಕಾಯಂ ಗ್ರಾಹಕರು. ದಿನಕ್ಕೆ ಎರಡು ಬಾರಿಯಾದರೂ ಈ ಹೋಟೆಲ್ಗೆ ಬರುತ್ತೇವೆ. ಇದು ಮತ್ತೊಂದು ಮನೆಯಂತಾಗಿದ್ದು, ಇಲ್ಲಿ ಸಿಗುವ ಎಲ್ಲ ತಿಂಡಿ, ಊಟ ನಮಗೆ ಇಷ್ಟ
ಮೇಲಕೋಟೆ ಸಕ್ಕರೆ ಪೊಂಗಲ್ ಕ್ಷೀರ ಅನ್ನ ಪೈನಾಪಲ್ ಜೆಲೇಬಿ ಹಲ್ವಾ ಶ್ಯಾವಿಗೆ ಇಡ್ಲಿ ಖಾರ ಕಡಬು ಸಿಹಿ ಕಡಬು ಇನ್ನೂ ಹೊಸ ಬಗೆಯ ತಿಂಡಿ ತಿನಿಸು ತಯಾರು ಮಾಡುತ್ತಾರೆ. ಇನ್ನೂ ವಿಶೇಷ ಅಂದರೆ ಇಲ್ಲಿಇ ಬಾಳೆ ಹೋಳಿಗೆ ಮ್ಯಾಂಗೋ ಹೋಳಿಗೆ ಖರ್ಜುರ್ ಹೋಳಗೆ ಇಲ್ಲಿ ಪ್ರಸಿದ್ದ ತಿನಿಸುಗಳು.
ಮನೆಯಲ್ಲಿ ಮಾಡುವ ಥರ ಇರುತ್ತದೆ ಹಾಗೂ ಮನೆಯಲ್ಲಿ ಅಡುಗೆ ಮಾಡದ ಸಂಧರ್ಭದಲ್ಲಿ ನಾವು ಇಲ್ಲಿಗೆ ಬಂದು ತಿನ್ನಲು ಬರುತ್ತಿವಿ ಕುಟಂಬ ಸಮೇತರಾಗಿಯು ಕೂಡ ಬರುತ್ತೀವಿ,ಎಂದು ಶ್ರೀ ಕಾಂತ್ ಸುಣ್ಣದಕೇರಿ ನಿವಾಸಿ ತಿಳಿಸಿದರು.
ಸಂಪರ್ಕಿಸಿ.8747016188