ಚಾಮರಾಜನಗರ: ತಾಲೂಕಿನ ವೆಂಕಟಯ್ಯನಛತ್ರ ಗ್ರಾಮದಲ್ಲಿ ಉಪ್ಪಾರ ಸಮುದಾಯದಿಂದ ಅಂಕದ ಕಲ್ಲು ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಿತು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗಾ ತಾಲೂಕಿನ ಬ್ರಹ್ಮವಿದ್ಯಾನಗರದಲ್ಲಿರುವ ಭಗೀರಥದ ಮಠ ಚಿನ್ಮೂಲಾದ್ರಿ ಶಿಲಾಪುರಿ ಉಪ್ಪಾರ ಸಂಸ್ಥಾನದ ಪೂಜ್ಯ ಗುರುಗಳಾದ ಶ್ರೀ ಡಾ.ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂಕ ಪ್ರತಿಷ್ಠಾಪನೆಯೂ ಎಲ್ಲಾ ದೇವತೆಯ ಸ್ಮರಣೆ. ಮೂರ್ತಿ ದೈವ ಸಂಕೋಲಾ ಆಯಾರ ಆರೋಗ್ಯ ದೇವಾಲಯ ನಿಲ್ಲಿಸುವ ಮೂಲಕ ಗ್ರಾಮಗಳಲ್ಲಿ ಅಂಕ ಪ್ರತಿಷ್ಠಾನೆ ಇಟ್ಟು ಕೊಂಡಿರುತ್ತಾರೆ ಎಂದರು.
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟಿದ್ದಾರೆ. ಹಿಂದುಳಿದ ವರ್ಗದವರು ಸಂಘಟಿತರಾಗಿ ಸಂಘಟನೆ ಮುಖ್ಯ ಎಂದರು.
ಸಂಸ್ಕಾರದಿಂದ ಏನಾದರೂ ಬದಲಾವಣೆ ಕಂಡರೆ ಜ್ಯೋತಿ, ಜ್ಞಾನದ ಸಂಕೇತ. ಸುಜ್ಞಾನದ ಸಂಕೇತ. ಸುಜ್ಞಾನದ ಆತ್ಮ ಜ್ಯೋತಿ ಬೆಳಗಿಸಿಕೊಡಬೇಕೆಂದು ಡಾಕ್ಟರ್ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿಗಳು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು, ಮಾರಿ, ಮಸಣಿ ಹಾಗೂ ವಾಂತಿಭೇದಿ ಬರುವ ಸಾಧ್ಯತೆ ಇರುತ್ತದೆ. ಅದನ್ನು ತಡೆಗಟ್ಟಲು ನಾವು ಮಾಡಿಕೊಂಡಿರುವ ಕಟ್ಟುಪಾಡುಗಳೇ ಅಂಕ ಪ್ರತಿಷ್ಠಾನೆ ಎಂದು ಹೇಳಿದರು.
ನಾವು ೨೨ನೇ ಶತಮಾನದಲ್ಲಿ ಇದ್ದೇವೆ. ಎಲ್ಲಾ ಸಮಾಜಗಳು ಒಗ್ಗಟ್ಟಿನಲ್ಲಿ ಮಾಡಿದರೆ ಇನ್ನೂ ಉತ್ತಮವಾಗಿರುತ್ತಿತ್ತು. ಎಲ್ಲ ಸಮುದಾಯದವರು ಒಗ್ಗಟ್ಟಾಗಿದ್ದರೆ ಯಾವ ಕುಂದು ಕೊರತೆಯೂ ಸಹ ಬರುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಸರಗೂರು ಅಯ್ಯನ ಮಠದ ಮಹದೇವಸ್ವಾಮಿಗಳು, ಮಂಗಲ ೮೮ ಗಡಿ ಮನೆ ಪೀಠಾಧ್ಯಕ್ಷರಾದ ಶ್ರೀ ಮಂಜುನಾಥ ಸ್ವಾಮಿಗಳು, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ರಂಗಸ್ವಾಮಿ, ಮುಖಂಡರಾದ ಚಿನ್ನಸ್ವಾಮಿ, ಮಾಜಿ ಜಿಪಂ ಅಧ್ಯಕ್ಷರಾದ ಸಿಎ ಮಹಾದೇವ ಶೆಟ್ಟಿ, ಮಾಜಿ ತಾಲೂಕ ಪಂಚಾಯತಿ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿಕ್ಕಮಹಾದೇವ, ವೆಂಕಟಯ್ಯನ ಛತ್ರ ಯಜಮಾನರು ಹಾಗೂ ಗ್ರಾಮಸ್ಥರು ಜನಪ್ರತಿನಿಧಿಗಳು ಹಾಗೂ ಮುಖಂಡರುಗಳು ಹಾಜರಿದ್ದರು.