ಚಾಮರಾಜನಗರ: ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ವಿವಿಧ ರಸ್ತೆ ಮತ್ತು ಚರಂಡಿ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಮೊದಲಿಗೆ ತಾಲ್ಲೂಕಿನ ಮಂಗಲ ಗ್ರಾಮ ದೂಡ್ಡರಾಯಪೇಟೆ ಕೂಡ್ಡೂರು ಹಾಗೂ ಜಾಲಹಳ್ಳಿ ಹುಂಡಿ ಗ್ರಾಮಗಳಲ್ಲಿ ವಿಶೇಷ ಅಭಿವೃದ್ದಿ ಯೋಜನೆಯಡಿ ರಸ್ತೆ ಹಾಗೂ ಚರಡಿ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಮಂಗಲ ಗ್ರಾಮದ ಉಪ್ಪಾರ ಬಡಾವಣೆಯಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ದಿ ಕಾಮಗಾರಿಗೆ ೯೦ಲಕ್ಷ ರೂ ದೂಡ್ಡರಾಯಪೇಟ್ಟೆ ಉಪ್ಪಾರ ಹಾಗೂ ಲಿಂಗಾಯಿತರ ಬೀದಿಗೆ ರಸ್ತೆ ಅಭಿವೃದ್ದಿಗೆ ೩೦ಲಕ್ಷ ರೂ ಕೂಡ್ಡೂರು ಗ್ರಾಮದ ಉಪ್ಪಾರ ಬೀದಿಗೆ ೫೦ಲಕ್ಷ ರೂ ಮೂಡಲ ಮೂಳೆ ಗ್ರಾಮಕ್ಕೆ ೮೦ಲಕ್ಷರೂಗಳಲ್ಲಿ ಗುದ್ದಲಿಪೂಜೆ ನೆರವೇರಿಸಲಾಗಿದೆ ಎಂದರು.
ಈ ಮೂಲಕ ಜನರ ರಸ್ತೆ ಸಂಪರ್ಕವನ್ನು ಉತ್ತಮಗೊಳಿಸಿ ರೈತರಿಗೆ, ಸಾರ್ವಜನಿಕರಿಗೆ ಉತ್ತಮ ರಸ್ತೆ ನಿರ್ಮಿಸಲಾಗುತ್ತಿದೆ. ಅದೇ ರೀತಿ ಮೂಲಭೂತ ಸೌಕಾರ್ಯಗಳಾದ ಕುಡಿಯುವ ನೀರು, ವಸತಿಗಳಂತಹ ಅಭಿವೃದ್ದಿ ಕಾರ್ಯಗಳಿಗೂ ಹೆಚ್ಚು ಗಮನಹರಿಸಿದ್ದು ಕ್ಷೇತ್ರ ವ್ಯಾಪ್ತಿಯಲ್ಲಿ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದೆ.
ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಬೇಕಾದ ರಸ್ತೆ, ಕುಡಿಯುವ ನೀರು, ವಸತಿ, ಸಮುದಾಯ ಭವನಗಳು ಸೇರಿದಂತೆ ಬಡವರ, ಶೋಷಿತರ, ಹಿಂದುಳಿದವರ ಪರವಾಗಿ ಸಾಮಾಜಿಕ ನ್ಯಾಯದಡಿ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಮಂಗಲ ಗ್ರಾ,ಪಂ ಅಧ್ಯಕ್ಷ ಚಿನ್ನತಾಯಮ್ಮ ಕೂಡ್ಡೂರು ಗ್ರಾ,ಪಂ ಅಧ್ಯಕ್ಷೆ ರೇಣುಕಾ ಗ್ರಾ,ಪಂ ಸದಸ್ಯರಾದ ಅಣ್ಣಪ್ಪಸ್ವಾಮಿ, ಸುರೇಶ್, ಮಹದೇವಸ್ವಾಮಿ, ಸಿದ್ದರಾಜು, ಮಹದೇವಸ್ವಾಮಿ, ,ಚಂದ್ರು, ಜ್ಯೋತಿ, ಯೋಗೇಶ್ವರಿ, ಮಹೇಶ್ವರಿ ,ಮುಖಂಡರಾದ ಕ್ಯಾತಶಟ್ಟರು, ಗಡಿಯಜಮಾನ ಕೃಷ್ಣ,ಮಾಜಿ ಗ್ರಾ,ಪಂ ಮಾಜಿ ಅಧ್ಯಕ್ಷ ಶಿವಣ್ಣ, ಮಂಜು, ನಾರಾಯಣ್ಣಸ್ವಾಮಿ, ರವಿ ರವಿಗೌಡಮೂರ್ತಿ, ಜೋಸಪ್ ರಮೇಶ್ ಇಂಜಿನಿಯರ್ ಮಧುಸೋದನ್ ಹಾಗೂ ಗ್ರಾ.ಪಂ ಸದಸ್ಯರುಗಳು, ಗ್ರಾಮದ ಮುಖಂಡರುಗಳು ಭಾಗವಹಿಸಿದ್ದರು.
