ಶಾಟ್ ಪುಟ್ ಎಸೆತದಲ್ಲಿ ಒಂದು ಕಂಚಿನ ಪದಕ ಪಡೆದು ಸಾಧನೆ ಡಾ. ಸಂದೀಪ್ ಕೆ.ಟಿ
ಮೈಸೂರು-೭ ನಾಸಿಕ್‌ನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಮಂಡ್ಯದ ಡಾ. ಸಂದೀಪ್ ಕೆ.ಟಿ. ಇವರು ಎರಡು ಚಿನ್ನದ ಪದಕ ಒಂದು ಕಂಚಿನ ಪದಕ ಗೆದ್ದು ಏಷ್ಯನ್ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ೩೫ ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಹ್ಯಾಮರ್ ಎಸೆತ, ಡಿಸ್ಕಸ್ ಎಸೆತದಲ್ಲಿ ತಲಾ ಒಂದೊಂದು ಚಿನ್ನದ ಪದಕ ಹಾಗೂ ಶಾಟ್ ಪುಟ್ ಎಸೆತದಲ್ಲಿ ಒಂದು ಕಂಚಿನ ಪದಕ ಪಡೆದು ಸಾಧನೆ ಮಾಡಿರುತ್ತಾರೆ.

ಮುಂಬರುವ ಏಷ್ಯನ್ ಮಾಸ್ಟರ್ ಅಥ್ಲೇಟಿಕ್ ಕ್ರೀಡಾಕೂಟವು ಇಂಡೋನೇಷಿಯಾದ ಜಕಾರ್ತದಲ್ಲಿ ನಡೆಯಲಿದ್ದು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಇದಕ್ಕಾಗಿ ಅಂತರರಾಷ್ಟ್ರೀಯ ಕ್ರೀಡಾಪಟು ಶ್ರೀ ಎಂ.ಪಿ.ಚಂದ್ರಶೇಖರ್ ಹಾಗೂ ಶ್ರೀ ರವಿ.ಟಿ.ಎಸ್. ಅಸಿಸ್ಟೆಂಟ್ ಡೈರೆಕ್ಟರ್, ಫಿಸಿಕಲ್ ಎಜುಕೇಶನ್, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಇವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಪಡೆಯುತ್ತಿರುತ್ತಾರೆ.